ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋನಿಯಾಗಿಂತ ನಾನು ಮಿಗಿಲು: ಮಾಯಾವತಿ
ಯುಪಿಎ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗಿಂತಲೂ ತನ್ನದು ಮೇರು ವ್ಯಕ್ತಿತ್ವ ಎಂದು ಹೇಳಿಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ದೇಶದ ಪ್ರಥಮ ದಲಿತ ಪ್ರಧಾನಿಯಾಗಲು ಇಚ್ಛಿಸಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಬಿಎಸ್ಪಿ ನಡುವಣ ವೈಮನಸ್ಯ ಉಲ್ಬಣಗೊಳ್ಳುತ್ತಿರುವ ಈ ಹಂತದಲ್ಲಿ ಮಾಯಾವತಿ ಅವರು ಸೋನಿಯಾಗಿಂತ ತಾನು ಮಿಗಿಲು ಎಂಬ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಸುಮಾರು 1000 ಪುಟಗಳುಳ್ಳ ಹಿಂದಿ ಪುಸ್ತಕ "ಬ್ಲೂ ಬುಕ್"ನಲ್ಲಿ ಮಾಯಾವತಿ ತಮ್ಮ ಸಾಧನೆಗಳ ಕುರಿತ ಸಮಗ್ರ ವಿವರಗಳನ್ನು ನೀಡಿದ್ದು, ಇತ್ತೀಚೆಗಿನ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗಳು ಬಿಎಸ್ಪಿ ಆಂದೋಲನದ ಅತ್ಯಂತ ಕ್ರಾಂತಿಕಾರಿ ಆಂದೋಲನ ಎಂದು ಮಾಯಾವತಿ ಬಣ್ಣಿಸಿದ್ದಾರೆ.

ಲೋಕಸಭಾ ಚುನಾವಣೆಗಳಲ್ಲಿ ತಮ್ಮೊಂದಿಗೆ ಮೈತ್ರಿ ಮಾಡಿಕೊಂಡಲ್ಲಿ, ಪೂರ್ತಿ ಐದು ವರ್ಷಕ್ಕೆ ಬೆಂಬಲ ನೀಡುವುದಾಗಿ 2003ರಲ್ಲಿ ಬಿಜೆಪಿ ಆಮಿಷ ಒಡ್ಡಿತ್ತು ಎಂದು ಪುಸ್ತಕದಲ್ಲಿ ತಿಳಿಸಿರುವ ಮಾಯಾವತಿ, ಈ ಮೈತ್ರಿಯಲ್ಲಿ 80ರಲ್ಲಿ 60 ಸ್ಥಾನಗಳನ್ನು ಬಿಜೆಪಿ ಕೇಳಿಕೊಂಡಿತ್ತು. ಇದುವೇ ನನ್ನ ವಿರುದ್ಧದ ಭಾರೀ ಒಳಸಂಚಿನ ಆರಂಭವಾಗಿತ್ತು ಎಂದು ಹೇಳಿದ್ದಾರೆ.

ಈ ದೇಶದಲ್ಲಿ ರಾಜಕೀಯ ಮತ್ತು ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಿರುವ ಅದೆಷ್ಟೋ ಮಹಿಳೆಯರಿರಬಹುದು. ಆದರೆ ತುಳಿತಕ್ಕೊಳಗಾದ ವರ್ಗದಿಂದ ಬಂದ ಮಹಿಳೆಯೊಬ್ಬಳು ಸಮಾಜದ ಅತಿದೊಡ್ಡ ಭಾಗದ ಆತ್ಮಗೌರವಕ್ಕಾಗಿ ಆಂದೋಲನದ ನೇತೃತ್ವ ವಹಿಸುವ ಮಹಿಳೆಯರು ಯಾರೂ ವೀಕ್ಷಕರ ಕಣ್ಣಿಗೆ ಬೀಳುತ್ತಿಲ್ಲ ಎಂದು ಹೇಳಿರುವ ಅವರು, ಜನತೆಗೆ ಸಾಮಾಜಿಕ ಬದಲಾವಣೆ ಮತ್ತು ಆರ್ಥಿಕ ಸ್ವಾತಂತ್ರ್ಯ ಕಲ್ಪಿಸುವ ಕಾರ್ಯಕ್ರಮಗಳನ್ನು ಆರಂಭಿಸಲು ಈ ದೇಶಕ್ಕೊಬ್ಬ ಸಮರ್ಥ ಪ್ರಧಾನಿಯನ್ನು ನೀಡುವುದು ತಮ್ಮ ಪ್ರಯತ್ನ ಎಂದು "ಮೇರೇ ಸಂಘರ್ಷಮಯ್ ಜೀವನ್ ಏವಂ ಬಿಎಸ್ಪಿ ಮೂಮೆಂಟ್ ಕಾ ಸಫರ್‌ನಾಮಾ (ಭಾಗ 3)" ಪುಸ್ತಕದಲ್ಲಿ ಮಾಯಾ ವಿವರಿಸಿದ್ದಾರೆ.
ಮತ್ತಷ್ಟು
ಹಕ್ಕಿ ಜ್ವರ: ಕೋಳಿಗಳ ಮಾರಣಹೋಮ
ಗಾಂಧಿ ತತ್ವ ಅನುಸರಿಸುವ ವಿದೇಶಿ ಗಾಂಧಿ
ಜಲ್ಲಿಕಟ್ಟು ಆಚರಣೆಗೆ ಸುಪ್ರೀಂಕೋರ್ಟ್ ಅನುಮತಿ
ಉಪಹಾರ್ ದುರಂತ: ದೆಹಲಿ ಹೈಕೋರ್ಟ್‌ಗೆ ಮೊರೆ
ಹಳಿತಪ್ಪಿದ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು
ಭಾರತಕ್ಕೆ ಯುರೇನಿಯಂ ಮಾರಾಟ ಇಲ್ಲ:ಅಸ್ಟ್ರೇಲಿಯಾ