ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶತ್ರುಘ್ನ ಸಿನ್ಙಾ ಔಟ್!
ಬಿಹಾರಿ ಬಾಬು ಶತ್ರುಘ್ನ ಸಿನ್ಹಾ ಅವರ ರಾಜ್ಯಸಭಾ ಹ್ಯಾಟ್ರಿಕ್ ಕನಸು ನನಸಾಗಿಲ್ಲ. ಹಾಗಾಗಿ ಅವರ ರಾಜ್ಯಸಭೆಯ ಸುದೀರ್ಘ ಇನ್ನಿಂಗ್ಸ್ ಕೊನೆಗೊಂಡಿದೆ. ಮೂರನೆ ಬಾರಿಗೆ ರಾಜ್ಯಸಭಾ ಸದಸ್ಯತ್ವಕ್ಕೆ ಅವರ ಹೆಸರನ್ನು ಬಿಜೆಪಿ ನಾಮನಿರ್ದೇಶನ ಮಾಡಿಲ್ಲ.

ತನ್ನನ್ನು ಪಕ್ಷವು ಸೂಕ್ತವಾಗಿ ಬಳಸಿಕೊಂಡಿಲ್ಲ ಎಂಬ ಅಳಲು ಹೊಂದಿದ್ದ ಸಿನ್ಹಾ, ಇದೀಗ ತನ್ನ ಅದೃಷ್ಟವನ್ನು ಮುಂದಿನ ಮಹಾ ಚುನಾವಣೆಯಲ್ಲಿ ಪರೀಕ್ಷೆ ಮಾಡಬೇಕಾಗಿದೆ. ರಾಜಕಾರಣಿಯಾಗಿ ತಿರುವು ಪಡೆದ ಕಲಾವಿದ, ಇದೀಗ ತನ್ನ ತರೆಮೇಲಿನ ಜನಪ್ರಿಯತೆಯನ್ನು ಲೋಕಸಭಾ ಚುನಾವಣೆಯಲ್ಲಿ ಒರೆಗೆ ಹಚ್ಚಬೇಕಿದೆ. ಅದೂ ಟಿಕೆಟ್ ಗಳಿಸಲು ಯಶಸ್ವಿಯಾದಲ್ಲಿ ಮಾತ್ರ.

ಬಿಜೆಪಿಯು ತನ್ನ 14 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಮಾಡಿದ್ದು, ಅದರಲ್ಲಿ ಸಿನ್ಹಾ ಹೆಸರು ತಪ್ಪಿಸಿಕೊಂಡಿದೆ. ದಿವಂಗತ ನಾಯಕ ಪ್ರಮೋದ್ ಮಹಾಜನ್ ಪತ್ನಿ ರೇಖಾಮಹಾಜನ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಬೇಕೆಂಬ ಬೇಡಿಕೆ ಈಡೇರದೆ, ಮಹಾರಾಷ್ಟ್ರದಿಂದ ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಅವರಿಗೆ ಅದೃಷ್ಟ ಒಲಿದಿದೆ.

ಗುಜರಾತಿನಲ್ಲಿ ನರೇಂದ್ರ ಮೋದಿ ವಿರುದ್ಧ ತಿರುಗಿ ಬಿದ್ದಿರುವ ಕೇಶುಭಾಯ್ ಪಟೇಲ್ ಅವರಿಗೆ 'ಶಿಕ್ಷೆ'ವಿಧಿಸಲಾಗಿದೆ. ಸಿನ್ಹಾ ಬದಲಿಗೆ ಮಾಜಿ ಕೇಂದ್ರ ಸಚಿವ ಸಿ.ಪಿ.ಠಾಕೂರ್ ಅವರನ್ನು ಬಿಜೆಪಿ ಬಿಹಾರದಿಂದ ಆಯ್ಕೆ ಮಾಡಿದೆ.
ಮತ್ತಷ್ಟು
ವಿಮಾನ ಸಿಬ್ಬಂದಿಗಳ ರಾಷ್ಟ್ರವ್ಯಾಪಿ ಮುಷ್ಕರ ಆರಂಭ
'ಶತಕ ವಂಚಿತ' ಭಾರತರತ್ನ ಶಿಫಾರಸು!
ಮಕ್ಕಳ ವಿರುದ್ಧ ಅಪರಾಧ ತಡೆಗೆ ಕಠಿಣ ಕ್ರಮ
ಶೇ.33 ಮೀಸಲಾತಿಗೆ ಎನ್‌ಸಿ ಸಿದ್ಧ
ಚುನಾವಣೆಗೆ ಸಿದ್ಧರಾಗಲು ಸಂಸದರಿಗೆ ಸೂಚನೆ
ಅಬ್ದುಲ್ ಕಲಾಂರಿಗೆ ಈಗಲೂ ಬಿಡುವೇ ಇಲ್ಲ!