ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಡಿತ: ವಯೋಮಿತಿ ಇಳಿಸಲು ದಿಲ್ಲಿ ಸರಕಾರ ನಕಾರ
ಮದ್ಯ ಸೇವನೆಗೆ ಅರ್ಹತೆಯ ವಯೋಮಿತಿಯನ್ನು ಇಳಿಸಬೇಕು ಎಂಬ ಪ್ರಸ್ತಾಪವನ್ನು ತಿರಸ್ಕರಿಸಿರುವ ದೆಹಲಿ ಸರಕಾರ, ಪ್ರಸ್ತುತ ಇರುವ 25 ವಯಸ್ಸನ್ನೇ ಮುಂದುವರಿಸಲು ನಿರ್ಧರಿಸಿದೆ.

ಈ ಅಬಕಾರಿ ಇಲಾಖೆಯ ಈ ಪ್ರಸ್ತಾಪ ಮತ್ತು ಇತರ ವಿಷಯಗಳ ಕುರಿತು ಸೋಮವಾರ ಸಭೆ ಸೇರಿದ ದೆಹಲಿ ಸಂಪುಟವು, 25ಕ್ಕೆ ಕಡಿಮೆ ವಯಸ್ಸಿನ ತರುಣಿಯರು ಬಾರ್‌ಟೆಂಡರ್‌ಗಳಾಗಿ ಕೆಲಸ ಮಾಡುವುದಕ್ಕೂ ನಿಷೇಧ ವಿಧಿಸಿತು.

ಕುಡಿತಕ್ಕಿರುವ ಅರ್ಹತೆಯ ವಯಸ್ಸು ಇಳಿಸುವ ಬಗ್ಗೆ ಸಂಪುಟ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. 21 ವರ್ಷಕ್ಕಿಳಿಸುವುದನ್ನು ಯಾರು ಕೂಡ ಒಪ್ಪಲಿಲ್ಲ. ಹೀಗಾಗಿ 25 ವರ್ಷವೇ ಕನಿಷ್ಠ ಮಿತಿ ಆಗಿರುತ್ತದೆ. ಕುಡಿಯುವ ವಯಸ್ಸು 25 ಆಗಿರುವಾಗ, ಸಹಜವಾಗಿ ಮಹಿಳೆಯರು ಕೂಡ 25 ವರ್ಷಕ್ಕಿಂತ ಮೊದಲು ಬಾರ್‌ಟೆಂಡರ್‌ಗಳಾಗಿ ಕೆಲಸ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪೊಂದರಲ್ಲಿ, ಬಾರ್ ಟೆಂಡರಿಂಗ್ ಉದ್ಯೋಗಕ್ಕೆ ಮಹಿಳೆಯರೂ ಪ್ರವೇಶಿಸುವುದಕ್ಕೆ ಅನುಮತಿ ನೀಡಿತ್ತು.

ಅಬಕಾರಿ ಇಲಾಖೆಯ ಆದಾಯ ಹೆಚ್ಚಳ ಮತ್ತು ಯುವ ಸಮುದಾಯ ಅಕ್ರಮ ಮದ್ಯಪಾನಕ್ಕೆ ಮೊರೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಅಬಕಾರಿ ಇಲಾಖೆಯು ಮದ್ಯಪಾನದ ವಯಸ್ಸನ್ನು 25ರಿಂದ 21ಕ್ಕೆ ಇಳಿಸುವ ಪ್ರಸ್ತಾಪವನ್ನು ಸರಕಾರದ ಮುಂದಿಟ್ಟಿತ್ತು.

ಆದರೆ ಇದೊಂದು ರಾಜಕೀಯವಾಗಿ ಸೂಕ್ಷ್ಮ ವಿಚಾರವೂ ಆಗಿರುವುದರಿಂದ ಇದನ್ನು ಮುಟ್ಟದಿರಲು ಸರಕಾರ ನಿರ್ಧರಿಸಿತು. ಇದಲ್ಲದೆ ಮುಂದಿನ ವರ್ಷ ಚುನಾವಣೆಯೂ ನಡೆಯಲಿದೆ. ಜನಾಕ್ರೋಶವೂ ವ್ಯಕ್ತವಾಗು ಆತಂಕ ಕಾಂಗ್ರೆಸ್ ಸರಕಾರದ್ದು.
ಮತ್ತಷ್ಟು
ಮುಂಬೈ ಸ್ಫೋಟ ಅಪರಾಧಿ ಗಲ್ಲಿಗೆ ಸು.ಕೋ. ತಡೆ
ಸಾಂಬಾದಲ್ಲಿ ಕೂಂಬಿಂಗ್, ಪರಿಸ್ಥಿತಿ ಉದ್ವಿಗ್ನ
ಮನುಶರ್ಮಾಗೆ ಸು.ಕೋ ಜಾಮೀನು ನಕಾರ
ಚಿಕೆತ್ಸೆಗೆ ದಾಖಲಾಗಿದ್ದ ಕೈದಿ ಆಸ್ಪತ್ರೆಯಿಂದ ಪರಾರಿ
ಸೇನಾ ಸಿಬ್ಬಂದಿಗಳಿಂದ ಸಾಮೂಹಿಕ ಅತ್ಯಾಚಾರ
ಉಗ್ರರು ಸೇನೆಯ ಮಧ್ಯೆ ಘರ್ಷಣೆ:3 ಸಾವು