ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರತವನ್ನು ದೇವರೂ ರಕ್ಷಿಸಲಾರ: ಸುಪ್ರೀಂಕೋರ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತವನ್ನು ದೇವರೂ ರಕ್ಷಿಸಲಾರ: ಸುಪ್ರೀಂಕೋರ್ಟ್ Search similar articles
PTI
'ಈ ದೇಶವನ್ನು ದೇವರು ಕೂಡ ರಕ್ಷಿಸಲಾರ' ಹೀಗೆಂದು ಕೇಂದ್ರ ಸರ್ಕಾರಕ್ಕೆ ಜಾಡಿಸಿದ್ದು ಸರ್ವೊಚ್ಚನ್ಯಾಯಾಲಯ, ಅಕ್ರಮವಾಗಿ ಸರ್ಕಾರಿ ಮನೆಗಳಲ್ಲಿ ವಾಸಿಸುವವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಲು ಕಾನೂನಿಗೆ ತಿದ್ದುಪಡಿ ತರುವಲ್ಲಿ ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸುಪ್ರೀಂಕೋರ್ಟ್ ತರಾಟೆಗೆ ತೆಗೆದು ಕೊಂಡ ಪರಿ ಇದು.

ಇಂತಹ ಕಾನೂನು ಕ್ರಮಗಳನ್ನು ಜಾರಿ ತರುವ ಗಡುಸುತನ ಈ ಸರ್ಕಾರಕ್ಕೆ ಇಲ್ಲ, ಸರ್ಕಾರದ ಧೋರಣೆ ನಾಚಿಕೇಡಿತನದ್ದು ಎಂದು ಅಪೆಕ್ಸ್ ಕೋರ್ಟ್ ಹೇಳಿದೆ.

ದೇವರು ಕೂಡ ಈ ದೇಶವನ್ನು ರಕ್ಷಿಸಲಾರ, ಸ್ವತಃ ದೇವರೇ ಧರೆಗಿಳಿದು ಬಂದರೂ ಕೂಡ ಈ ದೇಶದ ಹಣೆಬರಹವನ್ನು ಬದಲಿಸಲಾರ, ಭಾರತದ ಕ್ಯಾರೆಕ್ಟರ್ ಅಧಃಪತನಕ್ಕೆ ಇಳಿದಿದೆ, ನಿಜಕ್ಕೂ ನಾವು ಅಸಹಾಯಕರಾಗಿದ್ದೇವೆ ಎಂದು ನ್ಯಾಯಪೀಠದ ನ್ಯಾಯಾಧೀಶರಾದ ಬಿ.ಎನ್.ಅಗರ್‍‌‌‌ವಾಲ್ ಮತ್ತು ಜಿ.ಎಸ್.ಸಿಂಘಾವಿ ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವಾಗ ನಿಮ್ಮಲ್ಲಿ ಅಧಿಕಾರವಿರುವುದಿಲ್ಲವೊ, ಬಳಿಕ ಜನರು ನಿಮಗೆ ಅಧಿಕಾರ ಕೊಟ್ಟು ಗದ್ದುಗೆಗೆ ಏರಿಸಿದಾಗ ನೀವು ಇಂತಹ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಗಂಭೀರವಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ದೇಶದಲ್ಲಿನ ಸರ್ಕಾರಿ ನಿವಾಸಗಳಲ್ಲಿ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ವಾಸಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಂಡಿಯನ್ ಪೀನಲ್ ಕೋಡ್(ಐಪಿಸಿ)ನ 441ರ ಕಲಂಗೆ ತಿದ್ದುಪಡಿ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿರುವುದನ್ನು ಅಡಿಷನಲ್ ಸಾಲಿಸಿಟರ್ ಜನರಲ್ ಅಮರೇಂದರ್ ಸರನ್ ಅವರು ನ್ಯಾಯಾಲಯಕ್ಕೆ ತಿಳಿಸಿದಾಗ, ಸರ್ವೋಚ್ಛನ್ಯಾಯಾಲಯ ಕೇಂದ್ರ ಸರ್ಕಾರದ ಜನ್ಮ ಜಾಲಾಡಿದೆ.

ದೇಶದ ಅನೇಕ ಮಾಜಿ ಸಚಿವರುಗಳು ಸರ್ವೋಚ್ಚ ನ್ಯಾಯಲಯ ಅನೇಕ ನೋಟಿಸ್‌ಗಳನ್ನು ಜಾರಿ ಮಾಡಿದರೂ ತಮ್ಮ ನಿವಾಸಗಳನ್ನು ತೆರವುಗೊಳಿಸಲು ಸಿದ್ದರಿಲ್ಲ ಎಂದು ಮಾಧ್ಯಮಗಳ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಮತ್ತಷ್ಟು
ಗೀತೆ, ಉಪನಿಷತ್ ಉಲ್ಲೇಖವಿರುವ ಹೊಸ ಬೈಬಲ್
ಸ್ಫೋಟ: ಏಳು ಶಂಕಿತರ ರೇಖಾಚಿತ್ರ ಬಿಡುಗಡೆ
ಅಣು ಒಪ್ಪಂದ: ಸೆಪ್ಟೆಂಬರ್‌ನಲ್ಲಿ ಸಿಂಗ್-ಬುಷ್ ಭೇಟಿ?
ಗರ್ಭಪಾತದ ಸಂದಿಗ್ಧತೆಯಲ್ಲಿ ಮೆಹ್ತಾ ದಂಪತಿ
ಸದ್ಯವೇ ತೃತೀಯ ರಂಗ ರೂಪುಗೊಳ್ಳಲಿದೆ: ಕಾರಟ್
ಕೋಲ್ಕತಾ ಗ್ರಂಥಾಲಯದಿಂದ ಅಪರೂಪದ ಪುಸ್ತಕಗಳು ಕಾಣೆ