ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೇವುಡ್ ವಿರುದ್ಧ ಶೋಧನಾ ನೋಟೀಸ್ ಹಿಂದಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೇವುಡ್ ವಿರುದ್ಧ ಶೋಧನಾ ನೋಟೀಸ್ ಹಿಂದಕ್ಕೆ
ಅಮರಿಕ ಪ್ರಜೆ ಕೆನೆತ್ ಹೇವುಡ್ ವಿರುದ್ಧ ಹೊರಡಿಸಲಾಗಿದ್ದ ಶೋಧನಾ ನೋಟೀಸನ್ನು ತೆರವುಗೊಳಿಸಲುದ್ದೇಶಿಸಲಾಗಿದೆ.

ಶೋಧನಾ ನೋಟೀಸ್ ಹೊರಡಿಸಿದ್ದರೂ, ರಾಷ್ಟ್ರವನ್ನು ತೊರೆಯಲು ಹೇವುಡ್ ಯಶಸ್ವಿಯಾಗಿದ್ದು, ಇದಕ್ಕೆ ಮಹಾರಾಷ್ಟ್ರ ಪೊಲೀಸರು ಜವಾಬ್ದಾರರಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್.ಆರ್. ಪಾಟೀಲ್ ಹೇಳಿದ್ದಾರೆ.

ಹೇವುಡ್ ವಿರುದ್ಧ ಯಾವುದೇ ಬಲವಾದ ಪುರಾವೆಗಳು ಇಲ್ಲ ಎಂದು ಪಾಟೀಲ್ ಹೇಳಿದ್ದಾರೆ. ಹೇವುಡ್ ಹೇಗೆ ರಾಷ್ಟ್ರ ತೊರೆಯಲು ಶಕ್ತನಾದ ಎಂಬ ಕುರಿತು ಈ ಹಿಂದೆ ಗೃಹಇಲಾಖೆಯು ವರದಿ ಕೇಳಿತ್ತು.

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ವಲಸೆ ಅಧಿಕಾರಿಯ ಅಚಾತುರ್ಯದಿಂದಾಗಿ ಹೇವುಡ್ ಪರಾರಿಯಾಗಲು ಶಕ್ತನಾಗಿದ್ದಾನೆ ಎಂದು ಭಯೋತ್ಪಾನಾ ವಿರೋಧಿ ಪಡೆಗಳು ಹೇಳಿವೆ.

ಹೇವುಡ್‌ನ ವೀ ಫಿ ನೆಟ್ವರ್ಕನ್ನು ಹ್ಯಾಕ್ ಮಾಡಲಾಗಿದ್ದು, ಇದರ ಮೂಲಕ ಅಹಮದಾಬಾದಿನಲ್ಲಿ ನಡೆಸಲಾಗಿರುವ ಬಾಂಬ್‌ಸ್ಫೋಟದ ಕುರಿತು ದುಷ್ಕರ್ಮಿಗಳು ಇ-ಮೇಲ್ ಸಂದೇಶ ಕಳುಹಿಸಿದ್ದರೆಂದು ಹೇಳಲಾಗಿದ್ದು, ಎಟಿಎಸ್ ಈ ಕುರಿತು ತನಿಖೆ ಮುಂದುವರಿಸಿದೆ.

ಅಲ್ಲದೆ, ಅಮೆರಿಕದ ಒತ್ತಡಕ್ಕೆ ಸಿಲುಕಿ ಹೇವುಡ್ ರಾಷ್ಟ್ರ ತೊರೆಯಲು ಅವಕಾಶ ನೀಡಲಾಗಿದೆ ಎಂಬುದು ಆಧಾರರಹಿತ ಎಂದು ಮೂಲಗಳು ಹೇಳಿವೆ.
ಮತ್ತಷ್ಟು
ಸೌಹಾರ್ದ ಸಂಪ್ರದಾಯ ಸವಾಲಿಗೀಡಾಗಿದೆ: ಪಿಎಂ
ಮರುಕಳಿಸಿದ ಹಿಂಸಾಚಾರ: ಜಮ್ಮುವಿನಲ್ಲಿ ಮತ್ತೆ ಕರ್ಫ್ಯೂ
ಹೇವುಡ್ ಪರಾರಿ: ಅಧಿಕಾರಿಯ ವಜಾ
ಐಎಎಫ್‌ನಲ್ಲಿ 400 ಪೈಲೆಟ್‌ಗಳ ಕೊರತೆ
ಕಾಶ್ಮೀರಕ್ಕೆ ಸ್ವಾತಂತ್ರ್ಯ: ಅರುಂಧತಿ ಹೇಳಿಕೆ ಎಬ್ಬಿಸಿದ ವಿವಾದ
ರಾಷ್ಟ್ರಪತಿ ಆಡಳಿತವೇ ಪರ್ಯಾಯ: ಲಾಲು