ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
"ಜೀವಿತೋಂ ಕಾ ಶ್ರದ್ಧಾಂಜಲಿ" ಕಾರ್ಯಕ್ರಮ
ಉತ್ತರಪ್ರದೇಶದಲ್ಲಿ "ಜೀವಂತವಿರುವರಿಗೆ ವಿಷಾದ ಮತ್ತು ಸತ್ತವರಿಗೆ ಕೇಶಮುಂಡನ"ದ ಒಂದು ವಿನೂತನ ರೀತಿಯ ಕಾರ್ಯಕ್ರಮವನ್ನು ನವೆಂಬರ್ 30ರಂದು ಲಿವಿಂಗ್ ಡೆಡ್ ಸಂಘಟನೆ ಹಮ್ಮಿಕೊಳ್ಳಲಿದೆ.

ಭ್ರಷ್ಟ ಸರ್ಕಾರಿ ಅಧಿಕಾರಿಗಳು ಮತ್ತು ಭೂಮಾಫಿಯಾ ನಡುವೆ ಸಖ್ಯವನ್ನು ಪ್ರತಿಭಟಿಸುವ ಸಲುವಾಗಿ ಈ ಕಾರ್ಯಕ್ರಮ. ಭ್ರಷ್ಟ ಅಧಿಕಾರಿಗಳು ಸರ್ಕಾರಿ ದಾಖಲೆಗಳಲ್ಲಿ ಕೆಲವು ಜನರು ಸತ್ತಿದ್ದಾರೆಂದು ತೋರಿಸಿ ಪ್ರಭಾವಿಗಳು ಅವರ ಭೂಮಿಯನ್ನು ಕಬಳಿಸಲು ನೆರವಾಗುತ್ತಿದ್ದರು.

ಈ ಜನರ ಹಕ್ಕುಗಳ ರಕ್ಷಣೆ ಸಲುವಾಗಿ ಈ ಸಂಘಟನೆಯನ್ನು ರೂಪಿಸಲಾಗಿದೆ. 2003ರಲ್ಲಿ ಬ್ರಹ್ಮ ಭೋಜ್ ಕಾರ್ಯಕ್ರಮ ಸೇರಿದಂತೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ಅದು ಹಮ್ಮಿಕೊಂಡಿತ್ತು.

ಮರ್ದೋ ಕಾ ಮುಂಡನ್‌-ಜೀವಿತೊಂ ಕಾ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತಾವಿನ್ನೂ ಜೀವಂತವಿದ್ದೇವೆಂದು ಕಾನೂನಿನ ಹೋರಾಟ ನಡೆಸಿರುವವರು ಸೇರಿದಂತೆ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಮೃತಕ್ ಸಂಘ್ ರಾಷ್ಟ್ರೀಯ ಅಧ್ಯಕ್ಷ ಲಾಲ್ ಬಿಹಾರಿ ಮೃತಕ್ ತಿಳಿಸಿದರು.

ಅಕ್ರಮ ಮಾರ್ಗಗಳ ಮೂಲಕ ಬಡವರ ಜಮೀನು ಕಬಳಿಸುವ ಸರ್ಕಾರಿ ಕಂದಾಯ ಅಧಿಕಾರಿಗಳು ಮತ್ತು ಮತ್ತು ಭೂಮಾಫಿಯಾ ನಡುವೆ ಸಖ್ಯದ ಬಗ್ಗೆ ಗಮನಸೆಳೆಯಲು ವಿಧಾನಸಭೆಯ ಎದುರು ಈ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ಹೇಳಿದರು.

ಏತನ್ಮಧ್ಯೆ, ಬಾಲಿವುಡ್ ನಿರ್ದೇಶಕ ಸತೀಶ್ ಕೌಶಿಕ್ ಲಾಲ್ ಬಿಹಾರಿ ಮೃತಕ್ ಸಿಂಗ್ ಜೀವನವನ್ನು ಆಧರಿಸಿ ಚಿತ್ರ ನಿರ್ಮಾಣ ಮಾಡಲಿದ್ದಾರೆ.
ಮತ್ತಷ್ಟು
ಚುನಾವಣೆ ಸಾಧ್ಯತೆಯೇ ಇಲ್ಲ: ಲಾಲೂ
ರೋಗಿಯ ಹೃದಯದಲ್ಲಿ ಸ್ಕ್ರೂ ಬಿಟ್ಟ ವೈದ್ಯರು
ಕಫೀಲ್ ಅಹ್ಮದ್ ಗುರುತು ಪತ್ತೆ
ಗುಜರಾತ್, ಹಿಮಾಚಲಪ್ರದೇಶದ ಚುನಾವಣಾ ವೇಳಾಪಟ್ಟಿ ಘೋಷಣೆ
ಮಧ್ಯಂತರ ಚುನಾವಣೆ ತಳ್ಳಿಹಾಕಿದ ಕಾಂಗ್ರೆಸ್
ಗುಜರಾತ್, ಹಿ. ಪ್ರ ಚುನಾವಣೆ ಪ್ರಕಟ