ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೇವುಡ್ ಪರಾರಿ: ವರದಿಗೆ ಗೃಹ ಸಚಿವಾಲಯ ಸೂಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೇವುಡ್ ಪರಾರಿ: ವರದಿಗೆ ಗೃಹ ಸಚಿವಾಲಯ ಸೂಚನೆ
ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಕೆಲವೇ ನಿಮಿಷಗಳ ಹಿಂದೆ ಮಾಧ್ಯಮಗಳಿಗೆ ಇಮೇಲ್ ರವಾನಿಸಲು ಬಳಸಲಾಗಿರುವ ಇಂಟರ್ನೆಟ್ ಸಂಪರ್ಕದ ಕಂಪ್ಯೂಟರ್ ಮಾಲಕ, ಅಮೆರಿಕ ಪ್ರಜೆ ಕೆನ್ ಹೇವುಡ್ ಮುಂಬಯಿ ಪೊಲೀಸರ ಶೋಧನಾ ನೋಟೀಸ್ ನಡುವೆಯೂ ಅಮೆರಿಕಕ್ಕೆ ಪರಾರಿಯಾಗಿರುವ ಬಗ್ಗೆ ಗೃಹ ಸಚಿವಾಲಯವು ವಿವರಣೆಯನ್ನು ಕೇಳಿದೆ.

ವಿಚಾರಣೆ ವೇಳೆಗೆ ಹೇವುಡ್ ತನ್ನ ಇಂಟರ್ನೆಟ್ ಸಂಪರ್ಕ ಹ್ಯಾಕ್ ಮಾಡಲಾಗಿದೆ ಎಂಬ ಹೇಳಿಕೆ ನೀಡಿದ್ದರು.

ಹೇವುಡ್ ಪರಾರಿ ಕುರಿತ ಪ್ರಾಥಮಿಕ ವರದಿಗಳ ಪ್ರಕಾರ ಇದು ಮಾನವ ತಪ್ಪು ಆಗಿದೆ. ಭಯೋತ್ಪಾದನಾ ನಿಗ್ರಹ ದಳವು ಹೇವುಡ್ ವಿಚಾರಣೆ ನಡೆಸಿ ಸುಳ್ಳುಪತ್ತೆ ಪರೀಕ್ಷೆಯನ್ನು ನಡೆಸಿತ್ತು.

ಆದರೆ, ಸುಳ್ಳು ಪತ್ತೆ ಪರೀಕ್ಷೆಯ ಫಲಿಂತಾಶದ ಮುನ್ನವೇ, ಹೇವುಡ್ ಆಗಸ್ಟ್ 17ರಂದು ಅಮೆರಿಕಕ್ಕೆ ಪರಾರಿಯಾಗಿದ್ದಾರೆ.

ಈಗ ಶೋಧನಾ ನೋಟೀಸ್ ನಡುವೆಯೂ ಹೇವುಡ್ ಪರಾರಿಯಾಗಿರುವ ಬಗ್ಗೆ ತನಿಖೆ ನಡೆಸಲು ಎಟಿಎಸ್ ದೆಹಲಿ ಪೊಲೀಸರಿಗೆ ಸೂಚಿಸಿದೆ.
ಮತ್ತಷ್ಟು
ಪಿತ ರಾಜೀವ್‌ರ ಸ್ಮರಿಸಿದ ಸುತ ರಾಹುಲ್
ಸಿಂಗೂರ್ ಪ್ರತಿಭಟನೆ ಮುಂದೂಡಿಕೆಗೆ ಎಡರಂಗ ಮನವಿ
ಅಹಮದಾಬಾದ್ ಸ್ಫೋಟ: ತಪ್ಪೊಪ್ಪಿಕೊಂಡ ಬಶೀರ್
ಕಾಶ್ಮೀರ ಕಣಿವೆಯಲ್ಲಿ ಜನಜೀವನ ಸಾಮಾನ್ಯಸ್ಥಿತಿಗೆ
ಸರಣಿ ಸ್ಫೋಟ: ಹೇವುಡ್ ಭಾರತದಿಂದ ಪರಾರಿ
ರಾಜಾರಾಂ ಮಾಯಾ ಉತ್ತರಾಧಿಕಾರಿ?