ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಚ್ಚು ನಾಯಿಗೇ ಕಚ್ಚಿದ ವೃದ್ಧ ಆಸ್ಪತ್ರೆಗೆ!
ಹುಚ್ಚು ಹಿಡಿದ ನಾಯಿಯು ಮನುಷ್ಯನನ್ನು ಕಚ್ಚುವುದು ಸಹಜ. ಆದರೆ ಮನುಷ್ಯನೇ ಆ ನಾಯಿಯನ್ನು ಕಚ್ಚಿದರೆ!.ಕಲ್ಪಿಸಲಸದಳ. ಆದರೆ ಈ ಅಸಾಧ್ಯವು ಸಾಧ್ಯವಾದ ಘಟನೆಯೊಂದು ಕೊಲ್ಲಂ ಜಿಲ್ಲೆಯ ಪಾಕಕ್ಕಡವು ಗ್ರಾಮದಲ್ಲಿ ನಡೆದಿದೆ.

ತಾವು ಪ್ರೀತಿಯಿಂದ ಸಾಕಿದ ಬಾತುಕೋಳಿಗಳ ಮೇಲೆ ದಾಳಿ ನಡೆಸಿದ್ದ ಹುಚ್ಚುನಾಯಿಯ ಮೇಲೆ ಕುಪಿತಗೊಂಡ 65 ವರ್ಷ ಪ್ರಾಯದ ಪಪ್ಪನ್ ಎಂಬ ವ್ಯಕ್ತಿಯು, ಅದನ್ನು ಬೆನ್ನತ್ತಿ ಅದಕ್ಕೆ ತನ್ನ ಹಲ್ಲಿನ ರುಚಿ ತೋರಿಸಿದ್ದಾನೆ. ಈ ಅಪರೂಪದ ಕಾರ್ಯ ಮಾಡಿದ ಈತನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈತನಿಂದ ಕಚ್ಚಿಸಿಕೊಂಡ ಹುಚ್ಚುನಾಯಿಯನ್ನು ಗ್ರಾಮಸ್ಥರು ಹೊಡೆದು ಸಾಯಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊಲ್ಲಂ ಜಿಲ್ಲೆಯ ಪಾಕಕ್ಕಡವು ಜಿಲ್ಲೆಯಲ್ಲಿ ಹುಚ್ಚುನಾಯಿಯ ಕಾಟವು ವಿಪರೀತವಾಗಿತ್ತು.

ಬುಧವಾರ ರಾತ್ರಿ ಪಪ್ಪನ್ ಮನೆಯ ಕಂಪೌಂಡ್ ಒಳಗೆ ನುಗ್ಗಿದ ಹುಚ್ಚುನಾಯಿಯು ಆತನ ಮನೆಯಲ್ಲಿರುವ ಬಾತುಕೋಳಿಯ ಮೇಲೆ ದಾಳಿ ನಡೆಸಿತ್ತು. ಸಿಟ್ಟಿಗೆದ್ದ ಪಪ್ಪನ್ ಆ ನಾಯಿಯನ್ನು ಬೆನ್ನಟ್ಟಿದ್ದಾನೆ.

ನಾಯಿ ಮತ್ತು ಈತನ ನಡುವೆ ಪುಟ್ಟ ಕದನವೇ ನಡೆದಿದ್ದು, ಈ ಸಂದರ್ಭ ನಾಯಿ ಪಪ್ಪನ್‌ನ ಅಂಗೈಗೆ ಕಚ್ಚಿತ್ತು. ಕಡಿತದಿಂದ ಬಿಡಿಸಿಕೊಳ್ಳುವ ಸಲುವಾಗಿ ಪಪ್ಪನ್ ಅದರ ಕುತ್ತಿಗೆಯ ಭಾಗವನ್ನು ಬಲವಾಗಿ ಕಚ್ಚಿದ್ದಾನೆ ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೆಲವೇ ಕ್ಷಣದಲ್ಲಿ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದು, ಈ ವೇಳೆಯಲ್ಲಿ ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು ಪಪ್ಪನ್‌ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದರು ಮತ್ತು ನಾಯಿಯನ್ನು ಹೊಡೆದು ಸಾಯಿಸಿದರು.

ಪಪ್ಪನ್‌ನನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹುಚ್ಚುರೋಗ ನಿರೋಧಕ ಚಿಕಿತ್ಸೆ ಒದಗಿಸುವ ಸಲುವಾಗಿ ತಿರುವನಂತಪುರಂನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.
ಮತ್ತಷ್ಟು
ಬಸ್ಸಿಗೆ ರೈಲು ಡಿಕ್ಕಿ: ಕನಿಷ್ಠ 25 ಬಲಿ
ಸಮರ್ಪಕ ನಗರ ಯೋಜನೆಗೆ ರಾಷ್ಟ್ರಪತಿ ಸಲಹೆ
ಆಕಾಶ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ
ಬಿಜೆಪಿಯನ್ನು ಲೇವಡಿ ಮಾಡಿದ ಸೋನಿಯಾ
ರಾಷ್ಟ್ರಕ್ಕೆ ಜಟಿಲವಾದ ಭದ್ರತಾ ಸವಾಲು:ಕಪೂರ್
ಪ.ಬಂಗಾಳ ಪೊಲೀಸರ ವಿರುದ್ಧ ಕ್ರಮಕ್ಕೆ ತಡೆ