ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಘಾಲಯ:ಮುಖ್ಯಮಂತ್ರಿಯಾಗಿ ರಾಯ್ ನೇಮಕ
ಮೇಘಾಲಯ ಪ್ರೋಗ್ರೆಸಿವ್ ಅಲೈಯನ್ಸ್‌ ಪಕ್ಷದ ಡೊಂಕುಪರ್ ರಾಯ್ ಅವರನ್ನು ಮುಖ್ಯಮಂತ್ರಿಯಾಗಿ ರಾಜ್ಯಪಾಲ ಎಸ್.ಎಸ್.ಸಿದ್ದು ನೇಮಕ ಮಾಡಿದ್ದಾರೆ.

ಮುಖ್ಯಮಂತ್ರಿ ಡಿ.ಡಿ ಲಪಾಂಗ್ ವಿಧಾನಸಭೆಯಲ್ಲಿ ವಿಶ್ವಾಸಮತ ಎದುರಿಸುವ ಬದಲಾಗಿ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿಸಿದ ಬೆಂಬಲ ದೊರೆಯುವ ಸಾಧ್ಯತೆಗಳಿಲ್ಲವಾದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದೆನೆ ಎಂದು ಮುಖ್ಯಮಂತ್ರಿ ಲಪಾಂಗ್ ಕಾಂಗ್ರೆಸ್ ಶಾಸಕರ ಸಭೆಯ ನಂತರ ತಿಳಿಸಿದ್ದಾರೆ.

ವಿರೋಧಪಕ್ಷವಾದ ಮೇಘಾಲಯ ಪ್ರೋಗ್ರೆಸಿವ್ ಅಲೈಯನ್ಸ್ ಕೇವಲ ಮೂರು ತಿಂಗಳು ಮಾತ್ರ ಅಧಿಕಾರ ನಡೆಸಲು ಸಾಧ್ಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಲಪಾಂಗ್ ತಿಳಿಸಿದ್ದಾರೆ.

ಎಂಪಿಎ ಪಕ್ಷ ಸರಕಾರವನ್ನು ರಚಿಸಲು ರಾಜ್ಯಪಾಲರನ್ನು ಭೇಟಿ ಮಾಡಲು ಉದ್ದೇಶಿಸಿದ್ದು,ತಾವು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಲ್ಲ ಎಂದು ಎನ್‌ಸಿಪಿ ನಾಯಕ ಪಿ.ಎ.ಸಂಗ್ಮಾ ತಿಳಿಸಿದ್ದಾರೆ.

ಇಂದು ಸಂಜೆ ಮೇಘಾಲಯ ಪ್ರೋಗ್ರೆಸಿವ್ ಅಲೈಯನ್ಸ್‌ ಪಕ್ಷದ ಡೊಂಕುಪರ್ ರಾಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಮೇಘಾಲಯ:ಮುಖ್ಯಮಂತ್ರಿ ಲಪಂಗ್ ರಾಜೀನಾಮೆ
ಸಲ್ವಾ ಜುಡುಮ್ ನೀತಿ ಪರಿಶೀಲನೆ ಅನಿವಾರ್ಯ: ಎಆರ್‌ಸಿ
ದರ ಹೆಚ್ಚಳ: ಎಡಪಕ್ಷಗಳಿಂದ ಕಲಾಪ ಬಹಿಷ್ಕಾರ
ಆಂಧ್ರದಲ್ಲಿ 12 ನಕ್ಸಲೀಯರ ಹತ್ಯೆ
ಮೇಘಾಲಯ ಬುಧವಾರ ವಿಶ್ವಾಸ ಮತಯಾಚನೆ
ಸೇನಾಧಿಕಾರಿಗಳಿಂದ ಅತ್ಯಾಚಾರ:ತನಿಖೆಗೆ ಆದೇಶ