ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆ ಮುಂದೂಡಿಕೆ
ಪಾಕಿಸ್ತಾನದಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ ಅರೋಪಿಯಾಗಿ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಭಾರತೀಯ ನಾಗರಿಕ ಸರಬ್ಜಿತ್ ಸಿಂಗ್ ಅವರ ಗಲ್ಲು ಶಿಕ್ಷೆಯನ್ನು ಪಾಕಿಸ್ತಾನ ಸರಕಾರವು ಒಂದು ತಿಂಗಳುಗಳ ಕಾಲ ಮುಂದೂಡಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಸರಬ್ಜಿತ್ ಗಲ್ಲು ಶಿಕ್ಷೆಯ ಜಾರಿಯನ್ನು ಎಪ್ರಿಲ್ 30ರವರೆಗೆ ಮುಂದೂಡಲಾಗಿದೆ ಎಂದು ಹೇಳಿದರು.

1990ರಲ್ಲಿ ಲಾಹೋರ್ ಮತ್ತು ಮುಲ್ತಾನ್‌ಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ ಸರಬ್ಜಿತ್ ಆರೋಪಿ ಎಂದು ನ್ಯಾಯಾಲಯ ತೀರ್ಪು ನೀಡಿದೆ, ಬಾಂಬ್ ಸ್ಫೋಟಗಳಲ್ಲಿ 14 ಜನರು ಸಾವನ್ನಪ್ಪಿದ್ದರು.

ಆದರೆ ಈ ಕುರಿತು ಪಾಕಿಸ್ತಾನ ಸರಕಾರ ಅಧಿಕೃತವಾಗಿ ಏನೂ ಹೇಳಿಲ್ಲ. ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆಯ ಜಾರಿ ಮುಂದೂಡಿರುವುದಕ್ಕೆ ಪ್ರತಿಕ್ರಿಯಿಸಿರುವ ಸರಬ್ಜಿತ್ ಸಹೋದರಿ ದಲ್ಬೀರ್ ಕೌರ್ 18 ವರ್ಷಗಳ ನಂತರ ಭೇಟಿಯಾಗಬಹುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸರಬ್ಜಿತ್ ಸಿಂಗ್ ಮಾಡಿಕೊಂಡಿದ್ದ ದಯಾ ಮನವಿಯನ್ನು ತಿರಸ್ಕರಿಸಿದ ನಂತರ ಮಾರ್ಚ್ 16ರಂದು ಸರಬ್ಜಿತ್ ಸಿಂಗ್ ವಿರುದ್ಧ ಬ್ಲಾಕ್ ವಾರಂಟ್ ಹೊರಡಿಸಲಾಗಿದೆ. ವಾರಂಟ್ ಅನ್ವಯ ಸರಬ್ಜಿತ್ ಸಿಂಗ್‌ಗೆ ಗಲ್ಲು ಶಿಕ್ಷೆ ಜಾರಿಯ ಅಂತಿಮ ಹಂತ ಎಂದು ಹೇಳಲಾಗುತ್ತದೆ.
ಮತ್ತಷ್ಟು
ನೀರು ಹಂಚಿಕೆ: ತ.ನಾಡು ಕೇರಳ ಮಾತುಕತೆ
ಮೇಘಾಲಯ:ಮುಖ್ಯಮಂತ್ರಿಯಾಗಿ ರಾಯ್ ನೇಮಕ
ಮೇಘಾಲಯ:ಮುಖ್ಯಮಂತ್ರಿ ಲಪಂಗ್ ರಾಜೀನಾಮೆ
ಸಲ್ವಾ ಜುಡುಮ್ ನೀತಿ ಪರಿಶೀಲನೆ ಅನಿವಾರ್ಯ: ಎಆರ್‌ಸಿ
ದರ ಹೆಚ್ಚಳ: ಎಡಪಕ್ಷಗಳಿಂದ ಕಲಾಪ ಬಹಿಷ್ಕಾರ
ಆಂಧ್ರದಲ್ಲಿ 12 ನಕ್ಸಲೀಯರ ಹತ್ಯೆ