ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ನಿಲ್ದಾಣ ಕಾರ್ಮಿಕರ ಮುಷ್ಕರ ಅಂತ್ಯ
ವಿಮಾನ ನಿಲ್ದಾಣ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ ನಂತರವೇ ವಿಮಾನ ನಿಲ್ದಾಣಗಳ ಕಾರ್ಯವನ್ನು ಸ್ಥಗಿತಗೊಳಿಸುವ ಕ್ರಮ ತೆಗೆದುಕೊಳ್ಳುವುದಾಗಿ ಸರಕಾರ ಭರವಸೆ ನೀಡಿದ ಮೇಲೆ ರಾಷ್ಟ್ರವ್ಯಾಪಿ ಹಮ್ಮಿಕೊಂಡ ವಿಮಾನ ನಿಲ್ದಾಣಗಳ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ ಸ್ಥಗಿತಗೊಂಡಿದೆ.

ವಿಮಾನ ನಿಲ್ದಾಣ ಪ್ರಾಧಿಕಾರದ ಕಾರ್ಮಿಕರ ಜಂಟಿ ವೇದಿಕೆ ಎರಡು ದಿನಗಳ ಹಿಂದೆ ಅಸಹಕಾರ ಮುಷ್ಕರವನ್ನು ಪ್ರಾರಂಭಿಸಿತ್ತು. ವಿಮಾನ ನಿಲ್ದಾಣದ ಕಾರ್ಮಿಕರ ಮುಷ್ಕರ ವಿಮಾನ ಪ್ರಯಾಣಕ್ಕೆ ಅಡೆತಡೆ ಉಂಟಾಗಿರಲಿಲ್ಲ. ವಿಮಾನ ನಿಲ್ದಾಣಗಳ ಸ್ವಚ್ಚತೆ ಮತ್ತು ನಿಲ್ದಾಣದಲ್ಲಿನ ಕೆಲಸಗಳಿಗೆ ಮುಷ್ಕರದ ಬಿಸಿ ತಟ್ಟಿತ್ತು.

ಸಿಪಿಐ(ಎಂ) ಮತ್ತು ಸಿಐಟಿಯು ಮುಖಂಡರುಗಳಾದ ಎಂ. ಕೆ ಪಾಂಡೆ. ತಪನ್ ಸೇನ್ ಮತ್ತು ದಿಪಾಂಕರ್ ಮುಖರ್ಜಿ ಅವರನ್ನು ಒಳಗೊಂಡ ಕಾರ್ಮಿಕರ ಆಯೋಗವು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್ ಅವರನ್ನು ಭೇಟಿಯಾಗಿ ಕಾರ್ಮಿಕರ ಬೇಡಿಕೆಗಳನ್ನು ಮಂಡಿಸಿತು.

ಸಚಿವ ಪ್ರಫುಲ್ ಪಟೇಲ್ ಅವರು ವಿಮಾನ ನಿಲ್ದಾಣಗಳ ಕಾರ್ಯ ಸ್ಥಗಿತಕ್ಕೆ ಸಂಬಂಧಿಸಿದಂತೆ ಸರಕಾರದ ನಿಲುವನ್ನು ಪ್ರಕಟಿಸಿದ ನಂತರ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ಹಿಂದೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದವು ಎಂದು ಸಮನ್ವಯಾಧಿಕಾರಿ ಎಂ ಕೆ ಘೋಷಲ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಬೆಂಗಳೂರು ಮತ್ತು ಹೈದ್ರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಅಲ್ಲಿ ಈಗ ಇರುವ ಹಳೆಯ ವಿಮಾನ ನಿಲ್ದಾಣಗಳ ಕಾರ್ಯವನ್ನು ಸ್ಥಗಿತಗೊಳಿಸುವುದಾಗಿ ಸರಕಾರ ಪ್ರಕಟಿಸಿದ ನಂತರ ವಿಮಾನ ನಿಲ್ದಾಣ ಕಾರ್ಮಿಕ ಸಂಘಟನೆಯು ಎರಡು ದಿನಗಳ ಹಿಂದೆ ಮುಷ್ಕರಕ್ಕೆ ಕರೆ ನೀಡಿತ್ತು.
ಮತ್ತಷ್ಟು
ರಕ್ಷಣಾ ಸಚಿವ ಸ್ಥಾನಕ್ಕೆ ಅಹ್ವಾನವಿತ್ತು- ಸಂಗ್ಮಾ
ವಿಮಾನ ನಿಲ್ದಾಣ ನೌಕರರ ಮುಷ್ಕರ ಎರಡನೇ ದಿನಕ್ಕೆ
ಕರ್ವಾಲೋ ಅತ್ಯಾಚಾರಕ್ಕೆ ಸ್ಕಾರ್ಲೆಟ್ ಬಲಿ
ಶಸ್ತ್ರಾಸ್ತ್ರ ಖರೀದಿಗೆ 60 ಕೋಟಿ ರೂ ಮೀಸಲಿಟ್ಟ ನಕ್ಸಲರು
ಸ್ಕಾರ್ಲೆಟ್ ಕೊಲೆ ಪ್ರಕರಣ: ಸ್ಯಾಮ್ಸನ್ ತಪ್ಪೊಪ್ಪಿಗೆ
ಸಿನಿ ತಾರೆಯರ ಹೆಸರಲ್ಲಿ ಅಕ್ರಮ ವೀಸಾ ಜಾಲ