ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಕ್ಷದ ಕಾರ್ಯಕರ್ತನ ಕೆನ್ನೆಗೆರಡು ಬಿಗಿದ ಉಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷದ ಕಾರ್ಯಕರ್ತನ ಕೆನ್ನೆಗೆರಡು ಬಿಗಿದ ಉಮಾ
ಬೆಂಕಿಚೆಂಡು, ಭಾರತೀಯ ಜನಶಕ್ತಿ ಪಕ್ಷದ ಮುಖ್ಯಸ್ಥೆ ಉಮಾಭಾರತಿ ತನ್ನ ಪಕ್ಷದ ಕಾರ್ಯಕರ್ತನೊಬ್ಬನಿಗೆ ಸಾರ್ವಜನಿಕವಾಗಿ ಕಪಾಳಕ್ಕೆ ಬಿಗಿದ ಘಟನೆ ಮಧ್ಯಪ್ರದೇಶದ ಚಿಂದ್ವಾರದಿಂದ ವರದಿಯಾಗಿದೆ.

ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಪಕ್ಷಾಧ್ಯಕ್ಷ ಅನಿಲ್ ರಾಯ್ ಎಂಬವರಿಗೆ ಉಮಾಭಾರತಿ ಥಳಿಸಿರುವುದಾಗಿ ಹೇಳಲಾಗಿದೆ. ಉಮಾಭಾರತಿ ಮತ್ತು ಇತರ ಹಲವಾರು ಮಂದಿ ಮಾತುಕತೆ ನಡೆಸುತ್ತಿದ್ದ ವೇಳೆ, ರಾಯ್ ಪದೇಪದೇ ಮೊಬೈಲ್ ಫೋನ್ ಮ‌ೂಲಕ ಕರೆನೀಡಿ ತೊಂದರೆ ನೀಡಿದ್ದರಿಂದ ಸಿಟ್ಟಿಗೆದ್ದ ಕಾರಣ ಉಮಾ ರಾಯ್ ಕೆನ್ನೆಗೆ ಬಾರಿಸಿರುವುದಾಗಿ ಹೇಳಲಾಗಿದೆ.
PTI

ಸಭೆ ನಡೆಯುತ್ತಿದ್ದ ವೇಳೆ ಬಿಟ್ಟು ಬರುವಂತೆ ರಾಯ್ ಹೇಳಿರುವುದು ಉಮಾಗೆ ಕೋಪ ಬರಿಸಿತ್ತು. ಹೊರಬಂದ ಉಮಾ ರಾಯ್ ಅವರನ್ನು ಕಾರಿನಿಂದ ಇಳಿಯಲು ಹೇಳಿ ಕೆನ್ನೆಗೆ ಬಿಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪಕ್ಷದ ಇತರ ಕಾರ್ಯಕರ್ತರ ಎದುರೇ ಈ ತಪರಾಕಿ ಪ್ರಕರಣ ನಡೆದಿದೆ. ಅದೂ ಒಂದಲ್ಲ ಎರಡೇಟು ಬಿಗಿದರಂತೆ.

ಈ ಘಟನೆಯ ಕುರಿತು ವರದಿಗಾರರ ಬಳಿ ಮಾತನಾಡಿದ ಉಮಾ, ಅನಿಲ್ ತನ್ನ ತಮ್ಮನಂತೆ, ಆತನನ್ನು ಹೊಡೆಯುವ, ಇಲ್ಲವೇ ಪ್ರೀತಿಸುವ ಹಕ್ಕು ತನಗಿದೆ ಎಂದು ಹೇಳಿದ್ದಾರೆ.

