ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದಿರಾ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶ ವಿಧಿವಶ
1975 ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಆಯ್ಕೆ ಅಸಿಂಧು ಎಂದು ತೀರ್ಪು ನೀಡಿ ಪರೋಕ್ಷವಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿಯ ಕರಾಳ ಛಾಯೆ ಬೀಳುವುದಕ್ಕೆ ಕಾರಣವಾಗಿದ್ದ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಅವರು ಅವರು ತಮ್ಮ ಅಲಹಾಬಾದ್‌ನ ನಿವಾಸದಲ್ಲಿ ಇಂದು ನಿಧನಹೊಂದಿದರು.

ನ್ಯಾಯಮೂರ್ತಿ ಸಿನ್ಹಾ ಅವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದು. ಧೈರ್ಯ ಮತ್ತು ಅಕ್ರಮವನ್ನು ಸಹಿಸದ ಸಿನ್ಹಾ ಒರ್ವ ವಿರಳ ವ್ಯಕ್ತಿತ್ವದವರು ಎಂದು ಅವರೊಂದಿಗೆ ಇದ್ದ ವಕೀಲರು ಮತ್ತು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಅಷ್ಟೇ ಏಕೆ ಜಗತ್ತಿನಲ್ಲಿ ಮೊದಲ ಬಾರಿಗೆ ಪ್ರಧಾನಿಯ ವಿರುದ್ಧ ಚುನಾವಣಾ ಭೃಷ್ಟಾಚಾರದ ಆರೋಪದಡಿಯಲ್ಲಿ ತೀರ್ಪು ನೀಡಿದ ಏಕೈಕ ವ್ಯಕ್ತಿ ಎಂದರೆ ಅದು ಜಗಮೋಹನ್ ಲಾಲ್ ಸಿನ್ಹಾ ಎಂದು ಹೇಳಬಹುದು. ಇದೇ ತೀರ್ಪಿನಿಂದ ಅಕ್ರೋಶಗೊಂಡ ಇಂದಿರಾ ಗಾಂಧಿ ಜೂನ್ 25. 1975ರಂದು ಸಂವಿಧಾನ ಬದ್ಧ ಮೂಲಭೂತ ಹಕ್ಕುಗಳನ್ನು ಅಮಾನತ್ತುಗೊಳಿಸಿ, ವಿರೋಧ ಪಕ್ಷದ ನಾಯಕರನ್ನು ಬಂಧಿಸಿ, ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧ ವಿಧಿಸಿದ್ದರು.

ತುರ್ತು ಪರಿಸ್ಥಿತಿಯ ತೆರವಿನ ನಂತರ 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತು ಅಲ್ಲದೇ ದೇಶದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬಂದಿತುಯ

ಇದೀಗ ನ್ಯಾಯಾಧೀಶರಾಗಿರುವ ಆರ್ ಬಿ ಮೆಹ್ರೋತ್ರಾ ಅವರು ಅಲಹಾಬಾದ್ ನ್ಯಾಯಾಲಯದಲ್ಲಿ ರಾಜ್ ನಾರಾಯಣ್ ಮತ್ತು ಇಂದಿರಾ ಗಾಂಧಿ ನಡುವಿನ ಪ್ರಕರಣದ ವಾದ ವಿವಾದ ಯುವ ನ್ಯಾಯವಾದಿಯಾಗಿ ಕುತೂಹಲದಿಂದ ಆಲಿಸಿದ್ದರು. ಅಂದು ನ್ಯಾಯಮೂರ್ತಿ ಸಿನ್ಹಾ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೇ ಘನ ಗಾಂಭೀರ್ಯದಿಂದ ಪ್ರಕರಣದ ವಿಚಾರಣೆ ಮಾಡಿ ತೀರ್ಪು ನೀಡಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ.

ಇಂದಿರಾ ಗಾಂಧಿ ಸ್ವತಃ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನಾದಿನ ಯಾವುದೇ ಪೊಲೀಸ್‌ರು ಅಥವಾ ಪ್ರಧಾನಿಯ ಅಂಗರಕ್ಷಕರು ನ್ಯಾಯಾಲಯದ ಆವರಣವನ್ನು ಪ್ರವೇಶಿಸುವಂತಿಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹೈಕೋರ್ಟ್ ನ್ಯಾಯವಾದಿಗಳು ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಧಾನಿಯ ಭದ್ರತಾ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ ಎಂದು ಆದೇಶಿಸಿದ್ದರು.
ಮತ್ತಷ್ಟು
ಕುಖ್ಯಾತಿಯ ಹೆಸರು ಕಳೆದುಕೊಳ್ಳುವತ್ತ ಧಾರಾವಿ
ಹವಾಮಾನ ವೈಪರೀತ್ಯ ತಡೆಗೆ ಯೋಜನೆ
ವಲಸಿಗರ ಸಂಖ್ಯೆಯಲ್ಲಿ ಇಳಿಕೆ ಹಾಸ್ಯಾಸ್ಪದ-ಠಾಕ್ರೆ
ಹೆಚ್ಚಿನ ಡ್ರಗ್ ಸೇವನೆ ಸ್ಕಾರ್ಲೆಟ್ ಸಾವಿಗೆ ನಾಂದಿ
ಪತಿ ಬದಲಿಗೆ ಉಗ್ರರ ಬಿಡುಗಡೆ ಅಗತ್ಯವಿಲ್ಲ-ಕೌರ್
ಸೋಹಾ ಅಲಿ ಮೇಲೆ ಶಸ್ತ್ರಾಸ್ತ್ರ ಪರವಾನಗಿ ಆರೋಪ