ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ರತ್ನ: ಉತ್ತರಿಸದೆ ನುಣುಚಿಕೊಂಡ ಪ್ರಧಾನಿ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬ ಆಡ್ವಾಣಿ ವಿನಂತಿಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸೂಕ್ತ ಉತ್ತರ ನೀಡದೆ ಪ್ರಧಾನಿ ಮನಮೋಹನ್ ಸಿಂಗ್ ನುಣುಚಿಕೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

"ತಾನು ಈಗಷ್ಟೆ ಪತ್ರ ಸ್ವೀಕರಿಸಿದ್ದೇನೆ" ಎಂದಷ್ಟೆ ವಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಪತ್ರದ ಕುರಿತು ಅವರು, ನುಡಿದರು.

ಜನವರಿ ಐದರ ದಿನಾಂಕದ ಈ ಪತ್ರದಲ್ಲಿ ಆಡ್ವಾಣಿ ಅವರು ರಾಜಕೀಯ ರಂಗದಲ್ಲಿ ವಾಜಪೇಯಿ ಅವರ ಸುದೀರ್ಘ ಕಾಲದ ಕೊಡುಗೆಗಾಗಿ ಅವರಿಗೆ ರಾಷ್ಟ್ರದ ಪರಮೋಚ್ಛ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ವಿನಂತಿಸಿದ್ದರು.

ವಾಜಪೇಯಿ ಅವರು ಅತ್ಯಂತ ಸುದೀರ್ಘ ಅವಧಿಗೆ ಸಂದರಾಗಿದ್ದರು ಮತ್ತು ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಬಳಿಕ ಅತ್ಯಂತ ಸುದೀರ್ಘ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದವರು ಎಂದು ಆಡ್ವಾಣಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ದಾಸ್‌ಮುನ್ಷಿ ಪ್ರತಿಕ್ರಿಯೆ
ಆಡ್ವಾಣಿಯವರ ಪತ್ರಕ್ಕೆ ತೀರಾ ಹಗುರವಾದ ಪ್ರತಿಕ್ರಿಯೆ ನೀಡಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್‌ ದಾಸ್‌ಮುನ್ಷಿ, ಅಂತಹ ವಿಚಾರಗಳನ್ನು ಸಾರ್ವಜನಿಕವಾಗಿ ಎತ್ತಬಾರದು ಎಂದು ಹೇಳಿದ್ದಾರಲ್ಲದೇ, ಆಡ್ವಾಣಿ ಅವರು ಬೇಕಿದ್ದರೆ ವಾಜಪೇಯಿಯವರನ್ನು ತಮ್ಮ ಪಕ್ಷದ ವೇದಿಕೆಯಲ್ಲಿ ಗೌರವಿಸಲಿ ಎಂಬ ವ್ಯಂಗ್ಯವಾಡಿದ್ದಾರೆ.

ದಾಸ್ ಮುನ್ಷಿಯವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರ ನಡುವಿನ ಪತ್ರವ್ಯವಹಾರದ ಕುರಿತಂತೆ ಕೇಂದ್ರ ಸಚಿವರೊಬ್ಬರು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಮತ್ತಷ್ಟು
ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಹೆಚ್ಚಳ
ಶೀಘ್ರ ಎಪಿಸಿಸಿ ಅಧ್ಯಕ್ಷರ ನೇಮಕ : ಮೋಯಿಲಿ
ನಿರಶನ ಮುಂದುವರೆಸಲು ಎಸ್‌ಪಿ ಪಕ್ಷ ನಿರ್ಧಾರ
ಬಿಲ್ಡರ್ ಹತ್ಯೆಯಲ್ಲಿ ಹಿರಿಯ ಅಧಿಕಾರಿಗಳ ಒಳಸಂಚು
ಅಣ್ವಸ್ತ್ರಶಕ್ತ ಜಲಾಂತರ್ಗಾಮಿ ನಿಗದಿತ ಸಮಯಕ್ಕೆ
ಹಿಮಪಾತ: 7 ಸೈನಿಕರು ಸೇರಿ 15 ಸಾವು