ಪ್ರತಿಯಾಗಿ, ಪತ್ರಿಕಾಗೋಷ್ಠಿಯಲ್ಲಿದ್ದ ಹಾಜರಿದ್ದ ಅನಿಲ್ ರಾಯ್ ಕೂಡ, ಇದನ್ನೇ ಪುನರುಚ್ಛರಿಸಿದ್ದು, ಉಮಾ ಭಾರತಿ ತನ್ನ ಅಕ್ಕನಂತೆ; ನನ್ನನ್ನು ಹೊಡೆಯುವ ಅಥವಾ ಪ್ರೀತಿಸುವ ಹಕ್ಕು ಅವರಿಗೆ ಇದೆ ಎಂದು ಹೇಳಿದ್ದಾರೆ.

ಈ ಎಲ್ಲ ಕಪಾಳಮೋಕ್ಷ ಧಾರಾವಾಹಿಯ ಬಳಿಕ ಉಮಾಭಾರತಿ ಅನಿಲ್ ರಾಯ್ ಅವರ ಮನೆಗೆ ಭೇಟಿ ನೀಡಿದರು ಎಂದು ವರದಿ ಹೇಳಿದೆ.

ಹಾದಿತಪ್ಪಿದ ಹೆಲಿಕಾಪ್ಟರ್
ಭಾರತೀಯ ಜನಶಕ್ತಿ ಪಕ್ಷದ ಸಂಸ್ಥಾಪಕಿ ಹಾಗೂ ರಾಷ್ಟ್ರೀಯ ಅಧ್ಯಕ್ಷೆ ಆಗಿರುವ ಉಮಾ, ಜಿಲ್ಲೆಯ ಮಾನಸದಿಂದ ಚಾಚರ್‌ಗೆ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಮಂಗಳವಾರ ತೆರಳುತ್ತಿದ್ದ ವೇಳೆ, ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹಾದಿ ತಪ್ಪಿತ್ತು.

ವಾಯು ಸಾರಿಗೆ ನಿಯಂತ್ರಣದಿಂದ ಸೂಕ್ತ ಮಾರ್ಗದರ್ಶನ ಲಭಿಸದ ಕಾರಣ ತನ್ನ ಹೆಲಿಕಾಪ್ಟರ್ ದಾರಿ ತಪ್ಪಿದ್ದು ತಾನು ಸ್ವಲ್ಪದರಲ್ಲೇ ಪಾರಾಗಿರುವುದಾಗಿ ಅವರು ಪಿಟಿಐಗೆ ತಿಳಿಸಿದ್ದಾರೆ.

ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ. ತಾನು ಹಾದಿ ತಪ್ಪಿದ ಕಾರಣ ಸುಮಾರು ಎರಡು ಗಂಟೆಗಳ ಕಾಲ ಆಕಾಶಮಾರ್ಗದಲ್ಲಿ ಸುತ್ತಾಡುತ್ತಲೇ ಇರಬೇಕಾಯಿತು ಎಂದು ಹೇಳಿದ ಅವರು ಇಂಧನ ಮುಗಿದಾಗ ಹೆಲಿಕಾಪ್ಟರ್‌ ಗಾಂಧಿ ಸಾಗರ್ ಅಣೆಕಟ್ಟಿನ ಮೇಲೆ ಹಾರಾಡುತ್ತಿತ್ತು ಎಂದು ಹೇಳಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಂದೇ ದಿನ 20 ಪ್ರನಾಳ ಶಿಶುಗಳ ಜನನ
ಸ್ಫೋಟ: ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧನ
ಮಹಾರಾಷ್ಟ್ರ ಹಿಂಸಾಚಾರ ತಡೆಗೆ ರಾಜಕೀಯ ಇಚ್ಛಾಶಕ್ತಿ ಅಗತ್ಯ: ಸು.ಕೋ
ಭೀಮಸೇನ್ ಜೋಷಿಯವರಿಗೆ ಭಾರತ ರತ್ನ
ಚಂದ್ರನ ಪಥ ಸೇರಿದ ಚಂದ್ರಯಾನ-1
ಶಿಮ್ಲಾ: ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 45 ಸಾವು