ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಲೆಗಾಂವ್ ಸ್ಫೋಟ ಒಪ್ಪಿಕೊಂಡ ಪುರೋಹಿತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಲೆಗಾಂವ್ ಸ್ಫೋಟ ಒಪ್ಪಿಕೊಂಡ ಪುರೋಹಿತ್
ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ನಾರ್ಕೋ ಅನಾಲಿಸಿಸ್ ಪರೀಕ್ಷೆ ವೇಳೆ ಬಾಂಬ್ ಸ್ಫೋಟದ ಸಂಚು ನಡೆಸಿರುವುದನ್ನು ಒಪ್ಪಿಕೊಂಡಿರುವುದಾಗಿ ಮೂಲಗಳು ಹೇಳಿವೆ.

ಗುರುವಾರ ಎಟಿಎಸ್ ಬಂಧನಕ್ಕೀಡಾಗಿರುವ ಸ್ವಾಮಿ ದಯಾನಂದ ಪಾಂಡೆ, ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಹಾಗೂ ತಾನು ಸೇರಿ ಸ್ಫೋಟದ ಸಂಚನ್ನು ರೂಪಿಸಿರುವುದಾಗಿ ಪುರೋಹಿತ್ ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ.

ನಂದೇಡ್ ಮತ್ತು ಅಜ್ಮೀರ್ ಸ್ಫೋಟಗಳನ್ನು ಬಂಧಿತ ಸ್ವಾಮಿ ದಯಾನಂದ್ ಪಾಂಡೆ ರೂಪಿಸಿರುವುದು ಹೌದೆಂದೂ ಪುರೋಹಿತ್ ಒಪ್ಪಿಕೊಂಡಿರುವುದಾಗಿಯೂ ಮೂಲಗಳು ಹೇಳಿವೆ.

ಸಿಮಿ ಸಂಘಟನೆಯು ನಡೆಸಿರುವ ಸ್ಫೋಟಗಳ ವಿರುದ್ಧ ದ್ವೇಷ ಸಾಧಿಸಲು ತಾನು ಈ ಕೃತ್ಯಕ್ಕೆ ಇಳಿದಿರುವುದಾಗಿ ಪುರೋಹಿತ್ ಹೇಳಿದ್ದಾರೆ.

ಸ್ವಾಮಿ ದಯಾನಂದ ಪಾಂಡೆ ತನಗೆ ಪ್ರಗ್ಯಾ ಸಿಂಗ್‌ರನ್ನು ಪರಿಚಯಿಸಿರುವುದಾಗಿಯೂ ಪುರೋಹಿತ್ ಪರೀಕ್ಷೆ ವೇಳೆಗೆ ಹೇಳಿದ್ದಾರೆ. ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಇದೀಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದಾರೆ.

ಭಯೋತ್ಪಾದನಾ ಕೃತ್ಯಗಳ ಕುರಿತು ಕನಿಷ್ಠ 500 ಮಂದಿಯನ್ನು ತರಬೇತುಗೊಳಿಸಿರುವುದಾಗಿ ತಿಳಿಸಿದ ಪುರೋಹಿತ್, ಅಹಮದಾಬಾದ್ ಆಶ್ರಮವು ತಮಗೆ ಆಶ್ರಯ ನೀಡಿತ್ತು ಎಂದು ನಾರ್ಕೋ ಅನಾಲಿಸಿಸ್ ಪರೀಕ್ಷೆ ವೇಳೆ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಜಿ ಕೇಂದ್ರ ಸಚಿವ ಅಜಿತ್ ಪಾಂಜ ಇನ್ನಿಲ್ಲ
ಅವಮಾನ ಸಾವಿಗಿಂತಲೂ ಮಿಗಿಲು: ಸು.ಕೋ
ನೋಯ್ಡದಲ್ಲಿ ಲಘು ಸ್ಫೋಟ: ಮಕ್ಕಳಿಬ್ಬರಿಗೆ ಗಾಯ
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಕ್ವಾನ
ಈ ಸ್ವಾಮಿ ವೇಷ ಮರೆಸುವಲ್ಲಿ ನಿಸ್ಸೀಮ: ಎಟಿಎಸ್
ಛತ್ತೀಸ್‌ಗಢ: ನಕ್ಸಲ್‌‌ರಿಂದ ಮತಯಂತ್ರ ಅಪಹರಣ