ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಕ್‌ನಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ನಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ
ನವದೆಹಲಿ: ಜಮ್ಮು ಕಾಶ್ಮೀರದ ರಾಜೌರಿಯ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನವು ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿರುವ ಕುರಿತು ವರದಿಯಾಗಿದೆ.

ಗುರುವಾರ ಮುಂಜಾನೆ 6.30ರ ವೇಳೆಗೆ ಪಾಕಿಸ್ತಾನಿ ಪಡೆಗಳು ಗುಂಡುಹಾರಾಟ ನಡೆಸಿದ್ದಾರೆ. ಪಾಕ್ ಪಡೆಗಳು ಗಾಂಗರ್ ಪ್ರದೇಶದಲ್ಲಿ ಭಾರತೀಯ ಸೇನೆಯತ್ತ ಎಂಟು ಮಾರ್ಟರ್‌ಗಳನ್ನು ಮತ್ತು ಒಂದು ರಾಕೆಟ್ ಉಡಾಯಿಸಿವೆ ಎಂದು ವರದಿ ಹೇಳಿದೆ.

ಪಾಕಿಸ್ತಾನವು ಈ ವರ್ಷದ ಆದಿಯಿಂದ ಕದನ ವಿರಾಮ ಒಪ್ಪಂದ ಉಲ್ಲಂಘಿಸುತ್ತಿರುವುದು ಇದು 27ನೆ ಬಾರಿಯಾಗಿದೆ ಮತ್ತು ಈ ತಿಂಗಳಲ್ಲಿ ಇದು ಏಳನೆ ಸರ್ತಿಯ ಕದನವಿರಾಮ ಉಲ್ಲಂಘನೆಯಾಗಿದೆ.

ನವೆಂಬರ್ 2003ರಿಂದ ಜಾರಿಯಲ್ಲಿರುವ ಕದನವಿರಾಮ ಒಪ್ಪಂದವನ್ನು ಗೌರವಿಸುವಂತೆ ಭಾರತವು ಪಾಕಿಸ್ತಾನಕ್ಕೆ ಎಚ್ಚರಿಸುತ್ತಲೇ ಬಂದಿದ್ದರೂ, ಪಾಕ್ ಗಡಿನಿಯಂತ್ರಣ ರೇಖೆಯಲ್ಲಿ ಮತ್ತೆಮತ್ತೆ ಒಪ್ಪಂದದ ಉಲ್ಲಂಘನೆ ಮಾಡುತ್ತಿದೆ.

ಗಡಿಯಲ್ಲಿ ಗುಂಡುದಾಳಿ ಹಾಗೂ ಕೃಷ್ಣಘಾಟಿ, ಬಿಮರ್ಗಲ್ಲಿ, ಗುರೇಜ್, ಮೆಂದಾರ್ ಮತ್ತು ತಂಗದಾರ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಅಕ್ರಮ ನುಸುಳುವಿಕೆಯೂ ಈ ವರ್ಷದಾರಂಭದಿಂದ ತೀವ್ರಗೊಂಡಿದೆ.
ಮತ್ತಷ್ಟು
ಹೇವುಡ್ ವಿರುದ್ಧ ಶೋಧನಾ ನೋಟೀಸ್ ಹಿಂದಕ್ಕೆ
ಸೌಹಾರ್ದ ಸಂಪ್ರದಾಯ ಸವಾಲಿಗೀಡಾಗಿದೆ: ಪಿಎಂ
ಮರುಕಳಿಸಿದ ಹಿಂಸಾಚಾರ: ಜಮ್ಮುವಿನಲ್ಲಿ ಮತ್ತೆ ಕರ್ಫ್ಯೂ
ಹೇವುಡ್ ಪರಾರಿ: ಅಧಿಕಾರಿಯ ವಜಾ
ಐಎಎಫ್‌ನಲ್ಲಿ 400 ಪೈಲೆಟ್‌ಗಳ ಕೊರತೆ
ಕಾಶ್ಮೀರಕ್ಕೆ ಸ್ವಾತಂತ್ರ್ಯ: ಅರುಂಧತಿ ಹೇಳಿಕೆ ಎಬ್ಬಿಸಿದ ವಿವಾದ