ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸ ಮತ: ಆಮಿಷದ ಮೊತ್ತ ನೂರು ಕೋಟಿ  Search similar articles
ಮಂಗಳವಾರ ಹತ್ತಿರವಾಗುತ್ತಿದ್ದಂತೆಯೇ ಸರಕಾರದ ಪರ ವಿರೋಧ ಬಣಗಳಲ್ಲಿ ತಳಮಳ ಶುರುವಾಗಿದೆ. ದೊಡ್ಡವರು ಎನಿಸಿಕೊಂಡವರು ಸಣ್ಣವರ ಕಾಲು ಹಿಡಿಯಬೇಕಾದ ಪರಿಸ್ಥಿತಿ. ಸಣ್ಣವರು ಕೂಡ ಈಗ ಸುಮ್ಮನೇ ಕುಳಿತಿಲ್ಲ. ಬೆಂಬಲ ಬೇಕಿದ್ದರೆ ನೂರು ಕೋಟಿ ರೂ.ಡೀಲಿಂಗ್‌‍ಗೆ ಯುಪಿಎಗೆ ಇಳಿದಿದೆ ಎಂದು ಭಿವಾನಿಯ ಸಂಸದ ಕುಲದೀಪ್ ಬಿಷ್ಣೋಯ್ ಆರೋಪ ಮಾಡಿದ್ದಾರೆ.

ರೋಹತಕ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಿದ್ದ ಬಿಷ್ಣೋಯ್ ಅವರು, ಆಮೀಷ ನೀಡಿದವರ ಹೆಸರು ಬಹಿರಂಗ ಪಡಿಸಲು ನಿರಾಕರಿಸಿದ್ದು, ಕಾಂಗ್ರೆಸ್ ಪಕ್ಷವು ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸಿ ಇಲ್ಲವೆ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಗೈರು ಹಾಜರಾದರೆ ನೂರು ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದೆ ಎಂದು ಅವರು ಆರೋಪಿಸಿದ್ದಾರೆ. ಹರಿಯಾಣದ ಭಿವಾನಿ ಲೋಕ ಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಭಿನ್ನಮತೀಯ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಷ್ಣೋಯ್ ಕಳೆದ ಒಂದು ವರ್ಷದ ಹಿಂದೆ ಪಕ್ಷದಿಂದ ಅಮಾನತ್ತುಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮಗನಾದ ಬಿಷ್ಣೋಯ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದು, 2005ರಲ್ಲಿ ಹರಿಯಾಣಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೂ ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಪದವಿಯ ಪ್ರಬಲ ಆಕಾಂಕ್ಷಿಯಾಗಿದ್ದ ಭಜನ್ ಲಾಲ್ ಅವರನ್ನು ಸೋನಿಯಾ ಗಾಂಧಿ ಕಡೆಗಣಿಸಿದರು ಎಂದು ಆರೋಪ ಮಾಡಿದ್ದರು.
ಮತ್ತಷ್ಟು
ಸಂಸದರ ಚೆಲ್ಲಾಟ: ಯುಪಿಎಗೆ ಪ್ರಾಣಸಂಕಟ
ನಮ್ಮ ಬೆಂಬಲ ಯುಪಿಎಗೆ: ಜೆಎಂಎಂ ಮುಖ್ಯಸಚೇತಕ
280 ಸದಸ್ಯರ ಬೆಂಬಲವಿದೆ: ಕಾಂಗ್ರೆಸ್
ಗೌಡರಿಂದ ಕಾಯೋ ಆಟ: ಜೆಡಿಎಸ್ ನಿರ್ಧಾರ ನಾಳೆ
ಯುಪಿಎ ವಿಶ್ವಾಸ ಮತಕ್ಕೆ ಭರ್ಜರಿ ಬೆಟ್ಟಿಂಗ್!
ವಿಶ್ವಾಸಮತ: ಸೋನಿಯಾರಿಂದ ಕಾಂಗ್ರೆಸ್ ಸಂಸದರ ಭೇಟಿ