ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಂಧಿತ ಗುರು ಪಾಂಡೆಗೆ ಉನ್ನತ ಸಂಪರ್ಕಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಧಿತ ಗುರು ಪಾಂಡೆಗೆ ಉನ್ನತ ಸಂಪರ್ಕಗಳು
ಕಾನ್ಪಪುರದಲ್ಲಿ ಬಂಧನಕ್ಕೀಡಾಗಿರುವ ಜಮ್ಮು ಮಠಾಧೀಶ ದಯಾನಂದ ಪಾಂಡೆ ಅಲಿಯಾಸ್ ಸುಧಾಕರ ದ್ವಿವೇದಿ ಅಲಿಯಾಸ್ ಸ್ವಾಮಿ ಅಮೃತಾನಂದ ತೀರ್ಥ ಮಹಾರಾಜ್ ಅವರಿಗೆ ರಾಜಕಾರಣಿಗಳು, ಮಾಜಿ ಅಧಿಕಾರಿಗಳು ಮತ್ತು ಸೇನಾಧಿಕಾರಿಗಳ ಸಂಪರ್ಕಗಳನ್ನು ಹೊಂದಿದ್ದು ಕಳೆದ ಕೆಲವು ವರ್ಷಗಳಲ್ಲಿ ವೇಗವಾಗಿ ಬೆಳೆದ ಮಹತ್ವಾಕಾಂಕ್ಷಿ ವ್ಯಕ್ತಿ ಎಂಬುದಾಗಿ ಮೂಲಗಳು ತಿಳಿಸಿವೆ.

PTI
ಉತ್ತರ ಪ್ರದೇಶದವರಾದ ಪಾಂಡೆ ಕಾನ್ಪುರದಲ್ಲಿ ನೆಲೆ ಕಾಣಲು ಪ್ರಯತ್ನಿಸಿದ್ದರು. ನಂತರ ವಾರಣಾಸಿಗೆ ಸ್ಥಳ ಬದಲಾಯಿಸಿಕೊಂಡರು, 2005-06ರಲ್ಲಿ ಜಮ್ಮುವಿಗೆ ತಲುಪಿದರು. ಅಲ್ಲಿ ಅವರು ಸರ್ವಜ್ಞ ಪೀಠವನ್ನು ಸ್ಥಾಪಿಸಿದರು. ಮ‌ೂಲ ಸರ್ವಜ್ಞ ಪೀಠವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ. ಆದರೆ ಪಾಂಡೆ ಜಮ್ಮುವಿನಲ್ಲಿ ತಮ್ಮದೇ ಆದ ಪೀಠವನ್ನು ಸ್ಥಾಪಿಸಿದ್ದರು ಎಂದು ಮೂಲಗಳು ಹೇಳಿವೆ.

ಅನಾಂಗ್‌ಪುರದಲ್ಲಿ ಮಾತಾ ಚಕ್ರೇಶ್ವರ ಹರಿ ಪ್ರಭಾತ್ ದೇವಸ್ಥಾನದಲ್ಲಿ ಸಂದರ್ಶಕರು ಪಾಂಡೆಯವರನ್ನು ಭೇಟಿಯಾಗಲು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದರು, ಈ ಸಂದರ್ಶಕರಲ್ಲಿ ರಾಜಕಾರಣಿಗಳು, ಮಾಜಿ ಮಿಲಿಟರಿ ಅಧಿಕಾರಿಗಳು ಮತ್ತು ಗುಪ್ತದಳದ ಅಧಿಕಾರಿಗಳು ಸಹ ಸೇರಿದ್ದರು ಎಂದು ತನಿಖೆಯ ಸಂದರ್ಭ ತಿಳಿದು ಬಂದಿದೆ ಎನ್ನಲಾಗಿದೆ.

ಪೂರ್ವ ದೆಹಲಿಯ ಬಿಜೆಪಿ ಎಂಪಿ ಬಿ.ಎಲ್ ಶರ್ಮ ಜನವರಿ 26ರಂದು ಪಾಂಡೆ ದೇವಾಲಯದಲ್ಲಿದ್ದಾಗ ಅಲ್ಲಿಗೆ ಭೇಟಿ ನೀಡಿರುವುದಾಗಿ ದಾಖಲಾಗಿದೆ.

ಸರ್ವಜ್ಞಪೀಠದ ವೈಬ್‌ಸೈಟ್ ಪ್ರಕಾರ ಪಾಂಡೆ ಶಾರದಾ ಸರ್ವಜ್ಞ ಪೀಠದ ಜಗತ್ ಗುರು ಶಂಕರಾಚಾರ್ಯ ಸ್ವಾಮಿ ಅಮೃತಾನಂದ ದೇವ ತೀರ್ಥ ಸ್ವಾಮೀಜಿ ಆಗಿದ್ದಾರೆ. ಪಾಂಡೆ ಸ್ವಘೋಷಿತ ಶಂಕರಾಚಾರ್ಯ ಮತ್ತು ಭಾರತದ ಇತರ ಊರ್ಜಿತವಾದ ಪೀಠಗಳೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ತನಿಖಾಗಾರರು ಹೇಳುತ್ತಾರೆ.

