ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗುಜರಾತ್, ಹಿ. ಪ್ರ ಚುನಾವಣೆ ಪ್ರಕಟ
ಭಾರತೀಯ ಚುನಾವಣಾ ಆಯೋಗವು ಬಹು ನಿರೀಕ್ಷಿತ ಗುಜರಾತ ಮತ್ತು ಹಿಮಾಚಲ ಪ್ರದೇಶಗಳ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಯ ವೇಳಾ ಪಟ್ಟಿಯ ಪ್ರಕಟವನ್ನು ಇಂದು ಬಿಡುಗಡೆ ಮಾಡಿತು.

ಮಾಧ್ಯಮಗಳ ಎದುರು ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಎನ್ ಗೋಪಾಲಸ್ವಾಮಿ ಅವರು, ಗುಜರಾತ್ ವಿಧಾನ ಸಭೆಗೆ ಡಿಸೆಂಬರ್ 11 ಮತ್ತು 16 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು. ಅದೇ ರೀತಿ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ನವ್ಹಂಬರ್ 14 ಮತ್ತು ಡಿಸೆಂಬರ್ 19ರಂದು ನಡೆಯಲಿದೆ ಎಂದು ಹೇಳಿದರು.

ಗುಜರಾತ್ ವಿಧಾನಸಭೆಯ ಚುನಾವಣಾ ಫಲಿತಾಂಶ, ಡಿಸೆಂಬರ್ 23ರಂದು ಪ್ರಕಟಗೊಳ್ಳಲಿದ್ದು, ಹಿಮಾಚಲ ಪ್ರದೇಶದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಸರಕಾರ ಯಾವುದು ಎಂದು ಡಿಸೆಂಬರ್ 28 ರಂದು ತಿಳಿಯಲಿದೆ.

ಮುಕ್ತ ಮತ್ತು ನ್ಯಾಯಯುತ ವಿಧಾನ ಸಭೆಯ ಚುನಾವಣೆ ನಡೆಯುವುದಕ್ಕೆ ಆಯೋಗ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದು, ಗುಜರಾತ್‌ನಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ಯಾರಾ ಮಿಲಿಟರಿ ಪಡೆಯನ್ನು ಬಳಸಿಕೊಳ್ಳಲಾಗುವುದು. ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಗುಜರಾತ್ ಸೂಕ್ಷ್ಮವಾಗಿರುವುದರಿಂದ ಹೆಚ್ಚಿನ ಅರೆ ಮಿಲಿಟರಿ ಪಡೆಗಳ ನಿಯೋಜನೆಗೆ ಚುನಾವಣಾ ಆಯೋಗ ಮುಂದಾಗಿದೆ.

ಎರಡು ರಾಜ್ಯಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುವುದು. ಗುಜರಾತ್ ರಾಜ್ಯದಲ್ಲಿ ಪ್ರತಿಶತ 81 ರಷ್ಟು ಮತದಾರರ ಬಳಿ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಪತ್ರವಿದ್ದರೆ, ಹಿಮಾಚಲ ಪ್ರದೇಶದಲ್ಲಿ ಶೇ 71 ರಷ್ಟು ಮತದಾರರು ಗುರುತಿನ ಚಿಟಿ ಹೊಂದಿದ್ದಾರೆ.
ಮತ್ತಷ್ಟು
ಶಾಂತಿ, ಸ್ನೇಹ ಸಂದೇಶದ "ಪೀಸ್ ಬೋಟ್"
ತಾಜ್ ಕಾರಿಡಾರ್:ಸುಪ್ರೀಂಕೋರ್ಟ್ ನಕಾರ
ಅಣು ಒಪ್ಪಂದ: ಕಾಂಗ್ರೆಸ್. ಎಡಪಕ್ಷಗಳ ಇನ್ನೊಂದು ಸಭೆ
ಚುನಾವಣೆ ಕಹಳೆ ಮೊಳಗಿಸಿದ ಮಾಯಾವತಿ
ದಾರಾ ಸಿಂಗ್‌ ಜಾಮೀನಿಗೆ ನಕಾರ
ಪರಮಾಣು ಬಿಕ್ಕಟ್ಟು: ಅ.22ರಂದು ಮರುಚರ್ಚೆ