ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಡ್ವಾಣಿ, ಬಿಜೆಪಿ ವಿರುದ್ಧ ಸೋನಿಯಾ ಟೀಕೆ
ಅಪಹೃತರ ಬಿಡುಗಡೆ ಸಲುವಾಗಿ, ಸಂಪುಟ ಸಹೋದ್ಯೋಗಿ ಜಸ್ವಂತ್ ಸಿಂಗ್ ಅವರನ್ನು ಉಗ್ರರೊಂದಿಗೆ ಕಂದಹಾರಕ್ಕೆ ಕಳುಹಿಸಿದ್ದ ವಿಚಾರಕ್ಕೆ ತನ್ನ ಗಮನಕ್ಕೆ ಬಂದಿರಲಿಲ್ಲ ಎಂಬ ಅಂದಿನ ಗೃಹ ಸಚಿವ ಆಡ್ವಾಣಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸೋನಿಯಾಗಾಂಧಿ ಬಿಜೆಪಿ ಹಾಗೂ ಆಡ್ವಾಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜಸ್ವಂತ್ ಅವರನ್ನು ಉಗ್ರರೊಂದಿಗೆ ಕಳುಹಿಸಿದ ವಿಚಾರ ತನ್ನ ಅರಿವಿಗೆ ಬಂದಿಲ್ಲ ಎಂದು ಆಡ್ವಾಣಿ ಹೇಳಿದ್ದಾರೆ. ಗೃಹ ಸಚಿವರ ಗಮನಕ್ಕೆ ಬಾರದೆ ಇದು ಹೇಗಾಯಿತು, ಹಾಗಾದರೆ ನಾವೇನು ಅರ್ಥ ಮಾಡಿಕೊಳ್ಳಬೇಕು, ಈ ವಿಚಾರದಲ್ಲಿ ಎನ್‌‌ಡಿಎ ಪ್ರಧಾನಿ ಅಂದಿನ ಗೃಹ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲವೇ, ಇದಕ್ಕೆ ಕಾರಣವೇನು ಎಂದು ಸಾರ್ವಜನಿಕ ಸಭೆಯಲ್ಲಿ ಸೋನಿಯಾ ಪ್ರಶ್ನಿಸಿದ್ದಾರೆ.

ಕಂದಹಾರ್‌‌ಗೆ ಜಸ್ವಂತ್ ಅವರನ್ನು ಕಳುಹಿಸುವ ನಿರ್ಧಾರ ಆಡ್ವಾಣಿ ಅವರಿಗೆ ತಿಳಿದಿತ್ತು ಎಂಬ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದ ಅವರು,ಈ ವಿಚಾರದಲ್ಲಿ ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರು ಮೌನ ಮುರಿಯಬೇಕು. ಈ ವಿಷಯದಲ್ಲಿ ಯಾರು ಸತ್ಯ ಮತ್ತು ಯಾರು ಸುಳ್ಳು ಹೇಳುತ್ತಿದ್ದಾರೆ. ಸತ್ಯವನ್ನು ಮರೆ ಮಾಚುತ್ತಿರುವುದೇಕೆ ಎಂಬುದು ಬಹಿರಂಗಗೊಳ್ಳಲಿ ಎಂದು ಆಗ್ರಹಿಸಿದರು.
ಮತ್ತಷ್ಟು
ರಾಜಕಾರಣಿಗಳ ವಿರುದ್ಧ ತಮಿಳು ಚಿತ್ರರಂಗ ಆಕ್ರೋಶ
ಲಾಲು ವಿರುದ್ದದ ಅರ್ಜಿಯನ್ನು ತಳ್ಳಿಹಾಕಿದ ಸು.ಕೋರ್ಟ್
34 ವರ್ಷ ಸೆರೆಮನೆ ವಾಸ: ಭವಿಷ್ಯ ಅನಿಶ್ಚಿತ
ಹೊಗೆ ಎಬ್ಬಿಸುವಂಥದ್ದೇನೂ ಹೇಳಿಲ್ಲ: ಕರುಣಾನಿಧಿ
ದೆಹಲಿ : ಬಾಲೆಯ ಮೇಲೆ ಅತ್ಯಾಚಾರ, ಇಬ್ಬರ ಬಂಧನ
ಹೊಗೆ: ತಮಿಳು ಚಿತ್ರರಂಗದಿಂದಲೂ ಉಪವಾಸ