ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಂಜೋತ ರೈಲು ಸ್ಫೋಟದಲ್ಲಿ ಸಾಧ್ವಿ ಕೈವಾಡ ತನಿಖೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಜೋತ ರೈಲು ಸ್ಫೋಟದಲ್ಲಿ ಸಾಧ್ವಿ ಕೈವಾಡ ತನಿಖೆ
ಭಾರತ-ಪಾಕಿಸ್ತಾನ ನಡುವಿನ ಸಂಜೋತಾ ರೈಲಿನಲ್ಲಿ ನಡೆಸಲಾಗಿರುವ ಬಾಂಬ್ ಸ್ಫೋಟದಲ್ಲಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಹಾಗೂ ಸಾಧ್ವಿ ಪ್ರಗ್ಯಾಸಿಂಗ್ ಕೈವಾಡ ಕುರಿತು ತನಿಖೆ ನಡೆಸಲು ಹರ್ಯಾಣ ಪೊಲೀಸ್ ತಂಡ ಮುಂಬೈ ತಲುಪಿದೆ.

ತನಿಕೆ ಭರದಿಂದ ಸಾಗುತ್ತಿರುವಂತೆ, ಪುರೋಹಿತ್ ಅವರ ಕಾಣೆಯಾಗಿರುವ ಲಾಪ್‌ಟಾಪ್‌ನಲ್ಲಿ ಮಹತ್ವದ ಮಾಹಿತಿ ಇದೆ ಎಂಬ ಕುರಿತು ಭಯೋತ್ಪಾದನಾ ವಿರೋಧಿ ದಳ(ಎಟಿಎಸ್) ತುಟಿಬಿಗಿದುಕೊಂಡಿದ್ದು, ಈ ಕುರಿತು ಯಾವುದೇ ಮಾಹಿತಿಯನ್ನು ಹೊರಗೆಡಹುತ್ತಿಲ್ಲ.

ಸಂಜೋತಾ ರೈಲು ಸ್ಫೋಟಕ್ಕೆ ಬಳಸಿರುವ ಸೂಟ್‌ಕೇಸ್ ಮತ್ತು ಅದರ ಹೊಲಿಗಳು ಹಾಗೂ ಮತ್ತಿತರ ವಸ್ತುಗಳು ಇಂದೋರ್‌ನಿಂದ ಪಡೆಯಲಾಗಿತ್ತು ಎಂಬ ಅಂಶ ಪತ್ತೆಯಾದ ಬಳಿಕ ಪ್ರಕರಣವು ನಮ್ಮನ್ನು ಇಂದೋರ್‌ಗೆ ಕರೆದೊಯ್ದಿದೆ ಎಂದು ರೈಲ್ವೇ ಪೊಲೀಸ್ ಐಜಿ ಕೆ.ಕೆಮಿಶ್ರಾ ಅವರು ಚಂಡೀಗಡದಲ್ಲಿ ತಿಳಿಸಿದ್ದಾರೆ.

ಸಂಜೋತಾ ರೈಲಿನಲ್ಲಿ ನಡೆಸಲಾಗಿದ್ದ ಅವಳಿ ಬಾಂಬ್ ಸ್ಫೋಟದಲ್ಲಿ 68 ಮಂದಿ ಸಾವನ್ನಪ್ಪಿದ್ದಾರೆ. ಪುರೋಹಿತ್‌ನ ಇಂದೋರ್ ಸಂಪರ್ಕಗಳ ಕುರಿತು ಎಟಿಎಸ್ ತನಿಖೆ ನಡೆಸುತ್ತಿದೆ.

ಏತನ್ಮಧ್ಯೆ, ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕಾನ್ಪುರದಲ್ಲಿ ಬಂಧನಕ್ಕೀಡಾಗಿರುವ ಜಮ್ಮು ಶಾರದ ಸರ್ವಜ್ಞ ಪೀಠದ ಮುಖ್ಯಸ್ಥ ದಯಾನಂದ ಪಾಂಡೆ ಅವರನ್ನು ಗುರುವಾರ ಲಕ್ನೋದಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, ಪಾಂಡೆಯವರನ್ನು ಮೂರು ದಿನಗಳಕಾಲ ಎಟಿಎಸ್ ವಶಕ್ಕೆ ನೀಡಲಾಗಿದೆ. ಎಟಿಎಸ್, ಪಾಂಡೆಯರವನ್ನು ನವೆಂಬರ್ 16ರ ಸಾಯಂಕಾಲ ನಾಲ್ಕು ಗಂಟೆಯೊಳಗಾಗಿ ನಾಸಿಕ್ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕಿದೆ.

ಪಾಂಡೆ ಅವರ ಲೆಕ್ಕಪರಿಶೋಧಕ ವಿ.ಕೆ.ಕಪೂರ್ ಮತ್ತು ಅವರ ಪುತ್ರ ಪವನ್ ಅವರನ್ನು ಜಮ್ಮುವಿನ ತ್ರಿಕುಟ ನಗರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತನಿಖೆಯ ಬಳಿಕ ಬಿಡುಗಡೆಗೊಳಿಸಲಾಗಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚತ್ತೀಸ್‌ಗಢ್ ಚುನಾವಣೆ‌: ಮತದಾನ ಆರಂಭ
ಬಂಧಿತ ಗುರು ಪಾಂಡೆಗೆ ಉನ್ನತ ಸಂಪರ್ಕಗಳು
ಮಾಲೆಗಾಂವ್ ಬಂಧನ: ವಿಹಿಂಪ ರಾಷ್ಟ್ರವ್ಯಾಪಿ ಮುಷ್ಕರ
ಕಣ್ಣೂರಿನಲ್ಲಿ 125 ಕಚ್ಚಾ ಬಾಂಬುಗಳು ಪತ್ತೆ
ಚೆನ್ನೈ ವಿದ್ಯಾರ್ಥಿಗಳ ಮಾರಾಮಾರಿ: 7 ಬಂಧನ
ಬಂಧಿತ ಮಠಾಧೀಶ ಪಾಂಡೆ ಮುಂಬೈಗೆ