ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಲಕಿಯನ್ನು ಬೆಂಕಿಗೆಸೆದ ಯುವಕ
ತನ್ನಮನೆಯ ಬದಿಯಲ್ಲಿರುವ ರಸ್ತೆಯಲ್ಲಿ ನಡೆದುಹೋದಳು ಎಂಬ ಕಾರಣಕ್ಕಾಗಿ, ಆರು ವರ್ಷದ ದಲಿತ ಸಮುದಾಯಕ್ಕೆ ಸೇರಿದ ಬಾಲಕಿಯೊಬ್ಬಳನ್ನು, ಯುವಕನೊಬ್ಬ ಬೆಂಕಿಗೆ ಎಸೆದ ಅಮಾನುಷ ಘಟನೆ ಮಥಾರಾ ಸಮೀಪ ಸಂಭವಿಸಿದೆ.

ಇಲ್ಲಿಂದ 40 ಕಿ.ಮೀ ದೂರದ, ತರೌಲಿ ಜನುಬಿ ಎಂಬ ಕೊಳಗೇರಿ ಪ್ರದೇಶದಲ್ಲಿ, ಮಂಗಳವಾರ ಈ ದುರ್ಘಟನೆ ಸಂಭವಿಸಿದೆ. ತನ್ನ ತಾಯಿಯೊಂದಿಗೆ ನಡೆದು ಹೋಗುತ್ತಿದ್ದ ಬಾಲಕಿಯನ್ನು, 18ರ ಯುವಕನೊಬ್ಬ ಉರಿಯುತ್ತಿರುವ ಬೆಂಕಿಗೆ ಎಸೆದನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಸುಮಾರು ಶೇ.50 ರಷ್ಟು ಸುಟ್ಟಗಾಯಗಳಿಂದ ಬಳಲಿರುವ ಹುಡುಗಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ.

ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ನಾಗರಿಕ ಹಕ್ಕುಗಳ ರಕ್ಷಣೆ) ಸೆಕ್ಷನ್ 3 ಮತ್ತು 4ರನ್ವಯ ಕೊಲೆಯತ್ನ ಆರೋಪ ಹೊರಿಸಿಲಾಗಿದೆ ಎಂದು ಮಥುರಾದ ಪೊಲೀಸ್ ವರಿಷ್ಠಾಧಿಕಾರಿ, ಆರ್.ಕೆ. ಚತುರ್ವೇದಿ ತಿಳಿಸಿದ್ದಾರೆ.

ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ತಡೆಯುವ ಉದ್ದೇಶದಿಂದ ಈತನ ವಿರುದ್ಧ ಇನ್ನಷ್ಟು ಕಠಿಣ ಕ್ರಮವನ್ನು ಕೈಗೊಳ್ಳುವ ಕುರಿತು ಚಿಂತಿಸಲಾಗಿದೆ ಎಂದು ಚತುರ್ವೇದಿ ಹೇಳಿದ್ದಾರೆ. ಆದರೆ, ಆ ರಸ್ತೆ ಮೇಲ್ವರ್ಗದವರ ಬಳಕೆಗೆ ಮಾತ್ರ ಮೀಸಲು ಎಂಬುದನ್ನು ತಳ್ಳಿಹಾಕಿದ್ದಾರೆ.

ಈ ರಸ್ತೆಯು ಸಾರ್ವಜನಿಕರ ಬಳಕೆಗಾಗಿ ಇದ್ದು ಇದನ್ನು ಎಲ್ಲರೂ ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಸೇತುಸಮುದ್ರಂ ವಿಚಾರಣೆ ನಾಳೆಗೆ
ಕ್ರಿಮಿನಲ್‌ಗಳು ಚುನಾವಣಾ ಏಜೆಂಟರಾಗುವಂತಿಲ್ಲ
ಇರಾನ್ ಅಧ್ಯಕ್ಷ ಅಹಮ್ಮದಿನೆಜಾದ್ ಆಗಮನ
ಆರ್‌ಟಿಐ ಕಾಯ್ದೆಯಡಿ ನ್ಯಾಯಾಂಗ
ಸೋನಿಯಾಗೆ ಜ್ಯೋತಿಬಸು ತಿರುಗೇಟು
ಪೊಲೀಸ್ ವಿಶೇಷಾಧಿಕಾರಿ ಆತ್ಮಹತ್ಯೆ