ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಧನಕ್ಕೀಡಾದ ರಾಜ್ ಠಾಕ್ರೆ, ಅಜ್ಮಿಗೆ ಜಾಮೀನು
ಉತ್ತರ ಭಾರತೀಯರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ ಪೊಲೀಸರ ಬಂಧನಕ್ಕೀಡಾಗಿದ್ದ ರಾಜ್ ಠಾಕ್ರೆ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ವಿಕ್ರೋಲಿ ನ್ಯಾಯಾಲಯದ ನ್ಯಾಯಾಧೀಶರು 15,000 ರೂಪಾಯಿ ಬಾಂಡ್ ಆಧಾರದಲ್ಲಿ ಷರತ್ತಿನ ಜಾಮೀನು ನೀಡಿದ್ದಾರೆ.

ಠಾಕ್ರೆಯವರಿಗೆ ಸೆಕ್ಷನ್ 149ರ ಪ್ರಕಾರ ನಿರ್ಬಂಧಗಳನ್ನು ಹೇರಲಾಗಿದೆ. ಇದರನ್ವಯ ಅವರು ಸಾರ್ವಜನಿಕ ಭಾಷಣ ಮಾಡುವುದು, ಸಭೆ ಸೇರಿಸುವುದು ಮತ್ತು ಮಾಧ್ಯಗಳಿಗೆ ಹೇಳಿಕೆ ನೀಡುವುದನ್ನು ನಿರ್ಬಂಧಿಸಲಾಗಿದೆ.

ಅಂತೆಯೇ, ಸಮುದಾಯಗಳೊಡನೆ ಈರ್ಷೆ ಉಂಟುಮಾಡಬಲ್ಲಂತಹ ಪ್ರಚೋದನಕಾರಿ ಭಾಷಣಕ್ಕಾಗಿ ಬಂಧನಕ್ಕೀಡಾಗಿರುವ ಸಮಾಜವಾದಿ ಪಕ್ಷದ ಮುಖಂಡ ಅಬು ಅಸೀಮ್ ಅಜ್ಮಿಯವರಿಗೂ ಬೋಯಿವಾಡದ ನ್ಯಾಯಾಲಯ ಜಾಮೀನು ನೀಡಿದೆ.

ಬಂಧಿತರ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದು ಪ್ರಥಮ ಮಾಹಿತಿ ವರದಿ ಸಲ್ಲಿಸಲಾಗಿತ್ತು.

ಇವರ ಬಂಧನದಿಂದ ಸಂಭಾವ್ಯ ಗಲಭೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರೀ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು ರಾಜ್ಯಾದ್ಯಂತ ಸುಮಾರು 1,800ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದರು.
ಮುಂಬೈ ಮಹಾನಗರಿಯ ಎಲ್ಲ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ಮಂಗಳವಾರ ರಾತ್ರಿಯಿಂದಲೇ ಪೊಲೀಸರ ಬಂಧನ ಕಾರ್ಯಕ್ರಮ ಆರಂಭವಾಗಿದ್ದು, ಎಂಎನ್ಎಸ್‌ನ ರಾಜ್ಯ ಕಾರ್ಯದರ್ಶಿ ವಸಂತ್ ಗಿಟೆ ಅವರನ್ನೂ ಬುಧವಾರ ಮುಂಜಾನೆ ಬಂಧಿಸಲಾಗಿತ್ತು.

"ಎಲ್ಲವೂ ನಿಯಂತ್ರಣದಲ್ಲಿದೆ ಮಹಾರಾಷ್ಟ್ರ ಮತ್ತು ಮುಂಬೈಯನ್ನು ರಕ್ಷಿಸಲು ನಾವು ಸಮರ್ಥರಿದ್ದೇವೆ. ಮುಂಬೈಯವರು ಹೆದರುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಕಾನೂನು ರೀತ್ಯಾ ಮಾಡಲಾಗುತ್ತದೆ" ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪಿ.ಎಸ್.ಪಸ್ರಿಚ ಈ ನಾಯಕರ ಬಂಧನಕ್ಕೆ ಮುನ್ನ ಭರವಸೆ ನೀಡಿದ್ದರು.
ಮತ್ತಷ್ಟು
ತಸ್ಲಿಮಾ ವೀಸಾ ಮುಂದುವರಿಕೆ ಸುಳಿವು
ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಬಂಧನ
ಬಾಬರಿ ಮಸೀದಿ ಧ್ವಂಸ: ಪರಾಮರ್ಷೆ ಅರ್ಜಿ ವಜಾ
ದೆಹಲಿ ಬೀಗಮುದ್ರೆ ತೆರವಿಗೆ ಸು.ಕೋ. ಅಸ್ತು
ಸೋನಿಯಾ ವಿರುದ್ಧ ದೂರು: ನಿರ್ಧಾರ ಮುಂದಕ್ಕೆ
ಮಹಾರಾಷ್ಟ್ರಕ್ಕೆ ಹೆಚ್ಚುವರಿ ಅರೆಸೇನಾಪಡೆಗಳು