ಆಂಧ್ರಪ್ರದೇಶದ ಪೂರ್ವಕರಾವಳಿಯಲ್ಲಿನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ)ಚಂದ್ರಯಾನ-1 ನೌಕೆ ಬುಧವಾರ 6.22ರ ವೇಳೆ ಯಶಸ್ವಿಯಾಗಿ ಉಡ್ಡಯನಗೊಂಡಿದ್ದು, ಈ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲೇ ನೂತನ ಮೈಲಿಗಲ್ಲು ಸ್ಥಾಪಿಸಿದೆ.ಉಡಾವಣೆಗೆ ಕೆಲಗಂಟೆಗಳ ಮುಂದೆ ಶ್ರೀಹರಿಕೋಟಾದಲ್ಲಿ ಮಳೆ ಸುರಿಯುತ್ತಿದ್ದಾರೂ ಈ ಬಗ್ಗೆ ವಿಜ್ಞಾನಿಗಳು ಹೆಚ್ಚು ಆತಂಕಗೊಂಡಿರಿರಲಿಲ್ಲ. ಆದರೆ, ಬಿರುಗಾಳಿ, ಗುಡುಗು ಮಿಂಚು ಬಂದರೆ ಯಾನವನ್ನೇ ಮುಂದೂಡಬೇಕೆನ್ನುವ ಆತಂಕವು ವಿಜ್ಞಾನಿಗಳಲ್ಲಿ ಮನೆ ಮಾಡಿತ್ತು. ಆದರೆ, ಚಂದ್ರಯಾನ-1 ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಉಡ್ಡಯನಗೊಂಡಿದ್ದು, ಭಾರತದ ಬಾಹ್ಯಾಕಾಶ ಪಾಲಿಗೆ ಈ ದಿನವನ್ನು ಸುವರ್ಣ ದಿನವನ್ನಾಗಿಸಿತು.ಚಂದ್ರಯಾನ ಯೋಜನೆ ಯಶಸ್ವಿಯಾಗುವುದರ ಜೊತೆಗೆ ಭಾರತವು ಚಂದ್ರನ ಕುರಿತು ಸಂಶೋಧನ ಮಾಡಿರುವ ಬೆರಳೆಣಿಕೆಯ ರಾಷ್ಟ್ರಗಳಾಗ ರಶ್ಯಾ, ಅಮೆರಿಕ, ಜಪಾನ್, ಚೀನಾ ಮತ್ತು ಯುರೋಪ್ ದೇಶಗಳ ಸಾಲಿಗೆ ಸೇರಿದೆ.ಈ ನೌಕೆಗೆ ಒಟ್ಟು 11 ಉಪಕರಣಗಳನ್ನು ಅಳವಡಿಸಿದ್ದು, ಇದರಲ್ಲಿ ಒಂದು ಉಪಕರಣ ಚಂದ್ರನ ಮೇಲಿಳಿಯಲಿದ್ದು, ಚಂದ್ರನ ಮೇಲ್ಮೈ ಕುರಿತು ಅಧ್ಯಯನ ಮಾಡಲಿದೆ. ಚಂದ್ರನ ಕಕ್ಷೆಯನ್ನು ಸುತ್ತಲಿರುವ ಚಂದ್ರಯಾನ-1 ಎರಡು ವರ್ಷ ಚಂದ್ರನ ಕುರಿತು ರೇಡಿಯೋ ತರಂಗಗಳ ರೂಪದಲ್ಲಿ ಮಾಹಿತಿ ರವಾನಿಸಲಿದೆ. |
|