ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕುಸೇಲನ್‌ಗ್ಯಾಕೋ ಟೈಮ್ ಸರಿಇಲ್ಲ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಸೇಲನ್‌ಗ್ಯಾಕೋ ಟೈಮ್ ಸರಿಇಲ್ಲ!
WD
ರಜನಿಕಾಂತ್ ಅತಿಥಿ ನಟರಾಗಿ ಅಭಿನಯಿಸಿರುವ ಸಿನಿಮಾ ಕುಚೇಲನ್(ತಮಿಳರು ಹೇಳುವಂತೆ ಕುಸೇಲನ್) ಆಗಸ್ಟ್ ಒಂದರಂದು ಬಿಡುಗಡೆಯಾಗಿದ್ದು, ಬಿಡುಗಡೆಯಾದಂದಿನಿಂದ ಒಂದಿಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದೆ. ಅಭಿಮಾನಿಗಳು, ವಿತರಕರು, ಚಿತ್ರಮಂದಿರ ಮಾಲಿಕರ ಪ್ರತಿಭಟನೆಯ ನಂತರ ಇದೀಗ ಸಿನಿಮಾದ ವಿರುದ್ಧ ಕ್ಷೌರಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಅತಿವೆಚ್ಚದ ಈ ಸಿನಿಮಾ ಬಿಡುಗಡೆ ಮುಂಚಿತವಾಗಿ, ಇದು ರಜನಿ ಸಿನಿಮಾ ಎಂಬಂತೆ ಬಿಂಬಿಸಲಾಗಿತ್ತು. ಆದರೆ, ಸಿನಿಮಾದಲ್ಲಿ ರಜನಿ ಕಾಣಿಸಿಕೊಳ್ಳುತ್ತಿರುವುದು ಕೇವಲ 30 ನಿಮಿಷ ಮಾತ್ರ. ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಉದುರಿಸಿರುವ ಕೆಲವು ಡೈಲಾಗ್‌ಗಳನ್ನು ತೆಗೆದು ಹಾಕಬೇಕು ಎಂದು ರಜನಿ ಅಭಿಮಾನಿಗಳು ಒತ್ತಾಯಿಸಿದ್ದರು.

ಅದಾದ ಬಳಿಕ ನಿರೀಕ್ಷಿತ ಆದಾಯ ಕಾಣದೆ ಸಿನಿಮಾ ಕವಚಿ ಬಿದ್ದ ಹಿನ್ನೆಲೆಯಲ್ಲಿ ನಷ್ಟಭರ್ತಿ ಮಾಡಿಕೊಡಬೇಕು ಎಂದು ವಿತರಕರು ಮತ್ತು ಸಿನಿಮಾ ಥೀಯೇಟರ್ ಮಾಲಿಕರು ಧರಣಿ ಹೂಡಿದ್ದರು. ಇದೀಗ ಸಿನಿಮಾದಲ್ಲಿ ಕ್ಷೌರಿಕರನ್ನು ಅವಮಾನಕರವಾಗಿ ಬಿಂಬಿಸಲಾಗಿದೆ ಎಂದು ಕ್ಷೌರಿಕರ ಸಂಘಟನೆ ಶುಕ್ರವಾರ ಪ್ರತಿಭಟನೆ ನಡೆಸಿದೆ.
WD


ಪಿ.ವಾಸು ನಿರ್ದೇಶನದ ಕುಚೇಲನ್‌ನಲ್ಲಿ ಪಶುಪತಿ ಮತ್ತು ವಡಿವೇಲು ಅವರುಗಳು ಕ್ಷೌರಿಕರ ಪಾತ್ರ ವಹಿಸಿದ್ದು, ಬಸ್‌ನಿಲ್ದಾಣಗಳಲ್ಲಿ ಗ್ರಾಹಕರಿಗೆ ದಾಡಿ ಮಾಡುವುದು, ಕೂದಲು ಕತ್ತರಿಸುವುದು ಮುಂತಾದ ದೃಶ್ಯಗಳಿವೆ. ಇದರಿಂದ ತಮಗೆ ಅವಮಾನವಾಗಿದೆ ಎಂದು ಕ್ಷೌರಿಕರ ಸಂಘದ ಅಧ್ಯಕ್ಷ ನಟೇಸನ್ ಹೇಳಿದ್ದಾರೆ.

ಆದರೆ, ಕ್ಷೌರಿಕ ಸಮುದಾಯದ ಈ ಆಕ್ಷೇಪಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ವಾಸು, ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಕಾಯುತ್ತಿರುವ ಜನತೆಯ ಸಮಯವನ್ನು ಹೊಸಮಾದರಿಯಲ್ಲಿ ಬಳಸಿಕೊಳ್ಳುವಂತೆ ತೋರಿಸಲಾಗಿದೆ ಅಷ್ಟೆ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಸಿನಿಮಾ ಬಿಡುಗಡೆಯಾಗಿ ನಾಲ್ಕು ವಾರಗಳ ಬಳಿಕ ಆಕ್ಷೇಪ ಎತ್ತುತ್ತಿರುವುದು ವಿಚಿತ್ರವಾಗಿದೆ ಎಂದೂ ವಾಸು ಹೇಳಿದ್ದಾರೆ.
ಮತ್ತಷ್ಟು
ಉಗ್ರರ ಸುಳಿವು: ಸೇನಾಪಡೆಗಳ ಭಾರೀ ಕಾರ್ಯಾಚರಣೆ
ಜಾರ್ಖಂಡ್: ಸೊರೆನ್ ಬಹುಮತ ಸಾಬೀತು
ಒರಿಸ್ಸಾ ಹಿಂಸಾಚಾರ ಸಿಬಿಐ ತನಿಖೆಗೆ: ಸಿಬಲ್
ನಳಿನಿ ಬಿಡುಗಡೆ ಅರ್ಜಿಗೆ ತ.ನಾ ಸರಕಾರ ವಿರೋಧ
ಒರಿಸ್ಸಾ: ಕಂಧಮಲ್‌ನಲ್ಲಿ ಮತ್ತೆ ಹಿಂಸಾಚಾರ
ಬಂದ್ ವಿರೋಧಿ ಹೇಳಿಕೆ: ಬುದ್ದ ಕ್ಷಮೆಯಾಚನೆ