ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀರು ಹಂಚಿಕೆ: ತ.ನಾಡು ಕೇರಳ ಮಾತುಕತೆ
ಪರಂಬಿಕುಲಂ-ಅಲಿಯಾರ್ ಒಪ್ಪಂದದ ನೀರು ಹಂಚಿಕೆ ಕುರಿತಂತೆ ಮುಖ್ಯಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಸಲು ತಮಿಳುನಾಡು ಸರಕಾರ ಸಮ್ಮತಿ ಸೂಚಿಸಿದೆ ಎಂದು ಜಲ ಸಂಪನ್ಮೂಲ ಮತ್ತು ನೀರಾವರಿ ಖಾತೆ ಸಚಿವ ಎನ್.ಕೆ .ರಾಮಚಂದ್ರನ್ ವಿಧಾನಸಭೆಗೆ ತಿಳಿಸಿದ್ದಾರೆ.

ತಮಿಳುನಾಡು ಸರಕಾರ ಒಪ್ಪಂದವನ್ನು ಉಲ್ಲಂಘಿಸಿದ್ದರಿಂದ ಚಲಾಕುಡಿ ಪ್ರದೇಶದಲ್ಲಿ ನೀರಿನ ಕೊರತೆ ಎದುರಿಸುತ್ತಿದೆ ಎಂದು ಜೆಡಿ(ಎಸ್)ನ ಜೊಸೆ ಥಿಯಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸುವಂತೆ ತಮಿಳುನಾಡು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

2007-08ರ ಫೆಬ್ರವರಿ 1 ರಂದು ನಡೆದ ಒಪ್ಪಂದದಂತೆ ರಾಜ್ಯದ ಶೋಲಾಯರ್ ಡ್ಯಾಮ್‌ನ ನೀರಿನ ಮಟ್ಟವನ್ನು 2,663 ಅಡಿಯನ್ನು ಕಾಯ್ದುಕೊಂಡು ಬರಬೇಕು ಎಂದು ನಿರ್ಧರಿಸಲಾಗಿತ್ತು. ತಮಿಳುನಾಡು ಸರಕಾರ ಒಪ್ಪದವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 12 ಅಡಿ ನೀರಿನ ಕೊರತೆ ಎದುರಿಸಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ತಮಿಳುನಾಡು ಒಪ್ಪಂದವನ್ನು ಉಲ್ಲಂಘಿಸಿದ್ದರಿಂದ ಚಲಾಕುಡಿ ನದಿಯಲ್ಲಿ ನೀರಿನ ಕೊರತೆ ಉಂಟಾಗಿ ನೀರಾವರಿಗೆ ಹಾಗೂ ಕುಡಿಯುವ ನೀರಿಗೆ ತೊಂದರೆ ಎದುರಾಗಿದೆ ಎಂದು ಸಚಿವ ಪ್ರೇಮ್‌ಚಂದ್ರನ್ ತಿಳಿಸಿದ್ದಾರೆ.
ಮತ್ತಷ್ಟು
ಮೇಘಾಲಯ:ಮುಖ್ಯಮಂತ್ರಿಯಾಗಿ ರಾಯ್ ನೇಮಕ
ಮೇಘಾಲಯ:ಮುಖ್ಯಮಂತ್ರಿ ಲಪಂಗ್ ರಾಜೀನಾಮೆ
ಸಲ್ವಾ ಜುಡುಮ್ ನೀತಿ ಪರಿಶೀಲನೆ ಅನಿವಾರ್ಯ: ಎಆರ್‌ಸಿ
ದರ ಹೆಚ್ಚಳ: ಎಡಪಕ್ಷಗಳಿಂದ ಕಲಾಪ ಬಹಿಷ್ಕಾರ
ಆಂಧ್ರದಲ್ಲಿ 12 ನಕ್ಸಲೀಯರ ಹತ್ಯೆ
ಮೇಘಾಲಯ ಬುಧವಾರ ವಿಶ್ವಾಸ ಮತಯಾಚನೆ