ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಧಾನಿ ರೈಲಿನಲ್ಲಿ ಸ್ಫೋಟ: 5 ಬಲಿ
ದೆಹಲಿಯತ್ತ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗುರುವಾರ ನಸುಕು ಹರಿಯುವ ಮೊದಲು ಬಾಂಬ್ ಸ್ಫೋಟಿಸಿದ ಪರಿಣಾಮವಾಗಿ ಕನಿಷ್ಠ ಐದು ಮಂದಿ ಸಾವಿಗೀಡಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಅಸ್ಸಾಂನ ಗೋಲಘಾಟ್ ಜಿಲ್ಲೆಯಲ್ಲಿ ಶಂಕಿತ ಉಗ್ರರಿಂದ ದಿಬ್ರೂಗಢ-ದೆಹಲಿ ರಾಜಧಾನಿ ರೈಲಿನ ಸರಕು ಸಾಗಾಟದ ಬೋಗಿಯಲ್ಲಿ ಮಧ್ಯರಾತ್ತಿ 2 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದ್ದು, ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಗೇಜ್ ಬೋಗಿಯು ಸಂಪೂರ್ಣವಾಗಿ ಹಾನಿಗೀಡಾಗಿದ್ದು, ರೈಲ್ವೇ ಹಳಿಗೂ ಹಾನಿಯಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಈಶಾನ್ಯ ಭಾಗದ ರೈಲುಗಳಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ರೈಲು ಸ್ಥಳದಿಂದ ಪುನಃ ಹೊರಟಿದ್ದು, ರೈಲ್ವೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು
ಆಡ್ವಾಣಿ ಜಾತಕದಲ್ಲಿ ಪ್ರಧಾನಿ ಯೋಗ ಇಲ್ಲ: ಲಾಲು
ವಾಜಪೇಯಿ ಜತೆ ಆಡ್ವಾಣಿ ಉಭಯ ಕುಶಲೋಪರಿ
ಕೊಲೆ: ಬಿಹಾರದ ಮಾಜಿ ಸಚಿವನಿಗೆ ಜೀವಾವಧಿ
ಅಸಮರ್ಥ ಪ್ರಧಾನಿಯ ಹತಾಶೆ: ಬಿಜೆಪಿ ಪ್ರತಿ ವಾಗ್ದಾಳಿ
ಚುನಾವಣೋತ್ತರ ಸಮೀಕ್ಷೆ: ಬಿಜೆಪಿಗೆ ನಷ್ಟ, ಕಾಂಗ್ರೆಸ್ ಲಾಭ
ಗುಜರಾತ್ ಮತದಾನ ಶಾಂತಿಯುತ