ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನು ಹೀರೋ ಅಲ್ಲ: ರಾಹುಲ್ ಗಾಂಧಿ
PTI
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಚಿವ ಸ್ಥಾನ ನಿರಾಕರಿಸಿರುವ ಹಿನ್ನೆಲೆಯಲ್ಲಿ ಎದ್ದಿರುವ ಹುಲ್ಲಾಗುಲ್ಲಾಗಳಿಗೆ ಅಂತ್ಯಹಾಡುವ ನಿಟ್ಟಿನಲ್ಲಿ ಈ ಕುರಿತು ಹೇಳಿಕೆ ನೀಡಿರುವ ರಾಹುಲ್, ಪಕ್ಷದಮೇಲೆ ಗಮನ ಕೇಂದ್ರೀಕರಿಸಲು ತಾನು ಇಚ್ಛಿಸಿರುವ ಕಾರಣ ಮಂತ್ರಿಯಾಗ ಬಯುಸುವುದಿಲ್ಲ ಎಂದು ಹೇಳಿದ್ದಾರೆ. "ನಾನು ಹೀರೋ ಅಲ್ಲ. ಒಮ್ಮೆಗೆ ಒಂದೇ ವಿಚಾರದ ಕುರಿತು ಕಾರ್ಯನಿರ್ವಹಿಸಲು ಇಷ್ಟಪಡುತ್ತೇನೆ" ಎಂದವರು ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರಿಗೂ, ತನ್ನ ಪುತ್ರನನ್ನು ಮಂತ್ರಿ ಮಂಡಲದೊಳಕ್ಕೆ ತರುವ ಇರಾದೆ ಇತ್ತು. ಈ ಯೋಚನೆಗೆ ಪ್ರಧಾನಿ ಮನಮೋಹನ್ ಸಿಂಗ್ ಅನುಮೋದನೆಯೂ ಇತ್ತು. ಆದರೆ ಅಮ್ಮನ ಇಚ್ಛೆಯನ್ನು ಅಲ್ಲಗಳೆದ ರಾಹುಲ್ ತಾನು ಹೊಂದಿರುವ ಜವಾಬ್ದಾರಿಯಿಂದ ತೃಪ್ತನಾಗಿರುವೆ ಎಂದು ಹೇಳಿದ್ದು, ಏಕಕಾಲಕ್ಕೆ ತನಗೆ ಎರಡೆರಡು ಜವಾಬ್ದಾರಿಗಳು ಬೇಡವೆಂದು ಹೇಳಿದ್ದಾರೆ.

ಪಕ್ಷಕ್ಕೆ ಪುನರುಜ್ಜೀವನ ನೀಡಲು ಮುಂದಾಗಿರುವ ಯುವ ನಾಯಕ, ಪಕ್ಷದೊಳಕ್ಕೆ ಹೆಚ್ಚೆಚ್ಚು ಯುವಕರನ್ನು ತರಲು ಆಸಕ್ತರಾಗಿದ್ದಾರೆ. ಕರ್ನಾಟಕ ಮತ್ತು ಒರಿಸ್ಸಾಗಳಲ್ಲಿ ಪ್ರವಾಸ ಮಾಡಿರುವ ಅವರು ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಅರಿಯುವ ಪ್ರಯತ್ನ ನಡೆಸಿದ್ದಾರೆ. ಯುವಕರೊಂದಿಗೆ ಸಂವಾದ ನಡೆಸಿದ್ದಾರೆ. ಮುಂಬರುವ ಮಹಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವುದು ಅವರ ಪ್ರಸ್ತುತ ಉದ್ದೇಶವಾಗಿದೆ.

ರಕ್ತದಲ್ಲೇ ರಾಜಕೀಯ ಕರಗತವಾಗಿರುವ ಈ ನೆಹರು ವಂಶದ ಕುಡಿಗೆ, ತಾನೊಬ್ಬ ಸಮರ್ಥ ಉತ್ತರಾಧಿಕಾರಿಯಾಗಬೇಕು ಎಂಬ ಹಂಬಲ ಇರುವುದು ಸುಲಭಗ್ರಾಹ್ಯ.
ಮತ್ತಷ್ಟು
ಹೊಗೆ ನಂದಿಸಲು ಸೋನಿಯಾ ಕಾರಣ ಅಲ್ಲ: ಮೊಯಿಲಿ
ಭ್ರಷ್ಟನ ಪತ್ನಿಯೂ ತಪ್ಪಿತಸ್ಥಳೇ: ಕೋರ್ಟ್
ಸರಬ್ಜಿತ್‌ಗಾಗಿ ಕ್ಷಮೆ ಕೇಳುವೆ: ಬರ್ನೆ
ಹೈಕಮಾಂಡ್ ಕೈಯಲ್ಲಿ ದೇಶಮುಖ್ ಭವಿಷ್ಯ
ರಾಜ್ಯದಲ್ಲೂ ಸಿಖ್ಖರಿಗೆ 'ಅಲ್ಪಸಂಖ್ಯಾತರು' ಮಾನ್ಯತೆ
ಹೊಗೆ: ಕರುಣಾ ರಾಜೀನಾಮೆಗೆ ಜಯಾ ಆಗ್ರಹ