ಸಂಸತ್ತು ಒಪ್ಪಿದರೆ ಫೋಟಾ ಕಾಯ್ದೆಯನ್ನು ಮತ್ತೆ ಜಾರಿಗೆ ತರುವಲ್ಲಿ ತಾನು ಮುಕ್ತವಾಗಿರುವುದಾಗಿ ಗೃಹಸಚಿವ ಶಿವರಾಜ್ ಪಾಟೀಲ್ ಹೇಳಿದ್ದಾರೆ. ಸಿಎನ್ಎನ್-ಐಬಿಎನ್ ವಾಹಿನಿಗೆ ನೀಡಲಾಗಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ರಾಜ್ಯಗಳಲ್ಲಿ ಮೋಕಾದಂತಹ ನಿರ್ದಿಷ್ಟ ಕಾನೂನುಗಳ ಮರುಜಾರಿಯ ಅಂಗೀಕಾರವನ್ನು ಅವರು ತಳ್ಳಿಹಾಕಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಾಟೀಲ್, ಪೋಟಾದ ಮರುಜಾರಿಗೆ ಸಂಸತ್ ಸದಸ್ಯರ ಬಂಬಲ ಅಗತ್ಯವಿದೆ ಎಂದು ನುಡಿಯುತ್ತಾ, ಸಂಸತ್ತಿನಲ್ಲಿ ಅಂಗೀಕಾರವಾದರೆ ಈ ಕಾನೂನನ್ನು ಮತ್ತೆ ಜಾರಿಗೆ ತರುವುದರಲ್ಲಿ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಅದಾಗ್ಯೂ, ಸಂಸತ್ತಿನ ಅಂಗೀಕಾರದ ಅಗತ್ಯವಿಲ್ಲದ ಮೋಕಾದಂತಹ ಕಾನೂನುಗಳನ್ನು ಮರುಜಾರಿಗೆ ರಾಜ್ಯಗಳಿಗೆ ಅಂಗೀಕಾರ ನೀಡುವಿರೇ ಎಂದು ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸುತ್ತಾ, ಇದೀಗಾಗಲೆ ಹಿಂತೆಗೆದುಕೊಂಡಿರುವ ಕಾನೂನಿನ ಮರುಜಾರಿಯನ್ನು ಅಂಗೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
|