ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಳ್ಳಾರಿ ನೆಪ: ಬಿಗಡಾಯಿಸಿದ ಪರಿಸ್ಥಿತಿ
ಬಳ್ಳಾರಿಯಲ್ಲಿ ಇತ್ತೀಚಿಗೆ ನಡೆದ ಬೆಳವಣಿಗೆಗಳನ್ನು ನೆಪವಾಗಿಟ್ಟುಕೊಂಡು ಅಧಿಕಾರ ಹಸ್ತಾಂತರ ಸಾಧ್ಯವಿಲ್ಲ ಎಂದಿರುವ ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಶಾಸಕರು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮುಂದುವರೆಯಬೇಕು ಎಂಬ ಹಠದೊಂದಿಗೆ ಬಿಕ್ಕಟ್ಟು ಜಟಿಲಗೊಂಡಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿರುವ ಜೆಡಿಎಸ್ ಮುಖಂಡರು, ಶಾಸಕರು, ಸಚಿವರು ಹಾಗೂ ಪಕ್ಷದ ವರಿಷ್ಠರು ಪಾಲ್ಗೊಳ್ಳುವ ಪಕ್ಷದ ರಾಷ್ಟ್ತ್ರೀಯ ಕಾರ್ಯಕಾರಿಣಿ ಸಭೆ ಅರಮನೆ ಮೈದಾನದಲ್ಲಿ 4 ರಂದು ನಡೆಯಲಿದೆ. ಸಭೆ ನಿರ್ಣಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಂತರ ಅಧಿಕಾರ ಹಸ್ತಾಂತರದ ಮಾತು ಎಂದು ದೇವೇಗೌಡರು ಹೇಳಿದ್ದಾರೆ.

ಹೀಗಾಗಿ ಯಾವುದೇ ಕಾರಣಕ್ಕೂ ಅಧಿಕಾರ ಹಸ್ತಾಂತರ ಅಸಾಧ್ಯ ಎಂಬ ತನ್ನ ನಿಲುವನ್ನು ಜೆಡಿಎಸ್ ಬಾಯಿಬಿಟ್ಟು ಹೇಳದೇ ಸ್ಪಷ್ಟಪಡಿಸಿದೆ.ಸೋಮವಾರ ಸಂಜೆ ನಡೆದ ಸಚಿವ ಸಂಪುಟವೇ ಈ ಅವಧಿಯ ಅಂತಿಮ ಸಭೆ ಎಂದು ಭಾವಿಸಿದ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ಸರ್ಕಾರಕ್ಕೆ ಬೆಂಬಲ ಸೂಚಿಸುವ ಪತ್ರ ನಮಗೆ ಕೊಡಿ ಎಂದು ಕೇಳಿದ್ದಾರೆ.

ಆದರೆ ನೋಡೋಣ, ಅದರಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿ ಅಡ್ಡಗೋಡೆಮೇಲೆ ದೀಪವಿಟ್ಟಂತೆ ಕುಮಾರಸ್ವಾಮಿ ಮಾತನಾಡಿದ್ದಾರೆ. ಬಳ್ಳಾರಿ ಗಣಿಯ ರೆಡ್ಡಿ ತಮ್ಮ ಮತ್ತು ತಮ್ಮ ತಂದೆಯವರ ವಿರುದ್ಧ ಮಾತನಾಡಿದಾಗ ಬಿಜೆಪಿ ನಾಯಕರು ಮೌನ ವಹಿಸಿದ್ದೇಕೆಂದು ಕುಮಾರಸ್ವಾಮಿಚುಚ್ಚು ಮಾತನ್ನಾಡಿದರು. ಇದರಿಂದ ಬಿಜೆಪಿ ಮುಖಂಡರು ತೀವ್ರ ಅಸಮಾಧಾನಗೊಂಡರು.
ಮತ್ತಷ್ಟು
ಅಧಿಕಾರ ಹಸ್ತಾಂತರ ಅವಾಂತರ
ಕರ್ನಾಟಕದಲ್ಲಿ ಜೆಡಿಎಸ್ ಅಧಿಪತ್ಯ
ಜೆಡಿಎಸ್ ರಾಗ ಬದಲು
ಬಿಜೆಪಿ ಸಚಿವರ ಸಾಮೂಹಿಕ ರಾಜೀನಾಮೆ?
ವಿದ್ಯುತ್ ಬೇಡಿಕೆ ಪೂರೈಕೆಗೆ ಹೊಸ ಯೋಜನೆ
ಜಯ್ನಾ ಕೊಠಾರಿಗೆ ಪಾವಟೆ ಫೆಲೋಶಿಪ್