ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎಯಿಂದ ಸಂಸದರ ಖರೀದಿ: ಬರ್ದನ್  Search similar articles
ರಾಜಕೀಯ ಪಕ್ಷಗಳು ವಿಶ್ವಾಸಮತಕ್ಕೆ ಸಜ್ಜಾಗುತ್ತಿರುವಂತೆ, ವಿಶ್ವಾಸಮತದಲ್ಲಿ ಗೆಲುವು ಸಾಧಿಸುವ ಸಲುವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂಬುದಾಗಿ ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ದನ್ ಆರೋಪಿಸಿದ್ದು, ಪ್ರತಿ ಸಂಸದರು 25 ಕೋಟಿ ರೂಪಾಯಿಗೆ ಮಾರಾಟವಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಯುಪಿಎ ಸರಕಾರದ ವಿರುದ್ಧ ಎಡಪಕ್ಷಗಳು ಆಯೋಜಿಸಿದ್ದ ರಾಷ್ಟ್ರವ್ಯಾಪಿ ಆಂದೋಲನದ ವೇಳೆ ಮಾತನಾಡುತ್ತಿದ್ದ ಅವರು, ಯಾರು ಕೂಡ ತತ್ವ ಸಿದ್ಧಾಂತಗಳನ್ನು ಹೊಂದಿಲ್ಲ, ಇದು ಕೆಲವೇ ಕೋಟಿಗಳಲ್ಲ, 25 ಕೋಟಿ ರೂ. ವೆಚ್ಚದ ಕುದುರೆ ವ್ಯಾಪಾರವಾಗಿದೆ ಎಂದು ದೂರಿದ್ದಾರೆ.

ಏನೇ ಆದರೂ, ವಿಶ್ವಾಸವಮತ ಯಾಚನೆ ಮುಂದಾಗಿ ಆಡಳಿತಾರೂಢ ಯುಪಿಎ ಸರಕಾರವು ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂಬ ಎಡಪಕ್ಷಗಳ ಆರೋಪವನ್ನು ಕೇಂದ್ರವು ತಳ್ಳಿಹಾಕಿದ್ದು, ಇಂತಹ ಹೇಳಿಕೆಗಳು ಸಂಸದರಿಗೆ ಅವಮಾನ ಮಾಡಿದಂತಾಗುತ್ತದೆ ಎಂಬುದಾಗಿ ಸ್ಪಷ್ಟಪಡಿಸಿದೆ.

ಎ.ಬಿ.ಬರ್ದನ್ ಮುಂತಾದ ಹಿರಿಯ ನಾಯಕರಿಂದ ಜವಾಬ್ಧಾರಿಯುತ ಹೇಳಿಕೆಗಳನ್ನು ಕೇಂದ್ರವು ನಿರೀಕ್ಷಿಸುತ್ತಿದ್ದು ಇಂತಹ ಹೇಳಿಕೆಗಳು ಸಂಸದರಿಗೆ ಮಾಡುವ ಅವಮಾನವಾಗಿದೆ ಎಂದು ತಿಳಿಸಿದೆ.
ಮತ್ತಷ್ಟು
ಕಾಂಗ್ರೆಸ್ ಬೇಕು, ಮನ್‌ಮೋಹನ್ ಬೇಡ!
ಯುಪಿಎ ವಿರುದ್ಧ ಎಡಪಕ್ಷಗಳ ಸಮರ
ಚಟರ್ಚಿ ರಾಜೀನಾಮೆಗೆ ಬಸು ಸಲಹೆ
ಆಕಾಶದಿಂದ ಹಾರಿ ಮಂಟಪಕ್ಕಿಳಿದ ಮದುವಣಿಗ!
ರಾಮಮಂದಿರ ಚುನಾವಣಾ ವಿಷಯವಲ್ಲ: ಬಿಜೆಪಿ
ಕಾಬೂಲ್ ದಾಳಿಯಲ್ಲಿ ಐಎಸ್ಐ ಕೈವಾಡ- ಎಂ.ಕೆ