ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗೋವಾ ಸಚಿವ ಪುತ್ರ ಪೊಲೀಸ್ ವಶಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋವಾ ಸಚಿವ ಪುತ್ರ ಪೊಲೀಸ್ ವಶಕ್ಕೆ
ಜರ್ಮನ್‌ನ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಗೋವಾ ಶಿಕ್ಷಣ ಸಚಿವ ಅಟನಾಸಿಯೋ ಮಾನ್ಸೆರ್ರಟ್ಟೆ ಪುತ್ರ ರೋಹಿತ್‌ನನ್ನು ಮ‌ೂರು ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಲಾಗಿದೆ. ಆತ ಮಂಗಳವಾರ ಪೊಲೀಸರಿಗೆ ಶರಣಾಗಿದ್ದ.

ಅಪ್ರಾಪ್ತ ಜರ್ಮನ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ದೂರಿನಡಿ ಅಕ್ಟೋಬರ್ 14ರಂದು ರೋಹಿತ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ರೋಹಿತ್ ತಲೆತಪ್ಪಿಸಿಕೊಂಡಿದ್ದ. ಬಾಲಕಿಯ ತಾಯಿ ದೂರು ದಾಖಲಿಸಿದ್ದರು.

ಈತ ನವೆಂಬರ್ ಒಂದರಂದು ಪೊಲೀಸರ ಮುಂದೆ ಹಾಜರಾಗಿದ್ದರೂ, ಬಲಿಪಶು ಹುಡುಗಿ ಯಾವುದೇ ಹೇಳಿಕೆ ನೀಡದಿರುವ ಕಾರಣ ಆತನನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದರು.

ಆದರೆ ಇದಾದ ಕೆಲವೇ ಗಂಟೆಯ ಬಳಿಕ 14ರ ಹರೆಯದ ಬಾಲಕಿಯು ಮ್ಯಾಜಿಸ್ಟ್ರೇಟ್ ಒಬ್ಬರ ಎದರು ಹೇಳಿಕೆ ನೀಡಿದ್ದಳು. ಆದರೆ, ಈ ಹಿಂದೆ ಆಕೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಳು.

ಜರ್ಮನ್ ಅಪ್ರಾಪ್ತ ಹುಡುಗಿಯನ್ನು ಗೋವಾ ವೈದ್ಯಕೀಯ ಕಾಲೇಜಿನಲ್ಲಿ ತಪಾಸಣೆಗೊಳಪಡಿಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ ಎಂದು ಆಕೆಯ ವಕೀಲರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಕ್ಷದ ಕಾರ್ಯಕರ್ತನ ಕೆನ್ನೆಗೆರಡು ಬಿಗಿದ ಉಮಾ
ಒಂದೇ ದಿನ 20 ಪ್ರನಾಳ ಶಿಶುಗಳ ಜನನ
ಸ್ಫೋಟ: ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧನ
ಮಹಾರಾಷ್ಟ್ರ ಹಿಂಸಾಚಾರ ತಡೆಗೆ ರಾಜಕೀಯ ಇಚ್ಛಾಶಕ್ತಿ ಅಗತ್ಯ: ಸು.ಕೋ
ಭೀಮಸೇನ್ ಜೋಷಿಯವರಿಗೆ ಭಾರತ ರತ್ನ
ಚಂದ್ರನ ಪಥ ಸೇರಿದ ಚಂದ್ರಯಾನ-1