ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಜರ್ ಜನರಲ್ ವಿನಯಕುಮಾರ್ ವಿರುದ್ಧ ಆರೋಪ ದಾಖಲು
ಭಾರತೀಯ ಗುಪ್ತಚರ ಸಂಸ್ಥೆ ರಾದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಿವೃತ್ತರಾದ ಮೇಜರ್ ಜನರಲ್ ವಿನಯ್ ಕುಮಾರ್ ಸಿಂಗ್ ಅವರು ಬರೆದಿರುವ ಪುಸ್ತಕದಲ್ಲಿ ಸರಕಾರಿ ಗೌಪ್ಯ ಮಾಹಿತಿ ಹೊರಗೆಡಹಿದ ಆರೋಪದಡಿಯಲ್ಲಿ ಕೇಂದ್ರೀಯ ಗುಪ್ತಚರ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿಕೊಂಡಿದೆ.

ಮೇಜರ್ ಜನರಲ್ ವಿನಯಕುಮಾರ್ ಸಿಂಗ್ ಅವರು ಬರೆದಿರುವ "ಇಂಡಿಯಾಸ್ ಎಕ್ಸಟ್ರನಲ್ ಇಂಟಿಲಿಜೆನ್ಸ್: ಸಿಕ್ರೆಟ್ಸ್ ಆಫ್ ರಾ" ಪುಸ್ತಕದಲ್ಲಿ ಸರಕಾರದ ಗೌಪ್ಯ ಮಾಹಿತಿ ನಿಯಮಾವಳಿಯನ್ನು ಉಲ್ಲಂಘಿಸಿದ್ದು, ಕಲಂ3 (ಗೌಪ್ಯ ಮಾಹಿತಿಯ ಪ್ರಕಟಣೆ) ಮತ್ತು ಕಲಂ 5 (ಅಸಂವಿಧಾನಿಕ ರೀತಿಯಲ್ಲಿ ಮಾಹಿತಿ ವಿನಿಮಯ ಮಾಡುವುದು). ಸರಕಾರಿ ಗೌಪ್ಯತಾ ಕಾಯಿದೆಯಡಿಯ ಕಲಂ 120ರ ಅನ್ವಯ (ಅಪರಾಧಿಕ ಸಂಚು) ಮತ್ತು ಕಲಂ 409ರ ಅನ್ವಯ ಸಾರ್ವಜನಿಕ ಸೇವೆಯಲ್ಲಿರುವವನಿಂದ ನಂಬಿಕೆ ದ್ರೋಹ ಇತ್ಯಾದಿ ನಿಯಮಗಳಡಿಯಲ್ಲಿ ಸಿಬಿಐ ದೂರು ದಾಖಲು ಮಾಡಿಕೊಂಡಿದೆ.

ಸಿಬಿಐ ಪ್ರಕರಣ ದಾಖಲಿಸಿರುವುದರ ಕುರಿತು ಅಚ್ಚರಿ ವ್ಯಕ್ತಪಡಿಸಿದ ಲೇಖಕ ವಿನಯ ಕುಮಾರ್ ಸಿಂಗ್ ಅವರು ಕಳೆದ ವರ್ಷ ಪುಸ್ತಕ ಮಾರುಕಟ್ಟೆಗೆ ಬಂದ ಸಂದರ್ಭದಲ್ಲಿ ಸರಕಾರ ಏಕೆ ಮುಟ್ಟುಗೊಲು ಹಾಕಲಿಲ್ಲ ಎಂದು ಮರು ಪ್ರಶ್ನಿಸಿದ್ದಾರೆ. ಈ ಪುಸ್ತಕದಲ್ಲಿ "ರಾ" ಗುಪ್ತಚರ ಸಂಸ್ಥೆಯಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರದ ಕುರಿತು ಬೆಳಕು ಚೆಲ್ಲುತ್ತದೆ ಅಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.

ಜನರಲ್ ಸಿಂಗ್ ವಿರುದ್ಧ ಸಲ್ಲಿಸಿರುವ 13 ಪುಟಗಳ ಆರೋಪ ಪಟ್ಟಿಯಲ್ಲಿ, ರಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸರಕಾರಿ ಗೌಪ್ಯತಾ ನೀಯಮವನ್ನು ನಾಲ್ಕು ಬಾರಿ ಉಲ್ಲಂಘಿಸಿದ್ದಾರೆ. ಉದಾಹರಣೆಗೆ ಪ್ರಾಜೇಕ್ಟ್ ವಿಜನ್ 2000, ಅಂಟೆನ್ನಾಗಳ ಕುರಿತು ನೀಡಿರುವ ಮಾಹಿತಿ, ಮತ್ತು ವಿದೇಶದಲ್ಲಿ ಇರುವ ರಾ ಅಧಿಕಾರಿಗಳ ಮಾಹಿತಿಯನ್ನು ನೀಡಿ ಗೌಪ್ಯತಾ ನೀಯಮವನ್ನು ಉಲ್ಲಂಘಿಸಿದ್ದಾರೆ ಎಂದು ಸಿಬಿಐ ಆರೋಪ ಮಾಡಿದೆ.
ಮತ್ತಷ್ಟು
ನಾನು ಹೀರೋ ಅಲ್ಲ: ರಾಹುಲ್ ಗಾಂಧಿ
ಹೊಗೆ ನಂದಿಸಲು ಸೋನಿಯಾ ಕಾರಣ ಅಲ್ಲ: ಮೊಯಿಲಿ
ಭ್ರಷ್ಟನ ಪತ್ನಿಯೂ ತಪ್ಪಿತಸ್ಥಳೇ: ಕೋರ್ಟ್
ಸರಬ್ಜಿತ್‌ಗಾಗಿ ಕ್ಷಮೆ ಕೇಳುವೆ: ಬರ್ನೆ
ಹೈಕಮಾಂಡ್ ಕೈಯಲ್ಲಿ ದೇಶಮುಖ್ ಭವಿಷ್ಯ
ರಾಜ್ಯದಲ್ಲೂ ಸಿಖ್ಖರಿಗೆ 'ಅಲ್ಪಸಂಖ್ಯಾತರು' ಮಾನ್ಯತೆ