ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜೈಲಿನಲ್ಲಿರಬೇಕಿದ್ದವರ ಕೈಯಲ್ಲಿ ಆಡಳಿತವಿದೆ: ರಾಮ್‌ದೇವ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೈಲಿನಲ್ಲಿರಬೇಕಿದ್ದವರ ಕೈಯಲ್ಲಿ ಆಡಳಿತವಿದೆ: ರಾಮ್‌ದೇವ್
ಹಿಂದೂ ಭಯೋತ್ಪಾದನೆ ಎಂಬ ಹೆಸರಿನಲ್ಲಿ ಹಿಂದೂಗಳನ್ನು ಗುರಿಯಾಗಿಸುವ ಸಂಚನ್ನು ಕೇಂದ್ರ ಸರಕಾರ ಹೂಡಿದೆ ಎಂದು ದೂರಿದ ಘಟಾನುಘಟಿ ಕೇಸರಿ ತಲೆಗಳು, ಮುಂಬರುವ ಚುನಾವಣೆಯಲ್ಲಿ ಇಂತವರಿಗೆ ತಕ್ಕಪಾಠ ಕಲಿಸಿ ಆಡಳಿತದಲ್ಲಿ ಬದಲಾವಣೆ ತರಬೇಕು ಎಂದು ಕರೆನೀಡಿದವು.

ಯೋಗಗುರು ಬಾಬಾ ರಾಮ್‌ದೇವ್, ಸಂಘಪರಿವಾರದ ನಾಯಕರುಗಳಾದ ಅಶೋಕ್ ಸಿಂಘಾಲ್, ಸಾಧ್ವಿ ರಿತಂಬರ, ಬಿಜೆಪಿ ಆಡಳಿತವಿರುವ ಉತ್ತರಖಂಡ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಭಾಗವಸಿದ್ದ ಸಮಾವೇಶದಲ್ಲಿ, ತನಿಖೆಯ ಹೆಸರಿನಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಗಿದೆ ಎಂದು ಆಪಾದಿಸಲಾಯಿತು.

ಧಾರ್ಮಿಕ ಮುಖಂಡರ ವಿರುದ್ಧದ ಅಪಪ್ರಚಾರವನ್ನು ನಿಲ್ಲಿಸದೇ ಇದ್ದಲ್ಲಿ, ಇದರ ವಿರುದ್ಧ ತಮ್ಮ ಪಕ್ಷ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಸಮಾವೇಶಕ್ಕೆ ಕೊನೆಯಲ್ಲಿ ಬಂದ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ನುಡಿದರು. ಏತನ್ಮಧ್ಯೆ, ಕೆಟ್ಟ ಹವೆಯ ಕಾರಣ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ, ಚಂಡೀಗಡದಲ್ಲಿ ಮಾತನಾಡುತ್ತಾ "ಕಾಂಗ್ರೆಸ್ ಹಿಂದೂ ಭಯೋತ್ಪಾದನೆ ಎಂಬ ಶಬ್ದವನ್ನು ಹುಟ್ಟುಹಾಕಿದೆ. ಬಿಜೆಪಿ ಎಂದಿಗೂ ಮುಸ್ಲಿಂ ಭಯೋತ್ಪಾದನೆ ಎಂಬ ಶಬ್ದವನ್ನು ಬಳಸಲಿಲ್ಲ" ಎಂದು ಹೇಳಿದ್ದಾರೆ.

"ಯಾರು ಜೈಲಿನಲ್ಲಿರಬೇಕಿತ್ತೂ, ಇಲ್ಲ ಯಾರನ್ನು ಗಲ್ಲಿಗೇರಿಸಬೇಕಿತ್ತೊ ಅಂತಹವರ ಕೈಯಲ್ಲಿ ಇಂದು ಅಧಿಕಾರವಿದೆ. ಮುಂಬರುವ ಮೂರು ತಿಂಗಳಲ್ಲಿ ಅಧಿಕಾರಕ್ಕಾಗಿ ಭಾರೀ ಹೋರಾಟ ನಡೆಯಲಿದೆ. ರಾಷ್ಟ್ರಕ್ಕೆ ಬಹುದೊಡ್ಡ ಬದಲಾವಣೆಯ ಅಗತ್ಯವಿದ್ದು, ಜನಶಕ್ತಿ ಮತ್ತು ಸಂತಶಕ್ತಿ(ಧಾರ್ಮಿಕ ಗುರುಗಳು) ಒಂದಾಗಬೇಕಿದೆ. ಕಣ್ಮರೆಯಾಗಿರುವ ಭಾರತದ ವೈಭವ ಮರಳುವ ತನಕ ಈ ಪ್ರಕ್ರಿಯೆ ನಿಲ್ಲದು" ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ಹೆಚ್ಚಿನ ನಾಯಕರು, ಬಂಧನದಲ್ಲಿರುವ ಪ್ರಗ್ಯಾ ಸಿಂಗ್ ಅವರು ಖಾವಿಧಾರಿ ಸನ್ಯಾಸಿನಿಯಾಗಿರುವ ಕಾರಣಕ್ಕೆ ಅವರನ್ನು ಬೇಟೆಯಾಡಲಾಗಿದೆ. ಒಂದೊಮ್ಮೆ ಅವರ ಪಾಲ್ಗೊಳ್ಳುವಿಕೆ ಸಾಬೀತಾದರೂ. ಇದನ್ನು ಇಸ್ಲಾಮಿಕ್ ಉಗ್ರವಾದಕ್ಕೆ ಸಮೀಕರಿಸಲಾಗದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
60 ಕೆಜಿ ಆರ್‌ಡಿಎಕ್ಸ್‌ ಬಳಕೆ: ಎಟಿಎಸ್‌ನಿಂದ ನಿರಾಕರಣೆ
ಮುಂಬೈ ಪ್ರಾರ್ಥನಾ ಮಂದಿರದಾಳಿ: 8 ಬಂಧನ
ಜಮ್ಮು ಕಾಶ್ಮೀರದಲ್ಲಿ ಮತದಾನ ಆರಂಭ
ಕಣಿವೆ ರಾಜ್ಯದ ಮತದಾನಕ್ಕೆ ಕ್ಷಣಗಣನೆ
ಬಿಜೆಪಿ ಶಾಸಕ ಯೋಗಿ ಆತ್ಮಹತ್ಯೆಗೆ ಶರಣು
ಶೀಘ್ರವೇ ಲೋಕಸಭೆ ಚುನಾವಣೆ ಇಲ್ಲ: ಪ್ರಧಾನಿ