ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರ ಬಿಡುಗಡೆ ಕೋರಿ ನಳಿನಿ ಅರ್ಜಿ
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ, ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಆರೋಪಿ ನಳಿನಿ ಶ್ರೀಹರನ್, ತನ್ನನ್ನು ಆದಷ್ಟು ಶೀಘ್ರ ಬಿಡುಗಡೆಗೊಳಿಸಬೇಕೆಂದು ಕೋರಿ ಬುಧವಾರ ಮದ್ರಾಸ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾಳೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುತ್ರಿ ಪ್ರಿಯಾಂಕ ಗಾಂಧಿ ಇತ್ತೀಚೆಗಷ್ಟೇ ನಳಿಯನ್ನು ವೆಲ್ಲೂರು ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿತ್ತು. ಇದೀಗ ಪ್ರಿಯಾಂಕಾ ಭೇಟಿಯ ವಾರಗಳ ಬಳಿಕ ತನ್ನನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಕೋರಿ ನಳಿನಿ ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದಾಳೆ.

ನಳಿನಿಯ ಬಂಧಮುಕ್ತವನ್ನು ಕೋರಿ ಎಸ್.ದೊರೈಸ್ವಾಮಿ ಅವರು ನ್ಯಾಯಾಲಯಕ್ಕೆ ಬುಧವಾರದಂದು ಮನವಿ ಸಲ್ಲಿಸಿದ್ದಾರೆ. ಪ್ರಿಯಾಂಕ ಭೇಟಿಗೂ ಈ ಮನವಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ಅವರು ಈ ಮನವಿ ಸಲ್ಲಿಸುತ್ತಿರುವುದು ಕಾಕತಾಳೀಯ ಅಷ್ಟೆ ಎಂದು ಹೇಳಿದ್ದಾರೆ.
ಆಕೆಯ ಶಿಕ್ಷೆಗೆ ಸಂಬಂಧಿ ಸಿದಂತೆ ಮಧ್ಯ ಪ್ರವೇಶಿಸಿಬೇಕೆಂದು ಕೋರಿ ನಳಿನಿ ಈಗಾಗಲೇ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ 5-6 ಪತ್ರಗಳನ್ನು ಬರೆದಿರು ವುದಾಗಿ ವರದಿಗಳು ಹೇಳಿವೆ.

ದೊರೈಸ್ವಾಮಿ ಅವರು ಕೊಲೊಂಬೋ ಮೂಲದ ತಮಿಳು ವಾರಪತ್ರಿಕೆಯಾದ ವೀರಕೇಸರಿಗೆ ನೀಡಿರುವ ಸಂದರ್ಶನದಲ್ಲಿ, ರಾಜೀವ್ ಗಾಂಧಿ ಹಂತಕರನ್ನು ಪ್ರಿಯಾಂಕಾ ಕ್ಷಮಿಸಿರುವುದಾಗಿ ಹೇಳಿದ್ದಾರೆ. ಅಂತೆಯೇ ರಾಜೀವ್ ಪತ್ನಿ ಸೋನಿಯಾ ಕೂಡ ಅದೇ ತೆರನಾದ ಮನೋಭಾವ ಹೊಂದಿರಬಹುದು ಎಂದೂ ಅವರು ಅಭಿಪ್ರಾಯಿಸಿದ್ದಾರೆ.

ನಳಿನಿಯನ್ನು ಪ್ರಿಯಾಂಕ ಭೇಟಿ ಮಾಡಿರುವ ವೇಳೆ, ಪ್ರಿಯಾಂಕಳೆದುರು ಕಣ್ಣೀರು ಸುರಿಸಿದ ನಳಿನಿ ಕ್ಷಮೆ ಯಾಚಿಸಿದ್ದು, ಆ ವೇಳೆಗೆ ನಳಿನಿಯನ್ನು ಸಮಾಧಾನಿಸಿದ ಪ್ರಿಯಾಂಕ ತಾನೀಗಾಗಲೆ ಎಲ್ಲವನ್ನೂ ಮರೆತಿದ್ದೇನೆ ಎಂದು ಹೇಳಿದರೆಂದು ದೊರೆಸ್ವಾಮಿ ಹೇಳಿದ್ದಾರೆ.
ಮತ್ತಷ್ಟು
ಬಾಲಕಿಯನ್ನು ಬೆಂಕಿಗೆಸೆದ ಯುವಕ
ಸೇತುಸಮುದ್ರಂ ವಿಚಾರಣೆ ನಾಳೆಗೆ
ಕ್ರಿಮಿನಲ್‌ಗಳು ಚುನಾವಣಾ ಏಜೆಂಟರಾಗುವಂತಿಲ್ಲ
ಇರಾನ್ ಅಧ್ಯಕ್ಷ ಅಹಮ್ಮದಿನೆಜಾದ್ ಆಗಮನ
ಆರ್‌ಟಿಐ ಕಾಯ್ದೆಯಡಿ ನ್ಯಾಯಾಂಗ
ಸೋನಿಯಾಗೆ ಜ್ಯೋತಿಬಸು ತಿರುಗೇಟು