ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೋಸಿ ವೀಕ್ಷಣೆಗೆ ಭಾರತೀಯ ತಾಂತ್ರಿಕ ತಂಡದ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಸಿ ವೀಕ್ಷಣೆಗೆ ಭಾರತೀಯ ತಾಂತ್ರಿಕ ತಂಡದ ಭೇಟಿ
ಕೋಸಿ ನದಿಯ ಪ್ರವಾಹ ಸಮಸ್ಯೆಗೆ ಸುದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ಉನ್ನತ ಮಟ್ಟದ ತಾಂತ್ರಿಕ ತಂಡವೊಂದು ಪ್ರವಾಹ ಪ್ರದೇಶಕ್ಕೆ ಭೇಟಿ ನೀಡಿದೆ ಎಂದು ಭಾರತೀಯ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.

ಭಾರತದ ಕೇಂದ್ರೀಯ ಜಲ ಆಯೋಗದ ಅಧ್ಯಕ್ಷ ಎ.ಕೆ. ಬಾಜ ಅವರ ನೇತೃತ್ವದ ತಂಡ ಮಂಗಳವಾರ ಕಾಠ್ಮಂಡು ತಲುಪಿದೆ. ತಂಡವು ಕೋಸಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ನೇಪಾಳದಲ್ಲಿ ಭಾರತೀಯ ರಾಯಭಾರಿ ರಾಕೇಶ್ ಸೂದ್ ಅವರೂ ಉಪಸ್ಥಿತರಿದ್ದರು.

ಕಳೆದ ಆಗಸ್ಟ್ ತಿಂಗಳಲ್ಲಿ ಸುನ್ಸಾರಿ ಜಿಲ್ಲೆಯ ಪಶ್ಚಿಮ ಕೌಶಾಹದಲ್ಲಿ ಸಪ್ತಕೋಸಿ ನದಿಯ ಅಣೆಕಟ್ಟು ಒಡೆದಿದ್ದು ಉಂಟಾದ ಪ್ರವಾಹದಿಂದಾಗಿ ಹಲವಾರು ಸಾವು ನೋವುಗಳು ಸಂಭವಿಸಿದ್ದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ನೇಪಾಳದಲ್ಲಿ ಸುಮಾರು 60 ಸಾವಿರ ಮಂದಿ ಇದರ ಪ್ರಭಾವಕ್ಕೊಳಗಾಗಿದ್ದರೆ, ಬಿಹಾರದಲ್ಲಿ 3.2 ದಶಲಕ್ಷ ಮಂದಿ ತೊಂದರೆಗೀಡಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೋವಾ ಸಚಿವ ಪುತ್ರ ಪೊಲೀಸ್ ವಶಕ್ಕೆ
ಪಕ್ಷದ ಕಾರ್ಯಕರ್ತನ ಕೆನ್ನೆಗೆರಡು ಬಿಗಿದ ಉಮಾ
ಒಂದೇ ದಿನ 20 ಪ್ರನಾಳ ಶಿಶುಗಳ ಜನನ
ಸ್ಫೋಟ: ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧನ
ಮಹಾರಾಷ್ಟ್ರ ಹಿಂಸಾಚಾರ ತಡೆಗೆ ರಾಜಕೀಯ ಇಚ್ಛಾಶಕ್ತಿ ಅಗತ್ಯ: ಸು.ಕೋ
ಭೀಮಸೇನ್ ಜೋಷಿಯವರಿಗೆ ಭಾರತ ರತ್ನ