ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಷ್ಟ್ರಪತಿಯಿಂದ ಭರವಸೆ: ಯಡ್ಯೂರಪ್ಪ, ಕುಮಾರ
ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ ಶಾಸಕರ ಪೆರೇಡ್, ಅಹವಾಲು ಮಂಡನೆ
ಬಿಜೆಪಿ ಮತ್ತು ಜೆಡಿಎಸ್‌ಗೆ ಸೇರಿದ ಸುಮಾರು 125 ಮಂದಿ ಶಾಸಕರು ಬಿಜೆಪಿಯ ಯಡ್ಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಂಗಳವಾರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಿ, ಕರ್ನಾಟಕದಲ್ಲಿ ಸರಕಾರ ರಚನೆಗೆ ಆಹ್ವಾನಿಸಲು ಆಗುತ್ತಿರುವ ವಿಳಂಬವನ್ನು ವಿರೋಧಿಸಿದರು.

ಸುಮಾರು 10 ನಿಮಿಷ ಕಾಲ ನಡೆದ ಸಭೆಯಲ್ಲಿ, ಶಾಸನಸಭೆಯ ಐದು ವರ್ಷ ಅವಧಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯಪಾಲರು ಸರಕಾರವೊಂದರ ರಚನೆ ಸಾಧ್ಯತೆಗಳನ್ನು ಅಳೆದುತೂಗಿ ನೋಡಲು ಇರುವ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖಗಳುಳ್ಳ ಮನವಿ ಪತ್ರವನ್ನು ಶಾಸಕರು ರಾಷ್ಟ್ರಪತಿಗೆ ಸಲ್ಲಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಮತ್ತು ಯಡ್ಯೂರಪ್ಪ, "ಬೇಷರತ್" ಬೆಂಬಲ ಪತ್ರದ ಪ್ರತಿಗಳನ್ನೂ ರಾಷ್ಟ್ರಪತಿಯವರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರಲ್ಲದೆ, ಸಂವಿಧಾನದ ಅನುಸಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರಪತಿ ಭರವಸೆ ನೀಡಿದರೆಂದು ನುಡಿದರು.

ಕರ್ನಾಟಕ ರಾಜ್ಯಪಾಲರಿಂದಲಾಗಲಿ ಅಥವಾ ಕೇಂದ್ರ ಸರಕಾರದಿಂದಾಗಲೀ ನ್ಯಾಯ ದೊರೆಯದ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರೂ ಅಷ್ಟು ದೂರದಿಂದ ಇಲ್ಲಿಗೆ ಬರಬೇಕಾಯಿತು ಎಂದು ಬಿಜೆಪಿ ಮುಖಂಡರಾದ ವೆಂಕಯ್ಯ ನಾಯ್ಡು, ಯಶ್ವಂತ್ ಸಿನ್ಹಾ ಹೇಳಿದರು.

ಇದಕ್ಕೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಯಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರೂ ರಾಷ್ಟ್ರಪತಿಯನ್ನು ಭೇಟಿಯಾಗಿ, ಪೂರ್ಣ ಪ್ರಕರಣದಲ್ಲಿ ತಮ್ಮ ಸ್ಥಿತಿಯನ್ನು ವಿವರಿಸಿದರು ಎನ್ನಲಾಗಿದೆ.
ಮತ್ತಷ್ಟು
ನಂದಿಗ್ರಾಮದಲ್ಲಿ ಘರ್ಷಣೆ:10 ಮಂದಿಗೆ ಗಾಯ
ಮಲ್ಹೋತ್ರಾಗೆ ನ.22ರವರೆಗೆ ಜಾಮೀನು
ಪಾಕ್‌ನಲ್ಲಿ ಶೀಘ್ರ ಪ್ರಜಾಪ್ರಭುತ್ವಕ್ಕೆ ಆಶಯ
ಬೋಫೋರ್ಸ್ ಪ್ರಕರಣ ಹೆಚ್ಚು ಕಠಿಣ: ಸೋಧಿ
ಗುಜರಾತ್: ಕಾಂಗ್ರೆಸ್‌ನ ಚಕ್ ದೆ ಮ್ಯಾಜಿಕ್
ತೆಹಲ್ಕಾ ಆರೋಪ: ಸಿಬಿಐ ತನಿಖೆಗೆ ಆದೇಶ