ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋವಾದಲ್ಲಿ ಇಸ್ರೇಲಿ ಮಹಿಳೆಯ ನಿಗೂಢ ಸಾವು
ದಕ್ಷಿಣ ಗೋವಾದ ಪಲೊಲೆಮ್‌ನ ಗುಡಿಸಲೊಂದರಲ್ಲಿ ಇಸ್ರೇಲ್ ಮಹಿಳೆ ನಿಗೂಢ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳಿಯರು ಗುಡಿಸಲಿನಿಂದ ದುರ್ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಅಲ್ಪಮಟ್ಟಿಗೆ ಕೊಳೆತ ಇಸ್ರೇಲ್ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮುದ್ರದ ಎದುರಿಗೆ ಇರುವ ಅಲ್ಪ ಬಾಡಿಗೆಯ ಗುಡಿಸಲುಗಳನ್ನು ವಿದೇಶಿಯರು ಬಾಡಿಗೆಗೆ ಪಡೆಯುತ್ತಿದ್ದು, ಪೊಲೀಸರು ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಪರೀಕ್ಷಿಸಿದಾಗ ಮೃತಳಾದ ಮಹಿಳೆ ಮಿರಿಯಾನ್ ಲಹ್ಮಿ ಎಂದು ಗುರುತಿಸಲಾಗಿದೆ.

ಇಸ್ರೇಲ್ ಮಹಿಳೆ ಮಿರಿಯಾನ್ ಲಹ್ಮಿ ಅತಿಯಾದ ಡ್ರಗ್ ಸೇವಿಸಿ ಮೃತಳಾಗಿದ್ದಾಳೆ ಎನ್ನುವುದನ್ನು ಕಾನಕೊನಾ ಠಾಣೆಯ ಪೊಲೀಸ್ ಅಧಿಕಾರಿ ವಿಲ್ಸನ್ ಡಿಸೋಜಾ ತಳ್ಳಿ ಹಾಕಿದ್ದಾರೆ.

ಗುಡಿಸಲಿನಲ್ಲಿ ಕೇವಲ ಸಿಗರೇಟ್ ಪತ್ತೆಯಾಗಿದ್ದು ಡ್ರಗ್ಸ್‌ಗೆ ಸಂಬಂಧಿಸಿದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲವೆಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ದೇಹವನ್ನು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಲಾಗಿದ್ದು ಮೃತ ಮಹಿಳೆ 58 ವರ್ಷ ವಯಸ್ಸಿನವಳಾಗಿದ್ದರಿಂದ ಡ್ರಗ್ಸ್ ಸೇವಿಸಿರುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆ ಎಂದು ಡಿಸೋಜಾ ಹೇಳಿದ್ದಾರೆ.

ಇಸ್ರೇಲ್ ಪ್ರವಾಸಿಗರು ಗೋವಾದ ಉತ್ತರ ಭಾಗ ಅಥವಾ ದಕ್ಷಿಣದ ಕಾನಕೊನಾ ಮತ್ತು ಗೋಕರ್ಣದ ಬೀಚ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ಪ್ರದೇಶಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎಂದು ಸ್ಥಳಿಯ ಮೂಲಗಳು ತಿಳಿಸಿವೆ.






ಮತ್ತಷ್ಟು
ಹೃದಯಾಘಾತ: ನಟ ರಘುವರನ್ ಸಾವು
ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆ ಮುಂದೂಡಿಕೆ
ನೀರು ಹಂಚಿಕೆ: ತ.ನಾಡು ಕೇರಳ ಮಾತುಕತೆ
ಮೇಘಾಲಯ:ಮುಖ್ಯಮಂತ್ರಿಯಾಗಿ ರಾಯ್ ನೇಮಕ
ಮೇಘಾಲಯ:ಮುಖ್ಯಮಂತ್ರಿ ಲಪಂಗ್ ರಾಜೀನಾಮೆ
ಸಲ್ವಾ ಜುಡುಮ್ ನೀತಿ ಪರಿಶೀಲನೆ ಅನಿವಾರ್ಯ: ಎಆರ್‌ಸಿ