ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅವಮಾನ ಸಾವಿಗಿಂತಲೂ ಮಿಗಿಲು: ಸು.ಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅವಮಾನ ಸಾವಿಗಿಂತಲೂ ಮಿಗಿಲು: ಸು.ಕೋ
ಯಾವುದೇ ವ್ಯಕ್ತಿಯ ಬಂಧನವು ಆಕೆಯ ಇಲ್ಲವೆ ಆತನ ಗೌರವಕ್ಕೆ ಅಪರಿಮಿತ ಹಾನಿಯುಂಟುಮಾಡುವ ಕಾರಣ, ಮಹತ್ವದ ಕಾರಣವಿಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಬಾರದು ಇಲ್ಲವೇ ವಶಪಡಿಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನೊಳಗೊಂಡ ನ್ಯಾಯಪೀಠವು, ಅವಮಾನಕ್ಕಿಂತ ಸಾವು ಮೇಲು ಎಂಬ ಭಗವದ್ಗೀತೆಯ ಸಾಲುಗಳನ್ನು ಉದ್ಧರಿಸುತ್ತಾ ತಪ್ಪು ಬಂಧನದ ಅವಮಾನವು ಸಾವಿಗಿಂತಲೂ ಮಿಗಿಲು ಎಂದು ಹೇಳಿತು.

"ಬಂಧನದ ಅಧಿಕಾರ ಒಂದು ವಿಚಾರ. ಈ ಅಧಿಕಾರ ಚಲಾವಣೆಯ ಸಮರ್ಥನೆ ಇನ್ನೊಂದು ವಿಚಾರ. ತನ್ನ ಬಂಧನದ ಅಧಿಕಾರದೊಂದಿಗೆ ಪೊಲೀಸ್ ಅಧಿಕಾರಿಯು ಬಂಧನವನ್ನು ಸಮರ್ಥಿಸಿಕೊಳ್ಳಲು ಶಕ್ತವಾಗಿರಬೇಕು. ಪೊಲೀಸ್ ಬಂಧನ ಅಥವಾ ಜೈಲು ವ್ಯಕ್ತಿಯ ಪ್ರತಿಷ್ಠೆ ಮತ್ತು ಸ್ವಾಭಿಮಾನಕ್ಕೆ ಅಪರಿಮಿತವಾದ ಹಾನಿಯನ್ನುಂಟುಮಾಡಬಹುದು" ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು ವ್ಯಕ್ತಿಯೊಬ್ಬನ ಮುನ್ನೆಚ್ಚರಿಕಾ ಬಂಧನ ಆದೇಶವನ್ನು ಅದರ ಕಾರ್ಯಾಚರಣೆಗೆ ಮುಂಚಿತವಾಗಿಯೇ ರದ್ದುಪಡಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಮಹಾರಾಷ್ಟ್ರ ಸರಕಾರವು ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯನ್ವಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೀಪಕ್ ಬಜಾಜ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ವೇಳೆ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.

ವಿಚಾರಣೆ ವೇಳೆ ಈ ಹಿಂದಿನ ಹಲವಾರು ತೀರ್ಪುಗಳ ದೃಷ್ಟಾಂತ ನೀಡಿರುವ ನ್ಯಾಯಾಲಯವು ವ್ಯಕ್ತಿಯೊಬ್ಬನನ್ನು ಕಾನೂನುಬಾಹಿರವಾಗಿ ಬಂಧನದಲ್ಲಿರಿಸುವುದು ಸಂವಿಧಾನದ 21ನೆ (ಸ್ವಾತಂತ್ರ್ಯದ ಹಕ್ಕು) ವಿಧಿಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೋಯ್ಡದಲ್ಲಿ ಲಘು ಸ್ಫೋಟ: ಮಕ್ಕಳಿಬ್ಬರಿಗೆ ಗಾಯ
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಕ್ವಾನ
ಈ ಸ್ವಾಮಿ ವೇಷ ಮರೆಸುವಲ್ಲಿ ನಿಸ್ಸೀಮ: ಎಟಿಎಸ್
ಛತ್ತೀಸ್‌ಗಢ: ನಕ್ಸಲ್‌‌ರಿಂದ ಮತಯಂತ್ರ ಅಪಹರಣ
ಇಂದು ರಾತ್ರಿ 8.30ಕ್ಕೆ ಚಂದ್ರನ ಮೇಲಿಳಿಯಲಿರುವ ತ್ರಿವರ್ಣ
ಸಂಜೋತ ರೈಲು ಸ್ಫೋಟದಲ್ಲಿ ಸಾಧ್ವಿ ಕೈವಾಡ ತನಿಖೆ