ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋತಿಗಳ ಜನುಮ ಜನುಮದ ಅನುಬಂಧ!
ಅಬ್ಬರದ ದಿಬ್ಬಣ, ನೂರಾರು ಮಂದಿ ಶುಭಾಕಾಂಕ್ಷಿಗಳು, ಭರ್ಜರಿ ಸಂಗೀತ, ಭೂರೀ ಭೋಜನ... ಇದೆಲ್ಲಾ ಯಾವುದೇ ವಿವಾಹ ಸಮಾರಂಭದಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶ. ಹಾಗಾಗಿ ಇಂಥದ್ದೊಂದು ಪಾರ್ಟಿ ನೋಡಿದರೆ ಯಾವುದೋ ಮದುವೆ ನಡೆಯುತ್ತಿದೆ ಅಂತ ಸುಮ್ಮನಾಗಬಹುದಿತ್ತು.

ಆದರೆ, ಒರಿಸ್ಸಾದಲ್ಲಿ ನಡೆದ ಮದುವೆಯೊಂದು ಗಮನ ಸೆಳೆದದ್ದು ಇವ್ಯಾವುದಕ್ಕೂ ಅಲ್ಲ.... ವರನಾರು ಗೊತ್ತೇನು? ಮನು ಹೆಸರಿನ ಕೋತಿ! ವಧು? ಅದು ಕೂಡ 2 ವರ್ಷದ ಕೋತಿಯೇ! ಹೆಸರು ಜೂಮ್ರಿ.

ದೇವಸ್ಥಾನವೊಂದರಲ್ಲಿ ತಮಗೆ ದೊರೆತ ಈ ಮಂಗನ ನವಜಾತ ಮರಿಯನ್ನು ಮನೆಗೆ ತಂದು ಸಾಕಿದವರು ಭದ್ರಕ್ ಎಂಬ ಹಳ್ಳಿಯ ಮಾಮಿನಾ. ಅದೇ ಮಂದಿರದಲ್ಲಿ ಜೂಮ್ರಿಗೆ ಮದುವೆ ಮಾಡಿಸುವುದಾಗಿಯೂ ಅವರು ಪಣ ತೊಟ್ಟಿದ್ದರು.

ಈಗ ಮಾತನಾಡಿಸಿದರೆ ಏನನ್ನುತ್ತಾರೆ? 'ನನ್ನದೇ ಮಗಳ ಮದುವೆಯ ಭಾಸವಾಗುತ್ತಿದೆ... ಎರಡು ವರ್ಷ ನಮ್ಮೊಂದಿಗಿದ್ದ ಜೂಮ್ರಿ ಇನ್ನು ನಮ್ಮ ಜತೆ ಇರುವುದಿಲ್ಲ' ಎಂದು ದುಃಖದಿಂದ ನುಡಿಯುತ್ತಿದ್ದಾರೆ ಮಾಮಿನಾ.

ಮನು ಎಂಬ ವರನು ಬೆಳೆಯುತ್ತಿದ್ದ ಸಮೀಪದ ಹಳ್ಳಿಗೆ ಮದುವೆ ಪ್ರಸ್ತಾಪವನ್ನು ಕಳುಹಿಸಲಾಗಿತ್ತು. ಭದ್ರಕ್ ಜಿಲ್ಲೆಯ ಪ್ರಾಣಿ ಪ್ರಿಯರು ಈ ವಿವಾಹವನ್ನು ಸ್ವಾಗತಿಸುತ್ತಾರೆ. ಯಾಕೆಂದರೆ, ಮದುವೆಯಾದ ತಕ್ಷಣವೇ ಈ ಪುಟ್ಟ ಮಂಗಗಳು ಮಾನವನ ಬಂಧನದಿಂದ ಬಿಡುಗಡೆಯಾಗಿ ಸ್ವಾತಂತ್ರ್ಯ ಪಡೆಯುತ್ತವೆ. ಆದರೆ, ಈ ಮದುವೆಗೆ 2 ಲಕ್ಷ ರೂ. ವ್ಯಯಿಸಲಾಗಿದೆ ಎಂದು ವರದಿ ಮಾಡಿದೆ ಐಬಿಎನ್.

ಅದೇ ರೀತಿ, ಮದುವೆಯಾದ ಈ ಕೋತಿಗಳು ಜಗನ್ನಾಥ ಮಂದಿರದ ಸುತ್ತವಿರುವ ಐದೆಕರೆ ಕಾಡಿನಲ್ಲಿ ಹನಿಮೂನ್ ಆಚರಿಸಲಿವೆ.
ಮತ್ತಷ್ಟು
14 ವರ್ಷ, 13 ನ್ಯಾಯಾಧೀಶರು, 1 ವರ್ಷ ಜೈಲು ಶಿಕ್ಷೆ!
ಎಪ್ರಿಲ್ ಮಾಸಾಂತ್ಯಕ್ಕೆ ಅಣು ಒಪ್ಪಂದ
ಅಪರಿಚಿತರಿಂದ ಆರ್‌ಜೆಡಿ ಮುಖಂಡನ ಹತ್ಯೆ
ಹಡಗು ಕಣ್ಮರೆ; 25 ಭಾರತೀಯರು ನಾಪತ್ತೆ
ಕಪ್ಪು ಸಮುದ್ರದಲ್ಲಿ ಭಾರತೀಯರಿದ್ದ ಹಡಗು ನಾಪತ್ತೆ
ಹುಲಿ ವಂಶ ರಕ್ಷಣೆಗೆ ಮುಂದಾಗಲು ಪ್ರಧಾನಿ ಕರೆ