ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಂದಿಗ್ರಾಮದಲ್ಲಿ ಘರ್ಷಣೆ:10 ಮಂದಿಗೆ ಗಾಯ
ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿತ ಭೂಮಿ ಉಚ್ಚತ್ ಪ್ರತಿರೋಧ್ ಸಮಿತಿಯ ಬೆಂಬಲಿಗರ ನಡುವೆ ಸೋಮವಾರ ರಾತ್ರಿಯಿಂದ ಸಂಭವಿಸಿದ ಘರ್ಷಣೆಯಲ್ಲಿ ಪೊಲೀಸರೊಬ್ಬರು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನಂದಿಗ್ರಾಮದೊಳಗೆ ಪ್ರವೇಶಿಸಲು ಯತ್ನಿಸಿದಾಗ ಅವರ ಮೇಲೆ ಗುಂಡು ಹಾರಿಸಲಾಗಿ ಪೊಲೀಸರೊಬ್ಬರು ಗಾಯಗೊಂಡರು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಎಸ್. ಪಾಂಡಾ ವರದಿಗಾರರಿಗೆ ತಿಳಿಸಿದರು. ಪುನಃ ನಡೆದ ಹಿಂಸಾಚಾರದಲ್ಲಿ 7 ಸಿಪಿಎಂ, ಒಬ್ಬ ಬಿಯುಪಿಸಿ ಕಾರ್ಯಕರ್ತ ಮತ್ತು ಪೊಲೀಸನೊಬ್ಬ ಕೂಡ ಗಾಯಗೊಂಡಿದ್ದಾನೆ.

ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಸತೇಂಗಾಬಾರಿ ಮತ್ತು ರಾಣಿಚಕ್ ಗ್ರಾಮಗಳಲ್ಲಿ ಅನೇಕ ಮಂದಿ ವಲಸೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ಎರಡೂ ಕಡೆಯಿಂದ ಗುಂಡಿನ ಕಾಳಗ ಸ್ಥಗಿತಗೊಂಡಿದ್ದರೂ, ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದೆ.

ಏತನ್ಮಧ್ಯೆ, ಬಿಯುಪಿಸಿ ಸದಸ್ಯ ಮಿಲಾನ್ ಪ್ರಧಾನ್ ಸಿಆರ್‌ಪಿಎಫ್ ಪಡೆಯನ್ನು ಸಿಪಿಐ ನಿಯಂತ್ರಿತ ಖೇಜುರಿಯಲ್ಲಿ ನಿಯೋಜಿಸಬೇಕೆಂದು ಒತ್ತಾಯಿಸಿದೆ. ಹಿಂದೆ ಗಲಭೆಗೆ ಪ್ರಚೋದನೆಯಾದ ಖೇಜುರಿಯಲ್ಲಿ ಸಿಆರ್‌ಪಿಎಫ್ ನಿಯೋಜಿಸಬೇಕೆಂದು ಅವರು ಒತ್ತಾಯಿಸಿದರು.

ನಂದಿಗ್ರಾಮದಲ್ಲಿ ಯಾವುದೇ ಕೇಂದ್ರದ ಪಡೆ ನಿಯೋಜಿಸುವುದಕ್ಕೆ ಬಿಯುಪಿಸಿ ಪ್ರತಿರೋಧ ವ್ಯಕ್ತಪಡಿಸಿದೆ. ಇಲ್ಲಿ ಸಿಆರ್‌ಪಿಎಪ್ ಪಡೆ ನಿಯೋಜನೆಯನ್ನು ನಾವು ಸಹಿಸುವುದಿಲ್ಲ. ಅವನ್ನು ಖೇಜುರಿಯಲ್ಲಿ ನಿಯೋಜಿಸಬೇಕೆಂದು ಅವರು ಹೇಳಿದ್ದಾರೆ.
ಮತ್ತಷ್ಟು
ಮಲ್ಹೋತ್ರಾಗೆ ನ.22ರವರೆಗೆ ಜಾಮೀನು
ಪಾಕ್‌ನಲ್ಲಿ ಶೀಘ್ರ ಪ್ರಜಾಪ್ರಭುತ್ವಕ್ಕೆ ಆಶಯ
ಬೋಫೋರ್ಸ್ ಪ್ರಕರಣ ಹೆಚ್ಚು ಕಠಿಣ: ಸೋಧಿ
ಗುಜರಾತ್: ಕಾಂಗ್ರೆಸ್‌ನ ಚಕ್ ದೆ ಮ್ಯಾಜಿಕ್
ತೆಹಲ್ಕಾ ಆರೋಪ: ಸಿಬಿಐ ತನಿಖೆಗೆ ಆದೇಶ
ನಂದಿಗ್ರಾಮದ ಹಿಂಸಾಚಾರ:ಪ್ರಧಾನಿ ಕಳವಳ