ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭ್ರಷ್ಟನ ಪತ್ನಿಯೂ ತಪ್ಪಿತಸ್ಥಳೇ: ಕೋರ್ಟ್
ನವದೆಹಲಿ:ಭೃಷ್ಟಾಚಾರದಿಂದ ಸಂಪಾದಿಸಿದ ಅಕ್ರಮ ಸಂಪತ್ತಿನ ಉಪಯೋಗ ಪಡೆದ ಭ್ರಷ್ಟ ಅಧಿಕಾರಿಗಳ ಪತ್ನಿಗಳು ಕೂಡ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಮುಂಬೈ ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಕಾನೂನು ಭಾಹಿರವಾಗಿ ಭೃಷ್ಟಾಚಾರದ ಮೂಲಕ ಆಸ್ತಿ ಸಂಪಾದಿಸಿದ ಸರಕಾರಿ ಸೇವೆಯಲ್ಲಿ ಇದ್ದ ವ್ಯಕ್ತಿಯ ಪತ್ನಿಯು ತನ್ನ ಪತಿಯ ಭ್ರಷ್ಟಾಚಾರದಲ್ಲಿ ತಪ್ಪಿತಸ್ಥಳು ಎಂದು ಮುಂಬೈ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಆರ್ ಕಿಂಗಾವಕರ್ ತೀರ್ಪಿನಲ್ಲಿ ಹೇಳಿದ್ದಾರೆ.

ತನ್ನ ಹೆಸರಿನಲ್ಲಿ ಪತಿಯು ಅಕ್ರಮವಾಗಿ ಆಸ್ತಿ ಸಂಪಾದಿಸುವುದಕ್ಕೆ ಅವಕಾಶವನ್ನು ಮಂಗಳಾ ಬಾಯಿ ನೀಡಿರುವುದು ದೃಢಪಟ್ಟಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯ ಹೇಳಿದ್ದು, ಮಂಗಳಾಬಾಯಿಗೆ ಆಧೀನ ನ್ಯಾಯಾಲಯ ವಿಧಿಸಿದ ಮೂರು ವರ್ಷಗಳ ಕಠಿಣ ಜೈಲು ಸಜೆ ಮತ್ತು ಎರಡು ಲಕ್ಷ ರೂಗಳ ದಂಡದ ಆದೇಶವನ್ನು ತೀರ್ಪಿನಲ್ಲಿ ಎತ್ತಿ ಹಿಡಿಯಿತು.

ಮಹಾರಾಷ್ಟ್ರ ರಾಜ್ಯ ಸರಕಾರದ ನಿರಾವರಿ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಾಸ್ಕರ್ ವಾಘ್ 1984ರಿಂದ 1989ರ ಅವಧಿಯಲ್ಲಿ ಲಂಚ ಪಡೆದು ಅಪಾರ ಪ್ರಮಾಣದ ಆಸ್ತಿಯನ್ನು ಗಳಿಸಿದ್ದನು.

ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಕಿಂಗಾವಕರ್ ಅವರು ಸರಕಾರಿ ನೌಕರನನ್ನು ನ್ಯಾಯಾಲಯ ವಿಚಾರಣೆಗೆ ಒಳಪಡಿಸಲು ಯಾವುದೇ ಅಪ್ಪಣೆ ಬೇಕಿಲ್ಲ ಎಂದು ಹೇಳಿದರು.
ಮತ್ತಷ್ಟು
ಸರಬ್ಜಿತ್‌ಗಾಗಿ ಕ್ಷಮೆ ಕೇಳುವೆ: ಬರ್ನೆ
ಹೈಕಮಾಂಡ್ ಕೈಯಲ್ಲಿ ದೇಶಮುಖ್ ಭವಿಷ್ಯ
ರಾಜ್ಯದಲ್ಲೂ ಸಿಖ್ಖರಿಗೆ 'ಅಲ್ಪಸಂಖ್ಯಾತರು' ಮಾನ್ಯತೆ
ಹೊಗೆ: ಕರುಣಾ ರಾಜೀನಾಮೆಗೆ ಜಯಾ ಆಗ್ರಹ
ಸಾಲದು ವೇತನ : ಸೇನೆಯಿಂದ ಅಧಿಕಾರಿಗಳ ನಿರ್ಗಮನ
ಅಗತ್ಯವಸ್ತುಗಳ ಬೆಲೆ ಕೈಗೆಟುಕುವಂತಿರಲಿ: ಸೋನಿಯಾ