ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಾಂಧವ್ಯ ವೃದ್ಧಿಗೊಳಿಸಲು ಪ್ರಯತ್ನ:ಸಿಂಗ್
ಎಲ್ಲಾ ಸಮಸ್ಯೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಭಾರತ ಮತ್ತು ಭಾರತ ಮತ್ತು ಪಾಕಿಸ್ತಾನದ ಸಂಬಂಧವನ್ನು ಯಥಾಸ್ಥಿತಿಗೆ ತರಲು ಎರಡೂ ದೇಶಗಳು ಕಠಿಣ ಶ್ರಮ ಪಡಬೇಕು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಎರಡೂ ದೇಶಗಳು ಉತ್ತಮ ಬಾಂಧವ್ಯವನ್ನು ಬೆಳೆಸಲು ನಾನು ಸಲಹೆ ನೀಡುತ್ತೇನೆ. ಯಾವುದೇ ಉತ್ತಮ ಅವಕಾಶಗಳು ಬಂದರೂ, ದೇಶಗಳ ನಡುವಿನ ಬಾಂಧವ್ಯವನ್ನು ವೃದ್ಧಿಗೊಳಿಸಲು ಈ ಅವವಕಾಶದ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತೇವೆ ಎಂದು ಪ್ರಧಾನಿ ಅವರು ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಐದು ದಿನಗಳ ಪ್ರವಾಸದಿಂದ ಹಿಂತಿರುಗುವ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಹೇಳಿದರು.

ನೂತನ ರಾಜಕೀಯ ನಿಯಮಗಳಿಂದ ಪಾಕಿಸ್ತಾನದಲ್ಲಿ ಬಿಕ್ಕಟ್ಟು ಉಂಟಾಗಿದ್ದರೂ, ಭಾರತ ಮತ್ತು ಪಾಕಿಸ್ತಾನವು ಉತ್ತಮ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಸಂಬಂಧ ಮುರಿಯಲು ಕಾರಣವಾಗುವ ಎಲ್ಲಾ ಸಮಸ್ಯೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ಯಥಾಸ್ಥಿತಿಗೆ ಮರಳಲು ಎರಡೂ ದೇಶಗಳು ಕಠಿಣ ಶ್ರಮ ಪಡಬೇಕು ಎಂದು ಅವರು ಹೇಳಿದರು.
ಮತ್ತಷ್ಟು
ಆನೆಗಳಿಗೆ ಮೈಕ್ರೊಚಿಪ್ ಅಳವಡಿಕೆ
ದುರ್ಗಾ ಪೂಜೆ:ರಾಷ್ಟ್ರಪತಿ ಶುಭಾಶಯ
ಬೋಗಿಯಲ್ಲಿ ಬೆಂಕಿ:ಒಬ್ಬ ವ್ಯಕ್ತಿ ಸಾವು
ವಿಷಪೂರಿತ ಆಹಾರ: ಇನ್ನೂ 7 ಮಂದಿ ಸಾವು
ಜಯಾ ಆರೋಪದ ವಿರುದ್ಧ ಹಕ್ಕು ಚ್ಯುತಿ
ಸ್ಲೀಪರ್ ಕೋಚ್‌ಗಳಲ್ಲಿ ಮಧ್ಯದ ಬರ್ತ್