ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೈಕಮಾಂಡ್ ಕೈಯಲ್ಲಿ ದೇಶಮುಖ್ ಭವಿಷ್ಯ
ಸರಕಾರದ ಒಳಗೆ ಭಿನ್ನಮತವನ್ನು ಎದುರಿಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರ ಭವಿಷ್ಯವನ್ನು ನಿರ್ಧರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಉನ್ನತ ಮಟ್ಟದ ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ. ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಕೇಂದ್ರ ರಕ್ಷಣಾ ಖಾತೆ ಸಚಿವ ಎ. ಕೆ ಆಂಟನಿ, ಮತ್ತು ಸೋನಿಯಾ ಗಾಂಧಿ ಅವರ ರಾಜಕೀಯ ಸಲಹಾಗಾರ ಅಹ್ಮದ್ ಪಟೇಲ್ ಅವರನ್ನು ಒಳಗೊಂಡ ಸಮಿತಿಯು ವಿಲಾಸರಾವ್ ದೇಶಮುಖ್ ನೇತೃತ್ವದ ಸರಕಾರದ ಸಾಧನೆಯನ್ನು ಪರಿಶೀಲಿಸಲಿದೆ.

ಮೂವರ ಸದಸ್ಯರ ಸಮಿತಿಯು ಮಹಾರಾಷ್ಟ್ರ ರಾಜ್ಯ ವಿಧಾನ ಸಭೆಯ ಬಜೆಟ್ ಅಧಿವೇಶನ ಪೂರ್ಣಗೊಂಡ ವರದಿ ಸಿದ್ದಪಡಿಸಲು ಮುಂದಾಗಲಿದೆ. ಕಾಂಗ್ರೆಸ್ ಪಕ್ಷವು ನಿರಂತರವಾಗಿ ಈ ರೀತಿಯ ಸರಕಾರಗಳ ಸಾಧನೆಯನ್ನು ಪರಿಶೀಲಿಸುತ್ತದೆ. ಈ ತರಹದ ಪರಿಶೀಲನೆಯನ್ನು ರಾಜ್ಯ ಸರಕಾರದಲ್ಲಿ ಆಂತರಿಕ ಭಿನ್ನಮತ ಇದೆ ಎಂದು ಇದನ್ನು ಅರ್ಥೈಸಬೇಕಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಮನಿಷ್ ತಿವಾರಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಈ ಮೊದಲು ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್‌ನ ಕಾರ್ಯಕಾರಿಣಿ ಸಮತಿಯ ಸದಸ್ಯರು ಸರಕಾರದ ಸಾಧನೆಯ ವರದಿ ಸಿದ್ದಪಡಿಸುವಿಕೆಯಲ್ಲಿ ಇರಲಿದ್ದಾರೆ.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ರಾವ್ ಮತ್ತು ಕಂದಾಯ ಸಚಿವ ನಾರಾಯಣ ರಾಣೆ ಸೇರಿದಂತೆ ಇತರರು ವಿಲಾಸ್ ರಾವ್ ದೇಶಮುಖ್ ನೇತೃತ್ವದ ವಿರುದ್ಧ ಭಿನ್ನಮತ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ರಾಜ್ಯದಲ್ಲೂ ಸಿಖ್ಖರಿಗೆ 'ಅಲ್ಪಸಂಖ್ಯಾತರು' ಮಾನ್ಯತೆ
ಹೊಗೆ: ಕರುಣಾ ರಾಜೀನಾಮೆಗೆ ಜಯಾ ಆಗ್ರಹ
ಸಾಲದು ವೇತನ : ಸೇನೆಯಿಂದ ಅಧಿಕಾರಿಗಳ ನಿರ್ಗಮನ
ಅಗತ್ಯವಸ್ತುಗಳ ಬೆಲೆ ಕೈಗೆಟುಕುವಂತಿರಲಿ: ಸೋನಿಯಾ
ಯಾರು ಏನೇ ಅನ್ನಲಿ, ಮುಂಬೈ ಬಿಡೆ: ಬಚ್ಚನ್
ಟಾಡಾ ವಿಧಿಸಿದ್ದ ಮರಣದಂಡನೆಗೆ ತಡೆ