ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನೋಯ್ಡದಲ್ಲಿ ಲಘು ಸ್ಫೋಟ: ಮಕ್ಕಳಿಬ್ಬರಿಗೆ ಗಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಯ್ಡದಲ್ಲಿ ಲಘು ಸ್ಫೋಟ: ಮಕ್ಕಳಿಬ್ಬರಿಗೆ ಗಾಯ
ನೋಯ್ಡಾದ ಜನನಿಬಿಡ ಸೆಕ್ಟರ್ 12-22 ವಿಭಾಗದಲ್ಲಿ ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ, ಕಸದತೊಟ್ಟಿಯಲ್ಲಿ ಸ್ಫೋಟ ಸಂಭವಿಸಿದ್ದು, ಮಕ್ಕಳಿಬ್ಬರು ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರದ ರಾಜಧಾನಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

ನೋಯ್ಡ ಪೊಲೀಸಧಿಕಾರಿ ಅಶೋಕ್ ತ್ರಿಪಾಠಿ ಅವರು ಸ್ಫೋಟ ಘಟನೆಯನ್ನು ದೃಢಪಡಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡವರನ್ನು ಸೋನು ಮತ್ತು ಮೋನು ಎಂದು ಗುರುತಿಸಲಾಗಿದೆ. ಅದೇನೇ ಇದ್ದರೂ, ಸ್ಫೋಟಕ್ಕೆ ಬಳಸಿರುವ ಸ್ಪೋಟಕಗಳ ಕುರಿತು ತಕ್ಷಣಕ್ಕೆ ಹೆಚ್ಚಿನ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ.

ಗಾಯಗೊಂಡ ಬಾಲಕರನ್ನು ನೋಯ್ದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಫಾರೆನ್ಸಿಕ್ ತಜ್ಞರು ಸ್ಫೋಟದ ಸ್ಥಳಕ್ಕೆ ತಲುಪಿದ್ದು, ಸುಳಿವಿನ ಪತ್ತೆಗೆ ತನಿಖೆಕೈಗೊಂಡಿದ್ದಾರೆ.

ಸ್ಫೋಟದ ಸ್ಥಳವನ್ನು ನೋಯ್ಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಖಚಿತಪಡಿಸಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಕ್ವಾನ
ಈ ಸ್ವಾಮಿ ವೇಷ ಮರೆಸುವಲ್ಲಿ ನಿಸ್ಸೀಮ: ಎಟಿಎಸ್
ಛತ್ತೀಸ್‌ಗಢ: ನಕ್ಸಲ್‌‌ರಿಂದ ಮತಯಂತ್ರ ಅಪಹರಣ
ಇಂದು ರಾತ್ರಿ 8.30ಕ್ಕೆ ಚಂದ್ರನ ಮೇಲಿಳಿಯಲಿರುವ ತ್ರಿವರ್ಣ
ಸಂಜೋತ ರೈಲು ಸ್ಫೋಟದಲ್ಲಿ ಸಾಧ್ವಿ ಕೈವಾಡ ತನಿಖೆ
ಛತ್ತೀಸ್‌ಗಢ ಚುನಾವಣೆ‌: ಮತದಾನ ಆರಂಭ