ಮಾಜಿ ಬಿಜೆಪಿ ಆದರ್ಶವಾದಿಯಾದ ಎನ್ ಗೋವಿಂದಾಚಾರ್ಯ ಮತ್ತು ಕಾಂಗ್ರೆಸ್ ಧುರೀಣ ಮಾಕನ್ ಲಾಲ್ ಪೋತೆದಾರ್ ಅವರ ಹೆಸರುಗಳು ಸಲಹಾ ಮಂಡಳಿಯಲ್ಲಿರುವುದಾಗಿ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ. ಈ ಇಬ್ಬರೂ ಧುರೀಣರು ಸಲಹಾಮಂಡಳಿಯಲ್ಲಿ ತಮ್ಮ ಹೆಸರುಗಳನ್ನು ತಮಗೆ ಅರಿವಿಲ್ಲದಂತೆಯೇ ಸೇರಿಸಲಾಗಿದೆ ಎನ್ನುವ ಮೂಲಕ ಸ್ವಘೋಷಿತ ಸ್ವಾಮೀಜಿಯಿಂದ ದೂರ ಉಳಿಯುವ ಪ್ರಯತ್ನ ಮಾಡಿದ್ದಾರೆ. ಸಲಹಾಮಂಡಳಿಯಲ್ಲಿನ ಆರು ಹೆಸರುಗಳಲ್ಲಿ ನಾಲ್ಕು ಜನ ಪದ್ಮಶ್ರೀ ಪ್ರಶಸ್ತಿ ಪಡೆದವರಾಗಿದ್ದಾರೆ.

ವೆಬ್‌ಸೈಟ್‌ನಲ್ಲಿ ಸ್ವಾಮೀಜಿ ಆನೇಕ ಪ್ರಮುಖ ವ್ಯಕ್ತಿಗಳೊಂದಿಗೆ ಸಲಿಗೆಯಿಂದಿರುವ ಫೋಟೊಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖ ರಾಜಕಾರಣಿಗಳು ಮತ್ತು ಸಿನಿಮಾ ತಾರೆಗಳೊಂದಿಗೆ ಸ್ವಾಮೀಜಿಗೆ ನಿಕಟ ನಂಟು ಇರುವಂತೆ ಕಂಡುಬರುತ್ತದೆ.

ವೆಬ್‌ಸೈಟ್‌ನಲ್ಲಿ ಸ್ವಾಮೀಜಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ. ಬಿಜೆಪಿ ನಾಯಕ ಜಗಮೋಹನ್ ಮುಂತಾದವರೊಂದಿಗೆ ಇರುವ ಫೋಟೊಗಳು ಲಭ್ಯವಾಗಿವೆ. ಈ ಫೋಟೊಗಳು ಅಸಲಿಯೇ ಎಂಬುದು ತಿಳಿದುಬಂದಿಲ್ಲ.

ಮಾಲೆಗಾಂವ್ ಸ್ಪೋಟದ ಇನ್ನೊರ್ವ ಅರೋಪಿ ಲೆಪ್ಟಿನೆಂಟ್ ಕರ್ನಲ್ ಪುರೋಹಿತ್ ಕೂಡ ಇದೇ ದೇವಾಲಯದಲ್ಲಿ ಸ್ವಾಮಿಯನ್ನು ಭೇಟಿಯಾಗಿದ್ದರೆಂದು ಪೋಲಿಸರು ಹೇಳುತ್ತಾರೆ.

ಸ್ವಾಮೀಜಿಯ ಚಟುವಟಿಕೆಗಳು ಎಂದೂ ಸಂಶಯಕ್ಕೆ ಎಡೆ ಮಾಡಿಲ್ಲ. ಕೆಲವೊಂದು ಬಾರಿ ಸ್ಥಳೀಯರು ಸ್ವಾಮೀಜಿ ತಮ್ಮನ್ನು ಭೇಟಿಯಾಗುವುದೇ ಇಲ್ಲ ಎಂಬುದಾಗಿ ಪ್ರತಿಭಟಿಸುತ್ತಿದ್ದರು. ಸ್ವಾಮಿಜಿ ಅವರ ಚಲನವಲನಗಳು ದೇವಾಲಯಕ್ಕೆ ಸೀಮಿತವಾಗಿದ್ದವು. ಅವರು ತಮ್ಮ ವಿಮಾನ ಹಿಡಿಯಲು ನೇರವಾಗಿ ದೆಹಲಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಲೆಗಾಂವ್ ಬಂಧನ: ವಿಹಿಂಪ ರಾಷ್ಟ್ರವ್ಯಾಪಿ ಮುಷ್ಕರ
ಕಣ್ಣೂರಿನಲ್ಲಿ 125 ಕಚ್ಚಾ ಬಾಂಬುಗಳು ಪತ್ತೆ
ಚೆನ್ನೈ ವಿದ್ಯಾರ್ಥಿಗಳ ಮಾರಾಮಾರಿ: 7 ಬಂಧನ
ಬಂಧಿತ ಮಠಾಧೀಶ ಪಾಂಡೆ ಮುಂಬೈಗೆ
'ಕಮಲ'ಕಾಂತರಾಗುತ್ತಾರಾ ರಜನಿಕಾಂತ್?
ಎಟಿಎಸ್ ತನಿಖೆಗೆ ಸಿದ್ಧ: ಸಾಧ್ವಿ ಗುರು