ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರದೊಂದಿಗೆ ಬಂದ ಪ್ರಶ್ನೆ ಪತ್ರಿಕೆ!
ಪರೀಕ್ಷೆ ಬರೆಯುವಾಗ ಉತ್ತರವೂ ದೊರಕಬಾರದೇ ಎಂದು ಅಭ್ಯರ್ಥಿಗಳು ಬಯಸುವುದು ಸಹಜ ತಾನೆ. ಪರೀಕ್ಷೆಯೊಂದರಲ್ಲಿ ಇಂತಹ ಬಯಕೆ ನಿಜವಾಗಿ, ಮತ್ತೆ ಸುಳ್ಳಾದ ಘಟನೆಯೊಂದು ಇಲ್ಲಿ ಸಂಭವಿಸಿದೆ

ತಮಿಳ್ನಾಡು ಏಡ್ಸ್ ಕಂಟ್ರೋಲ್ ಸೊಸೈಟಿಯು ನಡೆಸಿರುವ ಲ್ಯಾಬ್ ಟೆಕ್ನಿಶೀಯನ್ ಪರೀಕ್ಷೆಗೆ 96 ಅಭ್ಯರ್ಥಿಗಳು ಹಾಜರಾಗಿದ್ದರು. ಅವರಿಗೆ ನೀಡಲಾಗಿದ್ದ ಪ್ರಶ್ನೆ ಪತ್ರಿಕೆಯ ಹಿಂದುಗಡೆ ಉತ್ತರವೂ ಇತ್ತು! ಇದನ್ನು ಕಂಡ ಅಭ್ಯರ್ಥಿಗಳು ಫುಲ್ ಖುಷ್!

ಸೋಮವಾರ ನಡೆದ ಈ ಪರೀಕ್ಷೆಯಲ್ಲಿ 60 ಮಹಿಳಾ ಅಭ್ಯರ್ಥಿಗಳೂ ಹಾಜರಿದ್ದರು. ಪರೀಕ್ಷೆಗೆ ಉತ್ತರ ಬರೆಯುತ್ತಿದ್ದ ಅಭ್ಯರ್ಥಿಗಳು ಗಪ್‌ಚಿಪ್ ಆಗಿ ಯಾವುದೇ ಆತಂಕವಿಲ್ಲದೆ, ಲವಲವಿಕೆಯಿಂದ ಉತ್ತರ ಬರೆಯುವುದನ್ನು ಕಂಡ ಮೇಲ್ವಿಚಾರಕರಿಗೆ ಅಚ್ಚರಿ, ಜೊತೆ ಸಂಶಯ. ಯಾವುದೇ ಹಿಂಜರಿಕೆ ಇಲ್ಲದೆ ಇವರು ರಭಸದಿಂದ ಉತ್ತರ ಬರೆಯುವ ಪರಿಯ ಹಿಂದಿನ ಹಿಕ್ಮಾತ್ತಾದರೂ ಏನು ಎಂದು ಅವರು ಪರಾಂಬರಿಸಿದಾಗ ಗೊತ್ತಾದ ವಿಚಾರವೆಂದರೆ, ಉತ್ತರ ಪತ್ರಿಕೆ ತಿದ್ದುವವರಿಗಾಗಿ ರೂಪಿಸಲಾಗಿರುವ ಉತ್ತರದ ಪ್ರತಿಯೂ ಪ್ರಶ್ನೆಪತ್ರಿಕೆಯೊಂದಿಗೆ ಪೂರೈಕೆಯಾಗಿದೆ!

ಅವರು ತಕ್ಷಣ ಈ ವಿಚಾರವನ್ನು ಮೇಲಧಿಕಾರಿಗಳಿಗೆ ತಿಳಿಸಿದರು. ಅವರು ಪರೀಕ್ಷೆಯನ್ನು ರದ್ದುಪಡಿಸಿ, ಪ್ರಶ್ನೆ ಪತ್ರಿಕೆ ಹಾಗೂ ಉತ್ತರಪತ್ರಿಕೆಗಳನ್ನು ಹಿಂತಿರುಗಿಸಲು ಹೇಳಿದರು.

ಬಳಿಕ ಅಭ್ಯರ್ಥಿಗಳಿಗೆ ಹೊಸ ಪ್ರಶ್ನೆ ಪತ್ರಿಕೆಯೊಂದಿಗೆ ಮರು ಪರೀಕ್ಷೆ ನಡೆಸಲಾಯಿತು. ಅಲ್ಲಿ ಯಥಾಪ್ರಕಾರ ಅಭ್ಯರ್ಥಿಗಳು ಹ್ಯಾಪು ಮೋರೆಯಲ್ಲಿ ಉತ್ತರ ಬರೆದರು.

ಪ್ರಶ್ನೆ ಪತ್ರಿಕೆಯೊಂದಿಗೆ ಉತ್ತರ ಪ್ರತಿ ಸರಬರಾಜಾದ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಶತ್ರುಘ್ನ ಸಿನ್ಙಾ ಔಟ್!
ವಿಮಾನ ಸಿಬ್ಬಂದಿಗಳ ರಾಷ್ಟ್ರವ್ಯಾಪಿ ಮುಷ್ಕರ ಆರಂಭ
'ಶತಕ ವಂಚಿತ' ಭಾರತರತ್ನ ಶಿಫಾರಸು!
ಮಕ್ಕಳ ವಿರುದ್ಧ ಅಪರಾಧ ತಡೆಗೆ ಕಠಿಣ ಕ್ರಮ
ಶೇ.33 ಮೀಸಲಾತಿಗೆ ಎನ್‌ಸಿ ಸಿದ್ಧ
ಚುನಾವಣೆಗೆ ಸಿದ್ಧರಾಗಲು ಸಂಸದರಿಗೆ ಸೂಚನೆ