ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿನ್ನಾ ಹೇಳಿಕೆ, ವಿಷಾದವಿಲ್ಲ: ಅಡ್ವಾಣಿ
ಒಂದೇ ಒಂದು ಹೇಳಿಕೆ. ಒಂದೇ ಒಂದು ಘಟನೆ ಮನುಷ್ಯನ ಜೀವನದಲ್ಲಿ ಯಾವ ರೀತಿ ಬದಲಾವಣೆಗಳನ್ನು ತರುತ್ತದೆ ಎನ್ನುವುದಕ್ಕೆ ಉದಾಹರಣೆ ಲಾಲ್ ಕೃಷ್ಣ ಅಡ್ವಾಣಿ. ಪಾಕ್ ಪ್ರವಾಸ ಕೈಗೊಂಡಿದ್ದ ಲಾಲ್ ಕೃಷ್ಣ ಅಡ್ವಾಣಿ ಅಲ್ಲಿ ಮಹ್ಮದ್ ಅಲಿ ಜಿನ್ನಾ ಒರ್ವ ಜಾತ್ಯಾತೀತ ನಿಲುವಿನ ವ್ಯಕ್ತಿ ಎಂದು ಹೇಳಿದ್ದರು. ಅದೇ ಹೇಳಿಕೆ ಇಂದು ತಾನೇ ಕಟ್ಟಿ ಬೆಳೆಸಿದ ಪಕ್ಷ ಮತ್ತು ಇಡೀ ಜೀವನವನ್ನೇ ಯಾವ ಸಂಘಟನೆಗೆ ನಿಷ್ಠರಾಗಿದ್ದರೋ ಇಂದು ಸಂಘಟನೆಯಲ್ಲಿ ಅವರಿಗೆ ಬೆಂಬಲ ಇಲ್ಲ.

ಈಗಾಗಲೇ ಆ ವಿವಾದದ ಹೇಳಿಕೆ ನೀಡಿ ಮೂರು ವರ್ಷಗಳಾಗಿವೆ ಆದರೂ ಲಾಲ್ ಕೃಷ್ಣ ಅಡ್ವಾಣಿ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ. ಮಹ್ಮದ್ ಅಲಿ ಜಿನ್ನಾ ಅವರ ಜಾತ್ಯಾತೀತ ನಿಲುವು ಸಿದ್ಧಾಂತಗಳ ಕುರಿತು ದಿವಂಗತ ಸರೋಜಿನಿ ನಾಯ್ಡು ಅವರ ಭಾಷಣಗಳಿಂದ ಎತ್ತಿಕೊಂಡು ಆ ಹೇಳಿಕೆ ನೀಡಿದ್ದೇನೆ. ನನಗೆ ಆ ಕುರಿತು ಯಾವುದೇ ವಿಷಾದ ಇಲ್ಲ ಎಂದು ಅವರು ತಮ್ಮ "ಮೈ ಕಂಟ್ರಿ ಮೈ ಲೈಫ್" ಆತ್ಮಕಥನದಲ್ಲಿ ಹೇಳಿದ್ದಾರೆ.

"ಮೈ ಕಂಟ್ರಿ ಮೈ ಲೈಫ್"ನ ನನಗೆ ವಿಷಾದವಿಲ್ಲ ಎನ್ನುವ ಅದ್ಯಾಯದಲ್ಲಿ 2005ರಲ್ಲಿ ಕರಾಚಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಆ ಹೇಳಿಕೆ ಹೇಗೆ ರಾಜಕೀಯ ವಲಯವನ್ನು ಅಲ್ಲೋಲ ಕಲ್ಲೋಲ ಮಾಡಿತು ಎನ್ನುವುದನ್ನು ವಿವರಿಸಿದ್ದಾರೆ.

ಟಿ ವಿ ಚಾನೆಲ್‌ಗಳಲ್ಲಿ ಬಂದ ಜಿನ್ನಾ ಜಾತ್ಯಾತೀತವಾದಿ- ಅಡ್ವಾಣಿ ಎಂಬ ತಲೆ ಬರಹ ನೋಡಿದ ನಂತರ ಸಾಮಾನ್ಯ ನಾಗರಿಕನಿಗೆ ಏನು ಆಗಿರಬೇಕು ಅನ್ನುವುದನ್ನು ಅರ್ಥವಾಗುತ್ತದೆ.

ನೋವಾಗಿರುವ ವಿಚಾರ ಎನೆಂದರೆ ನಾನು ಆ ರೀತಿ ಹೇಳಿಕೆ ನೀಡುವ ಮೂಲಕ ಘನ ಗಂಭೀರ ತಪ್ಪು ಎಸಗಿದೆ ಎನ್ನುವ ಸೈದ್ಧಾಂತಿಕ ವಾದ ಮಂಡಿಸಿದರು. ಯಾವುದೇ ವಿಚಾರ ತಿಳಿಯದೇ ಅದರ ಹಿಂದಿನ ವಾಸ್ತವ ಸತ್ಯ ಅರಿಯದೇ ಆ ರೀತಿ ವಿರೋಧಿಸಿದ್ದು ತಪ್ಪು ಎಂದು ಅವರು ತಮ್ಮ ಆತ್ಮ ಕಥನದಲ್ಲಿ ಹೇಳಿದ್ದಾರೆ.
ಮತ್ತಷ್ಟು
ಸರ್ವಧರ್ಮ ಸಮನ್ವಯತೆಯ ಭಾರತಕ್ಕೆ ಶುಭ ಶುಕ್ರವಾರ
ದಿ,24ರಂದು ಶಿವಾನಿ ಭಟ್ನಾಗರ ಕೊಲೆ ತೀರ್ಪು
ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ -ಪಚೋರಿ
ನಕ್ಸಲ್ ಸಮಸ್ಯೆ ನಿಗ್ರಹ ಅಗತ್ಯ
ಸರಬ್ಜಿತನನ್ನು ಗಲ್ಲಿಗೇರಿಸಬಹುದು: ಪತ್ನಿ
ಅಡ್ವಾಣಿಯವರ ಮೈ ಕಂಟ್ರಿ ಮೈ ಲೈಫ್ ಬಿಡುಗಡೆ