ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ರಿಮಿನಲ್‌ಗಳು ಚುನಾವಣಾ ಏಜೆಂಟರಾಗುವಂತಿಲ್ಲ
ನವದೆಹಲಿ: ಕರ್ನಾಟಕದಲ್ಲಿ ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆಗಾಗಿ ಟೊಂಕಕಟ್ಟಿರುವ ಚುನಾವಣಾ ಆಯೋಗವು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಅಭ್ಯರ್ಥಿಯ ಚುನಾವಣಾ ಏಜೆಂಟ್‌ಗಳಾಗುವಂತಿಲ್ಲ ಎಂಬ ನಿರ್ದೇಶನ ನೀಡಿದೆ.

ಈ ಕುರಿತಂತೆ ಆಯೋಗವು, ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರವೊಂದನ್ನು ಬರೆದಿದ್ದು, ಯಾವುದೇ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯುಳಿದಿದ್ದರೆ ಅಂತಹ ವ್ಯಕ್ತಿಯನ್ನು ಚುನಾವಣಾ ಏಜೆಂಟ್ ಆಗಿ ನೇಮಿಸುವಂತಿಲ್ಲ ಎಂದು ಹೇಳಿದೆ. ರಾಜ್ಯದಲ್ಲಿ ಮೇ 10, 16 ಹಾಗೂ 22ರಂದು ಮೂರು ಹಂತಗಳಲ್ಲಿ ಚುನಾವಣೆ ನಡಯಲಿದೆ.

ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿರುವ ಆಯೋಗವು ಇದರ ಉಲ್ಲಂಘನೆ ಏನಾದರೂ ನಡೆದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು, ವೀಕ್ಷಕರು ಅಥವಾ ಇತರ ಚುನಾವಣಾ ಸಂಬಂಧಿ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಆದೇಶಿಸಿದ್ದಾರೆ.

ಅಭ್ಯರ್ಥಿಗಳು ನೇಮಿಸುವ ಚುನಾವಣಾ ಏಜೆಂಟ್‌ಗಳು ಸಂಬಂಧಿತ ಪ್ರದೇಶಗಳ ನಿವಾಸಿಗಳಾಗಿರಬೇಕು ಎಂಬ ನಿರ್ದೇಶನವನ್ನು ಆಯೋಗವು ಈ ಹಿಂದೆ ನೀಡಿತ್ತು.
ಮತ್ತಷ್ಟು
ಇರಾನ್ ಅಧ್ಯಕ್ಷ ಅಹಮ್ಮದಿನೆಜಾದ್ ಆಗಮನ
ಆರ್‌ಟಿಐ ಕಾಯ್ದೆಯಡಿ ನ್ಯಾಯಾಂಗ
ಸೋನಿಯಾಗೆ ಜ್ಯೋತಿಬಸು ತಿರುಗೇಟು
ಪೊಲೀಸ್ ವಿಶೇಷಾಧಿಕಾರಿ ಆತ್ಮಹತ್ಯೆ
ಇಂಡಿಯಾ ಇಂಕ್ ಜವಾಬ್ದಾರಿ ವಹಿಸಲಿ: ಸಿಂಗ್
ಹಕ್ಕಿಜ್ವರ: ತ್ರಿಪುರಾಕ್ಕೆ ಬಾಂಗ್ಲಾದ ಭೀತಿ