ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ದೀಪಾವಳಿಗೆ ಬಿಜೆಪಿ ಹೊಸ ಸರಕಾರ?
ರಾಷ್ಟ್ರಪತಿ ಆಳ್ವಿಕೆ ಹಿಂತೆಗತಕ್ಕೆ ರಾಜ್ಯಪಾಲ ಶಿಫಾರಸು: ಗುರುವಾರ ಸಂಪುಟ ಸಭೆ
ಕರ್ನಾಟಕ ರಾಜ್ಯ ರಾಜಕಾರಣದ ಬೆಳವಣಿಗೆಗಳ ಕುರಿತಂತೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಮಂಗಳವಾರ ಸಂಜೆ ಕೇಂದ್ರಕ್ಕೆ ತಮ್ಮ ಅಂತಿಮ ವರದಿ ಸಲ್ಲಿಸಿದ್ದು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಗೆ ಆಹ್ವಾನ ನೀಡುವ ನಿಟ್ಟಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಕೊನೆಗೊಳಿಸಲು ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಂಪುಟವು ತನ್ನ ಎಂದಿನ ಗುರುವಾರದ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಆದರೆ ಕೇಂದ್ರ ಸರಕಾರದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಪಿಎ) ನಾಳೆ, ಬುಧವಾರವೇ ಸಭೆ ಸೇರಲಿದ್ದು, ರಾಜ್ಯಪಾಲರ ಶಿಫಾರಸುಗಳ ಕುರಿತು ಚರ್ಚೆ ನಡೆಸಲಿದೆ.

ಕಳೆದ ರಾತ್ರಿಯೇ ಇಲ್ಲಿಗಾಗಮಿಸಿದ್ದ ಠಾಕೂರ್ ಅವರು, ಮಂಗಳವಾರ ಸಂಜೆ ಗೃಹ ಸಚಿವ ಶಿವರಾಜ್ ಪಾಟೀಲ್ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರಾಷ್ಟ್ರಪತಿ ಪ್ರತಿಭಾ ಪಾಟೀಲರನ್ನು ಭೇಟಿಯಾಗಿದ್ದರು.

ಊಹಾಪೋಹಗಳಿರುವಂತೆ ಮವನಮೋಹನ್ ಸಿಂಗ್ ಸರಕಾರವು ಇಂದು ರಾತ್ರಿ ಅಥವಾ ನಾಳೆ ತುರ್ತಾಗಿ ಸಂಪುಟ ಸಭೆ ಕರೆಯುವ ಸಾಧ್ಯತೆಗಳಿಲ್ಲ ಎಂಬ ಬಗ್ಗೆ ಸೂಚನೆಗಳು ಲಭ್ಯವಾಗಿವೆ.

ಸರಕಾರವು ಅವಸರ ಮಾಡಬೇಕಾಗಿಲ್ಲ. ಬಿಜೆಪಿ ಅವಸರಿಸುತ್ತಿದೆ ಯಾಕೆಂದರೆ ಅವರ ಸಂಖ್ಯಾ ಬಲ ನಿಧಾನವಾಗಿ ಕುಸಿಯುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಛೇಡಿಸಿದ್ದು, ಗುರುವಾರ ನಡೆಯುವ ಮಾಮೂಲಿ ಸಂಪುಟ ಸಭೆಯಲ್ಲಿಯಷ್ಟೇ ಈ ಕುರಿತು ಚರ್ಚೆಯಾಗುವ ನಿರೀಕ್ಷೆಯಿದೆ ಎಂಬ ಬಗ್ಗೆ ಪರೋಕ್ಷ ಸೂಚನೆ ನೀಡಿದರು.

ಸುಮಾರು 125ರಷ್ಟಿದ್ದ ಬಿಜೆಪಿ-ಜೆಡಿಎಸ್ ಶಾಸಕರು ರಾಷ್ಟ್ರಪತಿ ಭವನದಲ್ಲಿ ಪೆರೇಡ್ ಮಾಡಿದ ಬಳಿಕ ರಾಜ್ಯಪಾಲರು ರಾಷ್ಟ್ರಪತಿಯನ್ನು ಭೇಟಿಯಾಗಿದ್ದರು.

ಕೇಂದ್ರದಲ್ಲಿ ಅಧಿಕಾರದ ನೈತೃತ್ವ ವಹಿಸಿರುವ ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭೆ ವಿಸರ್ಜನೆಗೆ ಆಗ್ರಹಿಸುತ್ತಿದ್ದರೂ, ಸಂಖ್ಯಾಬಲವು ಬಿಜೆಪಿ-ಜೆಡಿಎಸ್ ಪರವಾಗಿರುವುದರಿಂದಾಗಿ ಸರಕಾರವು ಸಂವಿಧಾನಬದ್ಧವಾಗಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ.

ವಿಧಾನಸಭೆ ವಿಸರ್ಜನೆ ನಮ್ಮ ರಾಜಕೀಯ ಬೇಡಿಕೆಯಾಗಿದ್ದರೂ, ಸರಕಾರ ಸಾಂವಿಧಾನಿಕವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಹೇಳಿದ್ದು, ಇದರೊಂದಿಗೆ ಕೇಂದ್ರಕ್ಕೆ ಬಿಜೆಪಿ ನೇತೃತ್ವದ ಸರಕಾರ ರಚನೆಗೆ ಅವಕಾಶ ಮಾಡಿಕೊಡುವುದರ ಹೊರತಾಗಿ ಅನ್ಯ ದಾರಿಯಿಲ್ಲ ಎಂಬ ಬಗ್ಗೆ ಸುಳಿವು ನೀಡಿದ್ದಾರೆ.
ಮತ್ತಷ್ಟು
ರಾಷ್ಟ್ರಪತಿಯಿಂದ ಭರವಸೆ: ಯಡ್ಯೂರಪ್ಪ, ಕುಮಾರ
ನಂದಿಗ್ರಾಮದಲ್ಲಿ ಘರ್ಷಣೆ:10 ಮಂದಿಗೆ ಗಾಯ
ಮಲ್ಹೋತ್ರಾಗೆ ನ.22ರವರೆಗೆ ಜಾಮೀನು
ಪಾಕ್‌ನಲ್ಲಿ ಶೀಘ್ರ ಪ್ರಜಾಪ್ರಭುತ್ವಕ್ಕೆ ಆಶಯ
ಬೋಫೋರ್ಸ್ ಪ್ರಕರಣ ಹೆಚ್ಚು ಕಠಿಣ: ಸೋಧಿ
ಗುಜರಾತ್: ಕಾಂಗ್ರೆಸ್‌ನ ಚಕ್ ದೆ ಮ್ಯಾಜಿಕ್