ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಡ್ವಾಣಿಯವರ ಮೈ ಕಂಟ್ರಿ ಮೈ ಲೈಫ್ ಬಿಡುಗಡೆ
PIB
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮುನ್ನುಡಿಯೊಂದಿಗೆ ಹೊರಬಂದಿರುವ ಮಾಜಿ ಉಪ ಪ್ರಧಾನಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ "ಮೈ ಲೈಫ್ ಮೈ ಕಂಟ್ರಿ" ಆತ್ಮ ಕಥನದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಐದು ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಸಾಗಿ ಬಂದ ದಾರಿಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ.

ನವದೆಹಲಿಯಲ್ಲಿ ಬುಧವಾರ ಬಿಡುಗಡೆಯಾದ ಮೈ ಲೈಫ್‌ನಲ್ಲಿ ಎನ್‌ಡಿಎ ಆಡಳಿತಾವಧಿಯಲ್ಲಿ ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ನಡೆದ ಆಗ್ರಾ ಶೃಂಗ ಸಭೆ, ಕಾರ್ಗಿಲ್ ಯುದ್ಧ ಮೇಲಾಗಿ ಐಸಿ-814 ವಿಮಾನ ಅಪಹರಣಗಳ ಕುರಿತು ಬೆಳಕು ಚೆಲ್ಲುತ್ತದೆ.

ಅಡ್ವಾಣಿಯವರು ಉಪ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಸುರಕ್ಷಾ ಸಲಹೆಗಾರರಾಗಿದ್ದ ಬ್ರಿಜೇಷ್ ಮಿಶ್ರಾ ಪ್ರಧಾನಿಯವರ ಆಪ್ತ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಬ್ರಿಜೇಷ್ ಮಿಶ್ರಾ ಅವರಿಗೆ ಒಂದೇ ಹುದ್ದೆ ನೀಡಬೇಕು ಎಂಬ ಅಡ್ವಾಣಿ ಸಲಹೆಯನ್ನು ವಾಜಪೇಯಿ ತಳ್ಳಿಹಾಕಿರುವುದನ್ನು ಉಲ್ಲೇಖಿಸಲಾಗಿದೆ.

ಸುಮಾರು ಅರ್ಧ ದಶಕಗಳ ಕಾಲ ರಾಜಕೀಯ ಜೀವನದ ಹಾದಿಯನ್ನು ಒಂದಾಗಿ ಸವೆಸಿದ ಅಡ್ವಾಣಿ ಮತ್ತು ವಾಜಪೇಯಿ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಮತ್ತು ಸಮಸ್ಯೆ ಪರಿಹಾರ ಮಾರ್ಗ ವಿಭಿನ್ನವಾಗಿರುತ್ತಿದ್ದವು ಆದರೂ ತಮ್ಮ ರಾಜಕೀಯ ಜೀವನದಲ್ಲಿ ಅಡ್ವಾಣಿಗೆ ವಿಭಿನ್ನ ಮಹತ್ವ ಇದೆ. ಭಿನ್ನಾಭಿಪ್ರಾಯಗಳ ನಡುವೆಯೂ ಒಟ್ಟಿಗೆ ಸಾಗುವ ಸಂಭಂದವನ್ನು ಇಂದಿನ ಪಕ್ಷ ಉದಾಹರಣೆ ರೂಪದಲ್ಲಿ ಬಳಸಿಕೊಳ್ಳಬೇಕು ಎಂದು ವಾಜಪೇಯಿ ಮುನ್ನುಡಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಡ್ವಾಣಿ ಒರ್ವ ವಾಸ್ತವಿಕತೆ ಮತ್ತು ಕಲ್ಪನೆಗಳ ನಡುವಿನ ದಂದ್ವ ವ್ಯಕ್ತಿತ್ವದ ಬಲಿ ಪಶು ಎಂದು ತಪ್ಪಾಗಿ ಗ್ರಹಿಸಲಾಗಿದೆ. ಆದರೆ ವಾಸ್ತವಿಕವಾಗಿ ಅಡ್ವಾಣಿಯವರದು ವಾಸ್ತವಿಕ ಜೀವನಕ್ಕೆ ಹತ್ತಿರವಾದ ವ್ಯಕ್ತಿತ್ವ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.

ಐಸ-814 ವಿಮಾನ ಅಪಹರಣಕ್ಕೆ ಸಂಬಂಧಿಸಿದಂತೆ ಸರಕಾರ ಭಯೋತ್ಪಾದಕರನ್ನು ಬಿಡುಗಡೆ ಮಾಡುವುದಕ್ಕೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿದ್ದು, ಒಂದು ದಿಕ್ಕಿನಿಂದ ವಿಮಾನದಲ್ಲಿದ್ದ ಸಂಬಂಧಿಕರ ಹೆಚ್ಚುತ್ತಿರುವ ಒತ್ತಡ, ಇನ್ನೊಂದು ದಿಕ್ಕಿನಿಂದ ಅಪಹರಣಕಾರರು ವಿಮಾನ ಸ್ಫೋಟಿಸುವುದಕ್ಕೆ ಸಜ್ಜಾಗುತ್ತಿರುವ ಗುಪ್ತಚರ ವರದಿಗಳ ಕಾರಣ ಆದಷ್ಟು ನಷ್ಟ ಕಡಿಮೆಯಾಗಬೇಕು ಎನ್ನುವ ಉದ್ದೇಶದಿಂದ ಮಹ್ಮದ್ ಅಫ್ಜಲ್‌ ಸೇರಿದಂತೆ ಇತರರನ್ನು ಸರಕಾರ ಬಿಡುಗಡೆ ಮಾಡಿತು ಎಂದು ಹೇಳಿದ್ದಾರೆ.
ಮತ್ತಷ್ಟು
ಗೋವಾದಲ್ಲಿ ಇಸ್ರೇಲಿ ಮಹಿಳೆಯ ನಿಗೂಢ ಸಾವು
ಹೃದಯಾಘಾತ: ನಟ ರಘುವರನ್ ಸಾವು
ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆ ಮುಂದೂಡಿಕೆ
ನೀರು ಹಂಚಿಕೆ: ತ.ನಾಡು ಕೇರಳ ಮಾತುಕತೆ
ಮೇಘಾಲಯ:ಮುಖ್ಯಮಂತ್ರಿಯಾಗಿ ರಾಯ್ ನೇಮಕ
ಮೇಘಾಲಯ:ಮುಖ್ಯಮಂತ್ರಿ ಲಪಂಗ್ ರಾಜೀನಾಮೆ